Advertisement

ಕೊಡೆಮುರುಗ‌ ಚಿತ್ರದ ಕಲರ್ ಫುಲ್, ಅದ್ಧೂರಿ ವಿಡಿಯೋ ಸಾಂಗ್ ರಿಲೀಸ್

03:57 PM Apr 08, 2020 | Naveen |

ಸ್ಯಾಂಡಲ್ ವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಕೊಡೆಮುರುಗ ಚಿತ್ರದ ‘ನಾನು ಕೊಡೆಮುರಗ’ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಸ್ಯಾಂಡಲ್ ವುಡ್ ಹಿಟ್ ಜುಗಲ್ಬಂಧಿ ಯೋಗರಾಜ್ ಭಟ್ ಸಾಹಿತ್ಯ, ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿದೆ. ಎಂ. ಎಸ್. ತ್ಯಾಗರಾಜ್ ಮ್ಯೂಸಿಕ್, ಭೂಷಣ್ ಕೋರಿಯೋಗ್ರಫಿ  ಈ ಹಾಡಿಗಿದ್ದು ಕಲರ್ ಫುಲ್ ಸೆಟ್ ನಲ್ಲಿ ಮುನಿಕೃಷ್ಣ, ಸುಬ್ರಹ್ಮಣ್ಯ ಪ್ರಸಾಧ್, ಅಶೋಕ್, ಪಲ್ಲವಿ ಹೆಜ್ಜೆ ಹಾಕಿದ್ದಾರೆ. ಅದ್ಧೂರಿಯಾಗಿ ಮೂಡಿಬಂದಿರೋ ‘ನಾನು ಕೊಡೆಮುರುಗ’ ಹಾಡು‌ ಎಲ್ಲೆಡೆ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

Advertisement

ಸುಬ್ರಹ್ಮಣ್ಯ ಪ್ರಸಾದ್ ನಿರ್ದೇಶನದಲ್ಲಿ ಕೊಡೆಮುರುಗ ಚಿತ್ರ ಮೂಡಿಬಂದಿದ್ದು ಸಖತ್ ಬಝ್ ಕ್ರಿಯೇಟ್ ಮಾಡಿದೆ. ಹೊಸ ಟ್ರೆಂಡ್ ಬರೆಯಲು ಸುಬ್ರಮಣ್ಯ ಪ್ರಸಾದ್ ರೆಡಿಯಾಗಿದ್ದು ನಿರ್ದೇಶನದ ಜೊತೆ ಚಿತ್ರದ‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಮುನಿಕೃಷ್ಣ, ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಹೀರೋ,ಹೀರೋಯಿಸಂ, ಡೈಲಾಗ್. ಹೀರೋಯಿನ್  ಕನ್ಸೆಪ್ಟ್ ಗೆ ವಿರುದ್ಧವಾಗಿ ಬೇರೆಯದ್ದೇ ಪ್ರಯತ್ನವನ್ನು‌ ಈ ಚಿತ್ರದ ಮೂಲಕ ನಿರ್ದೇಶಕರು ತೆರೆ ಮೇಲೆ ತರಲು ಹೊರಟಿರೋದನ್ನ ಮೆಚ್ಚಲೇಬೇಕು.

ಕೆ ಆರ್ ಕೆ ಪ್ರೊಡಕ್ಷನ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ಕೆ.ರವಿಕುಮಾರ್, ಅಶೋಕ್ ಶಿರಾಲಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ತ್ಯಾಗರಾಜ್ ಸಂಗೀತ ನಿರ್ದೇಶನ, ರುದ್ರಮುನಿ ಕ್ರಿಯೇಟಿವ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next