Advertisement
ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ಬಾಳುಗೋಡುವಿನ ಸಭಾಂಗಣದಲ್ಲಿ ನಡೆಯಿತು.
Related Articles
ಜೂ. 18 ಮತ್ತು 19ರಂದು ತಲಕಾವೇರಿಯಲ್ಲಿ ನಡೆಯುವ ಅಷ್ಟಮಂಗಲ ಪ್ರಶ್ನೆಯ ಪರಿಹಾರ ಸೂಚಕ ಕಾರ್ಯಕ್ರಮದಲ್ಲಿ ಎಲ್ಲ ಕೊಡವ ಸಮಾಜಗಳ ಪ್ರತಿನಿಧಿಗಳು ಪಾಲ್ಗೊಳ್ಳಬೇಕೆಂದು ಒಕ್ಕೂಟದ ಪ್ರಮುಖರು ಮನವಿ ಮಾಡಿಕೊಂಡರು.
ಮುಂಬರುವ ಸಾಲಿನಲ್ಲಿ ಹರಿಹರ ಮುಕ್ಕಾಟಿರ ಕುಟುಂಬ ನಡೆಸುವ ಕೊಡವ ಹಾಕಿ ಹಬ್ಬ ಸೇರಿದಂತೆ ಎಲ್ಲಾ ಕೊಡವ ಕುಟುಂಬದ ಹಾಕಿ ಹಬ್ಬದ ಆಯೋಜನೆಗೆ ಒಕ್ಕೂಟ ಸಂಪೂರ್ಣ ಸಹಕಾರ ನೀಡಲು ಸಿದ್ಧವಿದೆ ಎಂದು ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಭರವಸೆ ನೀಡಿದರು.ಎಲ್ಲ ಕೊಡವ ಸಮಾಜಗಳ ಸದಸ್ಯರು ಕೊಡವ ಸಮಾಜಗಳ ಒಕ್ಕೂಟದ ಸದಸ್ಯರಾಗಿರುತ್ತಾರೆ ಎಂದು ಅವರು ಇದೇ ಸಂದರ್ಭ ಸ್ಪಷ್ಟಪಡಿಸಿದರು.
Advertisement
ಸಭೆಯಲ್ಲಿ ಇಲ್ಲಿಯವರೆಗೆ ನಡೆದ ಒಕ್ಕೂಟದ ಸಾಧನೆ ಹಾಗೂ ಮುಂದಿನ ಕಾರ್ಯ ಸಾಧನೆಗಳ ವಿವರವನ್ನು ನೀಡಲಾಯಿತು.ಪರಿಸರ ದಿನಾಚರಣೆ
ಸಭೆಗೂ ಮುನ್ನ ಕೊಡವ ಸಮಾಜದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸೇರಿದಂತೆ ಎಲ್ಲಾ ಸದಸ್ಯರು ಗಿಡ ನೆಡುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ವೇದಿಕೆಯಲ್ಲಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಡ ರವಿ ಉತ್ತಪ್ಪ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೆ.ಎಸ್. ದೇವಯ್ಯ, ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಮಾಲೇಟಿರ ಅಭಿಮನ್ಯು ಕುಮಾರ್, ಬಾಳೆಲೆ ಕೊಡವ ಸಮಾಜದ ಅಧ್ಯಕ್ಷರಾದ ಮಲಚ್ಚೀರ ಬೋಸ್ ಚಿಟ್ಟಿಯಪ್ಪ, ಜಂಟಿ ಕಾರ್ಯದರ್ಶಿ ಕೋದಂಡ ಸನ್ನು ಉತ್ತಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಚೇರಿಯಪಂಡ ಕಶ್ಯಪ್ಪ ಹಾಗೂ ಪೋಷಕ ಸದಸ್ಯರಾದ ಎಂ.ಸಿ. ನಾಣಯ್ಯ, ಮಲ್ಲೆಂಗಡ ದಾದ ಬೆಳ್ಳಿಯಪ್ಪ, ದಾನಿ ಸದಸ್ಯರಾದ ಬೊಟ್ಟೋಳಂಡ ಮಿಟ್ಟು ಚಂಗಪ್ಪ, ಪೊಮ್ಮಕ್ಕಡ ಸಂಘದ ಅಧ್ಯಕ್ಷರಾದ ಚೆರಿಯಪಂಡ ಇಮ್ಮಿ ಉತ್ತಪ್ಪ ಸೇರಿದಂತೆ ಹಲವು ದಾನಿ ಸದಸ್ಯರು, ಕೊಡವ ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಒಕ್ಕೂಟದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.ಕಳ್ಳಿಚಂಡ ಶಾಲಿನಿ ಕಾರ್ಯಪ್ಪ ಪ್ರಾರ್ಥಿಸಿ, ವಾಟೇರಿರ ಶಂಕರಿ ಪೂವಯ್ಯ ವಂದಿಸಿದರು.