Advertisement
ಮಹಾತ್ಮಾ ಗಾಂಧಿ ಜಯಂತಿಯಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಮತ್ತು ಅಕಾಡೆಮಿ ಸದಸ್ಯರು ಮಕ್ಕಂದೂರಿನ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಬೆಳಗ್ಗಿನಿಂದ 11 ಗಂಟೆಯವರೆಗೆ ಸ್ವತ್ಛತಾ ಶ್ರಮದಾನ ನಡೆಸಿದರು. ಬಳಿಕ ಹಾನಿ ಪೀಡಿತ ಪ್ರದೇಶಗಳತ್ತ ಸಾಗಿ, ಅಲ್ಲಿನ ಸಂತ್ರಸ್ತರನ್ನು ಖುದ್ದು ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿದರು.
Related Articles
Advertisement
ಅಕಾಡೆಮಿಯ ಮಾಜಿ ಸದಸ್ಯೆ ಮುಕ್ಕಾಟಿರ ತಂಗಮ್ಮ ಅವರನ್ನು ಅಕಾಡೆಮಿ ತಂಡ ಭೇಟಿಯಾಗಿ ಸಾಂತ್ವನ ನುಡಿಯಿತು. ಪ್ರಾಕೃತಿಕ ವಿಕೋಪದಲ್ಲಿ ತಂಗಮ್ಮ ಅವರ ಪತಿ ಸಾಬು ಅವರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ನೊಂದ ತಂಗಮ್ಮ ಅವರಿಗೆ ಬದುಕಿನ ಬಗ್ಗೆ ವಿಶ್ವಾಸ ತುಂಬುವ ಪ್ರಯತ್ನವನ್ನು ಅಕಾಡೆಮಿ ತಂಡ ಮಾಡಿತು.ಅಕಾಡೆಮಿ ತಂಡ ಭೇಟಿ ನೀಡಿದ ಗ್ರಾಮೀಣ ಭಾಗಗಳಲ್ಲಿನ ಬಹುತೇಕ ಸಂತ್ರಸ್ತರು, ನಾವು ಮತ್ತೆ ನಮ್ಮ ಗ್ರಾಮಗಳಲ್ಲಿ ವಾಸಿಸಲು ಸಾಧ್ಯವೆ ಎನ್ನುವ ಬಗ್ಗೆ ತಾಂತ್ರಿಕವಾದ ಮಾಹಿತಿಯನ್ನು ಇಲ್ಲಿಯವರೆಗೆ ಆಡಳಿತ ವ್ಯವಸ್ಥೆ ಲಿಖೀತ ರೂಪದಲ್ಲಿ ನೀಡಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಮುಂದಿನ ನಾಲ್ಕೆçದು ತಿಂಗಳ ಬಳಿಕ ನಮ್ಮ ಪಾಡೇನು ಎಂದು ನೊಂದು ನುಡಿದ ಪ್ರಸಂಗವೂ ಎದುರಾಯಿತು.ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಗ್ರಾಮೀಣ ಭಾಗಗಳಿಗೆ ಅಕಾಡೆಮಿ ಸದಸ್ಯ ಹಂಚೆಟ್ಟಿರ ಮನು ಮುದ್ದಯ್ಯ ಅವರ ಮುಂದಾಳತ್ವದಲ್ಲಿ ತೆರಳಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತಂಡದಲ್ಲಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅವರೊಂದಿಗೆ ಸದಸ್ಯರಾದ ಅಮ್ಮುಣಿಚಂಡ ಪ್ರವೀಣ್, ಉಮೇಶ್ ಕೇಚಮ್ಮಯ್ಯ, ಬೀಕಚಂಡ ಬೆಳ್ಯಪ್ಪ, ಬೊಳ್ಳಾಜಿರ ಅಯ್ಯಪ್ಪ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಆಂಗೀರ ಕುಸುಮ್, ಚಂಗುಲಂಡ ಸೂರಜ್, ಸುಳ್ಳಿಮಾಡ ಭವಾನಿ, ಎಚ್. ಗಣಪತಿ, ಕುಡಿಯರ ಶಾರ¨ದಾ, ಆಪಟ್ಟಿರ ಟಾಟು ಮೊಣ್ಣಪ್ಪ, ಅಜ್ಜಮಾಡ ಕುಶಾಲಪ್ಪ ಅವರಿದ್ದರು. ಮನೆ ಬೇಕು: ಮಳೆಹಾನಿ ಸಂತ್ರಸ್ತರ ಬೇಡಿಕೆ
ಪ್ರಾಕೃತಿಕ ವಿಕೋಪದಿಂದ ಜರ್ಜರಿತವಾಗಿರುವ ಮೂವತ್ತೂಕ್ಲು, ಶಿರಂಗಳ್ಳಿ ಗ್ರಾಮಗಳಿಗೆ ಅಕಾಡೆಮಿ ತಂಡ ಭೇಟಿ ನೀಡಿದ ಸಂದರ್ಭ, ಗುಡ್ಡ ಕುಸಿತದ ಪ್ರಾಕೃತಿಕ ವಿಕೋಪಗಳಿಂದ ಮಳೆಗಾಲದ ಅವಧಿಯಲ್ಲಿ ಮತ್ತೆ ತಮ್ಮ ಗ್ರಾಮಗಳಲ್ಲಿ ವಾಸಿಸುವುದು ಅಸಾಧ್ಯವೆಂದು ಸಂತ್ರಸ್ತರು ಅಳಲು ತೋಡಿಕೊಂಡರು. ತಮಗೆ ಮಾದಾಪುರದ ತೋಟಗಾರಿಕೆ ಜಾಗದಲ್ಲಿ ನಿವೇಶನ ಮತ್ತು ಮನೆಯನ್ನು ಒದಗಿಸಿಕೊಟ್ಟಲ್ಲಿ, ಅಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುವುದರೊಂದಿಗೆ, ಅಲ್ಲಿದ್ದುಕೊಂಡು ಗ್ರಾಮದಲ್ಲಿ ಉಳಿದಿರುವ ತಮ್ಮ ಆಸ್ತಿ ಪಾಸ್ತಿಗಳನ್ನು ನಿರ್ವಹಣೆ ಮಾಡಲು ಸಾಧ್ಯವೆಂದು ಅಭಿಪ್ರಾಯಪಟ್ಟರು.