Advertisement
ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯವಿರುವ ಸಮಿತಿಗಳ ರಚನೆ ಮತ್ತು ಅತಿಥಿ ಗಣ್ಯರ ಆಹ್ವಾನದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಯಿತು.
Related Articles
Advertisement
ಸಭೆಯಲ್ಲಿ ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಚೆರಿಯಪಂಡ ರಾಜ ನಂಜಪ್ಪ, ಬಚಾರಣಿಯಂಡ ಅಪ್ಪಣ್ಣ, ಐಮುಡಿಯಂಡ ರಾಣಿ ಮಾಚಯ್ಯ, ಅಡ್ಡಂಡ ಕಾರ್ಯಪ್ಪ, ಪ್ರಚಾರ ಸಮಿತಿಯ ಸಂಚಾಲಕ ನಾಳಿಯಮ್ಮಂಡ ಕೆ. ಉಮೇಶ್, ಮೆರವಣಿಗೆ ಸಮಿತಿಯ ಸಂಚಾಲಕ ಬೊಳ್ಳಜಿರ ಬಿ. ಅಯ್ಯಪ್ಪ, ವೇದಿಕೆಯ ಸಮಿತಿಯ ಸಂಚಾಲಕ ಹಂಚೆಟ್ಟಿರ ಮನು ಮುದ್ದಪ್ಪ, ತೋರೇರ ಎಂ. ಮುದ್ದಯ್ಯ, ಸ್ವಾಗತ ಸಮಿತಿಯ ಸಂಚಾಲಕ ಅಂಗೀರ ಕುಸುಮ್, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಸುಳ್ಳಿಮಾಡ ಭವಾನಿ ಕಾವೇರಿಯಪ್ಪ, ಚಂಗಲಂಡ ಪಿ.ಸೂರಜ್ ಮತ್ತು ಕುಡಿಯರ ಶಾರದ, ಊಟೋಪಚಾರ ಸಮಿತಿ ಸಂಚಾಲಕ ಆಪಟ್ಟಿàರ ಎಸ್.ಮೊಣ್ಣಪ್ಪ ಹಾಗೂ ಕೊಡವ ಭಾಷಿಕ ವಿವಿಧ ಸಮಾಜಗಳ ಮುಖಂಡರು, ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಬೊಳ್ಳಜಿರ ಬಿ. ಅಯ್ಯಪ್ಪ ಸ್ವಾಗತಿಸಿ, ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ವಂದಿಸಿದರು.
ಕಾರ್ಯಕ್ರಮಗಳ ವಿವರಜೂ. 8ರಂದು ಬೆಳಗ್ಗೆ 9 ಗಂಟೆಗೆ ಮೆರವಣಿಗೆ, 10.30ಕ್ಕೆ ಸಭಾ ಕಾರ್ಯಕ್ರಮ ಹಾಗೂ ಮಳಿಗೆಗಳ ಉದ್ಘಾಟನೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಗಂಟೆಗೆ ಕೊಡವ ನಾಟಕ ಪ್ರದರ್ಶನವಿದೆ. ಜೂ. 9 ರಂದು ಬೆಳಗ್ಗೆ 9.30ಕ್ಕೆ ವಿಚಾರಗೋಷ್ಠಿ, 10.30ಕ್ಕೆ ಗೋಣಿಕೊಪ್ಪುಲುವಿನ ಲಯನ್ಸ್ ಸ್ಕೂಲ್ ವತಿಯಿಂದ ಸಾಮೂಹಿಕ ನೃತ್ಯ ಪ್ರದರ್ಶನ ಗೊಳ್ಳಲಿದೆ. ಬೆಳಗ್ಗೆ 11.30ಕ್ಕೆ ಕವಿಗೋಷ್ಠಿ, ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 5 ಗಂಟೆಗೆ ಖ್ಯಾತ ಕಲಾವಿದರಿಂದ ಕೊಡವ ಸಾಂಸ್ಕೃತಿಕ ಗೀತಾ ಗಾಯನ ನಡೆಯಲಿದೆ.