Advertisement
ಕೊಡಂಕೂರು, ನಿಟ್ಟೂರು, ಕೊಡವೂರು, ಮಧ್ವನಗರ ಮೊದಲಾದ ಭಾಗಗಳಿಂದ ಸಾವಿರಾರು ಜನರು ಎರಡು ಬದಿಯಲ್ಲಿ ನಿಂತು ಬಸ್‌ನಲ್ಲಿ ಕಾಯುತ್ತಾರೆ. ಮುಖ್ಯವಾಗಿ ಉದ್ಯೋಗಕ್ಕೆ ತೆರಳುವ ಮಹಿಳೆಯರು, ಯುವತಿಯರು, ಕಾಲೇಜು ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚು. ಪ್ರತಿನಿತ್ಯ ಸಂಜೆ, ಬೆಳಗ್ಗೆ ಮಧ್ಯಾಹ್ನ ಅವಧಿಯಲ್ಲಿ ಆಗಮಿಸಿ ಸ್ಥಳೀಯ ಬಸ್‌ಗಳಿಗೆ ಕಾದು ಪ್ರಯಾಣಿಸುತ್ತಾರೆ. ಮಳೆಗಾಲದಲ್ಲಿ ಮಳೆಯಲ್ಲಿ ಜೋರು ಮಳೆ ಬರುವಾಗಲೂ ಸೂರಿಲ್ಲದೆ ಛತ್ರಿ ಹಿಡಿದುಕೊಂಡೆ ಎಲ್ಲರೂ ಬಸ್‌ಗಳಿಗೆ ಕಾಯಬೇಕು. ಬೇಸಗೆಯಲ್ಲಿ ಸುಡು ಬಿಸಿಲಿನಲ್ಲಿ ರಸ್ತೆಯ ಅಂಚಿನಲ್ಲಿ ಬಸ್ ಗೆ ಕಾಯುವುದು ಸ್ಥಳೀಯರಿಗೆ ಸಮಸ್ಯೆಯಾಗಿದೆ.
Related Articles
Advertisement
ಮಹಿಳಾ, ಮಕ್ಕಳ ನಿಲಯಗಳಿಗೆ ಸಮಸ್ಯೆ
ಸಂಜೆ ಬಳಿಕ ಮಹಿಳೆಯರು, ಹೆಣ್ಣು ಮಕ್ಕಳು ಈ ಪರಿಸರದಲ್ಲಿ ಓಡಾಡಲು ಆತಂಕ ಪಡುವ ಪರಿಸ್ಥಿತಿ ಇದೆ. ಇಲ್ಲಿನ ಸಮೀಪವೇ ಸಖೀ ಒನ್ ಸ್ಟಾಪ್ ಸೆಂಟರ್, ಸ್ಟೇಟ್ ಹೋಂ-ಮಹಿಳಾ ನಿಲಯ, ವಿಚಕ್ಷಣಾಲಯ ಕೇಂದ್ರಗಳಿವೆ. ಈ ಕೇಂದ್ರದಲ್ಲಿ ಮಕ್ಕಳು, ಮಹಿಳೆಯರು ನೆಲೆಸಿದ್ದಾರೆ. ಅಪರಿಚಿತರಿಂದ ಈ ಕೇಂದ್ರಗಳ ಪರಿಸರಕ್ಕೆ ತೊಂದರೆ ಯಾಗುವ ಸಾಧ್ಯತೆ ಇದೆ. ಪಾಳು ಬಿದ್ದ ಬಸ್ ನಿಲ್ದಾಣವನ್ನು ವ್ಯವಸ್ಥಿತಗೊಳಿಸಿ ಅಭಿವೃದ್ಧಿಪಡಿಸಬೇಕು. ಅಪರಿಚಿತರ ತಾಣವಾಗುವುದನ್ನು ತಪ್ಪಿಸಲು ಕ್ರಮಕೈಗೊಳ್ಳುವಂತೆ ನಗರಸಭೆ ಆಡಳಿತ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇಲಾಖೆಯೊಂದಿಗೆ ಚರ್ಚೆ: ಕೊಡಂಕೂರು, ನಿಟ್ಟೂರು ಎರಡು ಬಸ್‌ನಿಲ್ದಾಣಗಳ ದುಃಸ್ಥಿತಿ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಅಭಿವೃದ್ಧಿಗೆ ಈಗಾಗಲೇ ಹೆದ್ದಾರಿ ಇಲಾಖೆ ಅವರೊಂದಿಗೆ ಚರ್ಚಿಸಲಾಗಿದೆ. ಅಲ್ಲದೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಯಾರಾದರೂ ಜಾಹೀರಾತು ಸಂಸ್ಥೆಯವರು ಮುಂದೆ ಬಂದಲ್ಲಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. – ಸುಮಿತ್ರಾ ಎಸ್. ನಾಯಕ್, ಅಧ್ಯಕ್ಷರು, ಉಡುಪಿ ನಗರಸಭೆ