ಮಡಿಕೇರಿ: ಜಲಸ್ಫೋಟಕ್ಕೆ ತುತ್ತಾಗಿದ್ದ ಹಸಿರ ಪರಿಸರದ ನೆಲೆಬೀಡು ಕೊಡಗು, ಪ್ರಕೃತಿಯ ಹೊಡೆತಕ್ಕೆ ಸಿಲುಕಿ ಇನ್ನೂ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲೇ ಇದೆ. ಈ ಹಂತದಲ್ಲೇ ಮತ್ತೂಂದು ಮಳೆಗಾಲ ಇಲ್ಲೇ ಹತ್ತಿರದಲ್ಲಿದ್ದೇನೆ, ಬರಲೇ ಎಂದು ಪ್ರಶ್ನಿಸುತ್ತಿದೆ. ಇನ್ನೇನು ಎರಡು ವಾರಗಳು ಕಳೆದರೆ ವರ್ಷಧಾರೆಯಲ್ಲಿ ಮೈಚಾಚಲಿದೆ ಕಾವೇರಿನಾಡು ಕೊಡಗು.
ಜಲಧಾರೆಯ ನಿರೀಕ್ಷೆಯಲ್ಲಿ ಪ್ರಕೃತಿ ಮಾತೆ ಕಾಯುತ್ತಿದ್ದರೆ, ಕಳೆದ ಆಗಸ್ಟ್ ತಿಂಗಳ ಪ್ರವಾಹದ ನೆನಪಿನಲ್ಲಿರುವ ಮಂದಿ ಮಾತ್ರ ಮಳೆ ಬರಲಿ, ಆದರೆ ಸೂತಕದ ಛಾಯೆ ಮೂಡದಿರಲಿ ಎಂದು ನಿತ್ಯ ಕೈಮುಗಿಯುತ್ತಿದ್ದಾರೆ. ಪ್ರಕೃತಿ ಒಲಿದರೆ ಸ್ವರ್ಗ, ಮುನಿದರೆ ನರಕ ಎನ್ನುವ ಅನುಭವ ಕಳೆದ ವರ್ಷ ಜಿಲ್ಲೆಯ ಜನರಿಗಾಗಿದೆ. ಸುಮಾರು 40 ಕ್ಕೂ ಹೆಚ್ಚು ಗ್ರಾಮಗಳು ಬೆಟ್ಟಗುಡ್ಡಗಳ ಕುಸಿತ, ಜಲಸ್ಫೋಟ, ಪ್ರವಾಹ, ಬಿರುಗಾಳಿಗೆ ತರಗೆಲೆಗಳಂತೆ ಕೊಚ್ಚಿ ಹೋದವು. 20 ಅಮಾಯಕ ಜೀವಗಳು ಬಲಿಯಾದವು, ಜಾನುವಾರುಗಳು ನಾಪತ್ತೆಯಾದವು, ಕಾಫಿ ತೋಟ, ಹೊಲಗದ್ದೆಗಳು ಸ್ಥಾನ ಪಲ್ಲಟವಾದವು.
ರಸ್ತೆ, ಸೇತುವೆ, ಮೋರಿಗಳು ಅಸ್ತಿತ್ವವನ್ನೇ ಕಳೆದುಕೊಂಡವು. ಸುಮಾರು 2 ಸಾರ ಕೋಟಿ ರೂ.ಗಳಿಗೂ ಅಧಿಕ ನಷ್ಟ ಅನುಭಸಿದ ಕೊಡಗಿನ ಬಗ್ಗೆ ಸರ್ಕಾರಗಳಿಂದ ಆರಂಭದ ದಿನಗಳಲ್ಲಿ ಅನುಕಂಪದ ಅಲೆ ಪ್ರವಾಹದ ರೀತಿಯಲ್ಲಿ ಹರಿದು ಬಂತು. ಆದರೆ ಪ್ರಾಕೃತಿಕ ಅನಾಹುತ ಸಂಭಸಿ 10 ತಿಂಗಳುಗಳೇ ಕಳೆದಿದ್ದರೂ ನಿರೀಕ್ಷಿತ ರೀತಿಯಲ್ಲಿ ನೋವುಂಡ ಗ್ರಾಮಸ್ಥರಿಗೆ ಪರಿಹಾರ ದೊರೆಯುತ್ತಿಲ್ಲ ಮತ್ತು ಇನ್ನೆರಡು ವಾರಗಳಲ್ಲಿ ಆಗುಸುವ ಮಳೆಗಾಲದ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ರಸ್ತೆ, ಸೇತುವೆ ಮತ್ತು ಮೋರಿಗಳ ಕಾಮಗಾರಿಯೇನೋ ನಡೆಯುತ್ತಿದೆ, ಆದರೆ ಮಳೆ ಆರಂಭಕ್ಕೂ ಮೊದಲು ಪೂರ್ಣಗೊಳ್ಳುವ ಸಾಧ್ಯತೆಗಳು ಕಡಿಮೆ ಇದೆ. ಅಪೂರ್ಣಗೊಂಡ ಕಾಮಗಾರಿ ಮಳೆ ನೀರಿನಲ್ಲಿ ಕೊಚ್ಚಿ ಹೋಗುವ ಆತಂಕವೂ ಇದೆ. ಬೆಟ್ಟಗುಡ್ಡಗಳು ಕುಸಿದು ಕೆಸರಿನ ಪ್ರವಾಹದಲ್ಲಿ ಮುಳಗಿದ ಗ್ರಾಮಗಳ ಹೊಳೆಗಳಲ್ಲಿ ತುಂಬಿರುವ ಕೆಸರು ಮತ್ತು ಮರಗಳನ್ನು ತೆರವುಗೊಳಿಸಿ ಈ ಮಳೆಗಾಲದಲ್ಲಿ ನೀರು ಯಾವುದೇ ಅಪಾಯದ ಮುನ್ಸೂಚನೆ ನೀಡದೆ ಸರಾಗವಾಗಿ ಹರಿಯಲು ಅವಕಾಶ ಕಲ್ಪಿಸಬೇಕೆನ್ನುವ ಗ್ರಾಮಸ್ಥರ ಬೇಡಿಕೆ ಇನ್ನೂ ಈಡೇರಿಲ್ಲ. ಹೊಳೆಯಲ್ಲಿ ತುಂಬಿರುವ ರಾಶಿ, ರಾಶಿ ಮಣ್ಣು ಮತ್ತು ಮರಗಳು ಜಲಮಾರ್ಗವನ್ನು ಬದಲಿಸುವ ಎಲ್ಲಾ ಸಾಧ್ಯತೆಗಳಿದೆ. ಇದರಿಂದ ಜನವಸತಿ ಪ್ರದೇಶಗಳು ಮತ್ತೆ ಪ್ರವಾಹಕ್ಕೆ ಸಿಲುಕುವ ಆತಂಕ ಗ್ರಾಮಸ್ಥರನ್ನು ಕಾಡಿದೆ.
ಕಳೆದ ವರ್ಷ ಮಹಾಮಳೆ ಅತಿಯಾಗಿ ಕಾಡಿದ ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು ಗ್ರಾಮ ಮತ್ತು ಇಲ್ಲಿನ ಉಪಗ್ರಾಮಗಳು ಈ ಸಮಸ್ಯೆಗಳನ್ನು ಎದುರಿಸುತ್ತಿವೆ. ಮೂರು ದಿನಗಳ ಂದೆ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 70 ಸೆಂಟ್‌ನಷ್ಟು ಮಳೆಯಾಗಿದ್ದು, ಈ ಅಲ್ಪ ಪ್ರಮಾಣದ ಮಳೆಗೇ ಹೊಳೆಯಲ್ಲಿ ಏಳು ಅಡಿಯಷ್ಟು ನೀರು ಕಾಣಿಸಿಕೊಂಡಿದೆ.
ಇದಕ್ಕೆ ಪ್ರಮುಖ ಕಾರಣ ಹೊಳೆಯಲ್ಲಿ ತುಂಬಿರುವ ಮಣ್ಣಿನ ರಾಶಿ ಹಾಗೂ ಬಿದ್ದಿರುವ ಮರಗಳು ಎಂದು ಸ್ಥಳೀಯ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.