Advertisement

ಕೊಡಗು :ಕೊಚ್ಚಿ ಹೋಗಿದ್ದ ತಾಯಿ-ಮಗನ ಶವಗಳು ಕೆಸರಿನಲ್ಲಿ ಪತ್ತೆ 

02:51 PM Aug 22, 2018 | Team Udayavani |

ಮಡಿಕೇರಿ : ಹೆಮ್ಮೆತಾಳು ಗ್ರಾಮದಲ್ಲಿ ಭೀಕರ ಜಲಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ತಾಯಿ ಮಗನ ಶವಗಳನ್ನು  ಕೊನೆಗೂ ಬುಧವಾರ ಸೇನಾ ಪಡೆಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿವೆ. 

Advertisement

ಮೃತರು ಚಂದ್ರಾವತಿ (66)ಮತ್ತು ಉಮೇಶ್‌ (36) ಎನ್ನುವವರಾಗಿದ್ದಾರೆ. ಅಗಸ್ಟ್‌ 16 ರಂದು ಭೀಕರ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ಮನೆ ಕೊಚ್ಚಿ ಹೋಗಲು ಪ್ರಾರಂಭವಾದಾಗ ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ  ಇಬ್ಬರು ತೆರಳುತ್ತಿದ್ದ ವೇಳೆ ನೀರಿಗೆ ಸಿಲುಕಿ ನಾಪತ್ತೆಯಾಗಿದ್ದರು. 

ಸಂಬಂಧಿಕರು ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತ ಪಡಿಸಿ ಶವಗಳನ್ನು ಪತ್ತೆ ಹಚ್ಚಿ ಕೊಡುವಂತೆ ಜಿಲ್ಲಾಡಳಿತದ ಬಳಿ ಮನವಿ ಮಾಡಿದ್ದರು.

ಮನವಿ ಹಿನ್ನಲೆಯಲ್ಲಿ  ಬುಧವಾರ ಬೆಳೆಗ್ಗೆ 15 ಮಂದಿ ಯೋಧರು ಸ್ಥಳೀಯರೊಂದಿಗೆ ಹುಡುಕಾಟಕ್ಕಿಳಿದಿದ್ದರು. 

Advertisement

ದುರಂತ ವೆಂದರೆ ಅಗಸ್ಟ್‌ 17 ರಂದು ಅಂದರೆ ಕೊಚ್ಚಿ ಹೋದ ಮರುದಿನ ಬೆಳಗ್ಗೆ ಪುತ್ತೂರಿಗೆ ತೆರಳಲು ಸಿದ್ಧತೆ ನಡೆಸಿದ್ದರು ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next