Advertisement
ವೀರಾಜಪೇಟೆಯ ಮುಸ್ಲಿಂ ಸಮುದಾಯದ ಖಬರಸ್ಥಾನದಲ್ಲಿ ಸಂಪ್ರದಾಯದಂತೆ ನಡೆದ ಅಂತ್ಯ ಸಂಸ್ಕಾರದಲ್ಲಿ ಕುಟುಂಬಸ್ಥರು, ಬಂಧುಗಳು, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಸೇನೆಯ ವಿಶೇಷ ತಂಡದ ಸುಪರ್ದಿಯಲ್ಲಿ ಶನಿವಾರ ಮುಂಜಾನೆ ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ತರಲಾಯಿತು. ತಾಲೂಕು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಿದ್ದು, ಶಾಸಕರಾದ ಕೆ.ಜಿ. ಬೋಪಯ್ಯ, ಶಾಂತೆಯಂಡ ವೀಣಾ ಅಚ್ಚಯ್ಯ, ಎಂ.ಪಿ. ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಮೊದಲಾದವರು ಅಂತಿಮ ಗೌರವ ಸಲ್ಲಿಸಿದರು.
Related Articles
ಕುಸಿದು ಬಿದ್ದ ಪತ್ನಿ
ಯೋಧರು ಹಾಗೂ ಕೊಡಗು ಜಿಲ್ಲಾ ಪೊಲೀಸರು ಕುಶಾಲು ತೋಪನ್ನು ಸಿಡಿಸುವ ಮೂಲಕ ಹುತಾತ್ಮ ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು. ಪಾರ್ಥಿವ ಶರೀರಕ್ಕೆ ಹೊದೆಸಲಾಗಿದ್ದ ರಾಷ್ಟ್ರಧ್ವಜವನ್ನು ತೆಗೆದು ಸೇನಾಧಿಕಾರಿಗಳು ಪತ್ನಿ ಜುಬೇರಿಯಾ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಅವರು ಪ್ರಜ್ಞಾಹೀನರಾಗಿ ಕುಸಿದು ಬಿದ್ದರು. ಅನಂತರ ಯೋಧನ ತಾಯಿ ಆಸಿಯಾಗೆ ಹಸ್ತಾಂತರಿಸಲಾಯಿತು.
Advertisement
ಸೇನಾ ಸಮವಸ್ತ್ರ ಮಾದರಿ ಧರಿಸಿ ಅಪ್ಪನಿಗೆ ಸೆಲ್ಯೂಟ್
ಯೋಧ ಅಲ್ತಾಫ್ ಅವರ ಮಕ್ಕಳಾದ ಅಸ್ಮಾ ಜಾಸ್ಮಿನ್ ಮತ್ತು ಮೊಹಮ್ಮದ್ ಅಫ್ರಿದ್ ಅವರು ಸೇನಾ ಸಮವಸ್ತ್ರ ಮಾದರಿಯ ಉಡುಪು ಧರಿಸಿ ಅಪ್ಪನಿಗೆ “ಸೆಲ್ಯೂಟ್’ ಹೊಡೆಯುವ ಮೂಲಕ ಕೊನೆಯ ಗೌರವ ಸಲ್ಲಿಸಿ ಕಣ್ಣೀರಾದರು, ಅಲ್ಲದೆ ನೆರೆದವರ ಕಣ್ಣಾಲಿಗಳನ್ನು ತೇವಗೊಳಿಸಿದರು. ಅಪ್ಪನ ಆಸೆಯಂತೆ ಸೇನೆ
ಸೇರುವೆ ಎಂದ ಮಗಳು
ಅಪ್ಪನ ಇಚ್ಛೆಯಂತೆ ನಾನು ಕೂಡ ಭಾರತೀಯ ಸೇನೆಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತೇನೆ, ಅದನ್ನು ಮಾತ್ರ ಬೇಡವೆನ್ನಬೇಡ ಎಂದು ಅಮ್ಮ ಜುಬೇರಿಯಾ ಅವರ ಮಡಿಲಲ್ಲಿ ತಲೆ ಇಟ್ಟು ಕಣ್ಣೀರಿಟ್ಟವಳು ಮಗಳು ಅಸ್ಮಾ ಜಾಸ್ಮಿನ್. ಇದನ್ನು ಖುದ್ದು ಹೇಳಿಕೊಂಡ ಅಲ್ತಾಫ್ ಅವರ ಪತ್ನಿ ಜುಬೇರಿಯಾ, ಪತಿ ಕುಟುಂಬದ ಯೋಗಕ್ಷೇಮದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿ ದ್ದರು. ಇಬ್ಬರು ಮಕ್ಕಳನ್ನೂ ಸೇನಾಧಿಕಾರಿ ಗಳನ್ನಾಗಿಸುವ ಇಚ್ಛೆ ಹೊಂದಿದ್ದರು ಎಂದು ಕಣ್ಣೀರು ಹಾಕಿದರು.