Advertisement

ಕೊಡಗು: ಅಲ್ಲಲ್ಲಿ ಕುಸಿತ

01:45 AM Jul 24, 2019 | sudhir |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಐದು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಜು. 24ರ ವರೆಗೆ ಭಾರತೀಯ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಮುಂದುವರಿಸಲಾಗಿದೆ. ಆದರೆ ಮಂಗಳವಾರ ಮಳೆ ಕ್ಷೀಣಗೊಂಡಿದೆ.

Advertisement

ಮದೆನಾಡು ಬಳಿ ಹೆದ್ದಾರಿಗೆ ಬರೆ ಕುಸಿದು ಬಿದ್ದ ಪರಿಣಾಮ ಸಂಚಾರದಲ್ಲಿ ಸ್ವಲ್ಪ ವ್ಯತ್ಯಯವಾಯಿತು.

ಕಳೆದ ವರ್ಷ ಭೂಕುಸಿತಕ್ಕೆ ಸಿಲುಕಿದ್ದ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ಅಲ್ಪ ಪ್ರಮಾಣದಲ್ಲಿ ಬರೆ ಕುಸಿದಿದೆ. ಈ ಹಿಂದೆ ದುರಸ್ತಿ ಮಾಡಲಾದ ರಸ್ತೆಯಲ್ಲಿಯೂ ಬಿರುಕು ಮೂಡಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಪ್ರವಾಸಿ ತಾಣ ಮಾಂದಲಪಟ್ಟಿಯ ರಸ್ತೆಯಲ್ಲಿ ಭೂಕುಸಿತವಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next