Advertisement

ಕೊಡಗು: ಆಗಸ್ಟ್ 11ವರೆಗೆ ರೆಡ್ ಅಲಟ್೯ ಮುಂದುವರಿಕೆ! ಜಿಲ್ಲಾಡಳಿತದಿಂದ ಪರಿಹಾರ ಕೇಂದ್ರ

06:01 PM Aug 07, 2020 | sudhir |

ಕೊಡಗು : ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಇನ್ನು ಮಳೆ ಮುಂದುವರೆಯುವ ಸೂಚನೆ ಇದ್ದು ಆಗಸ್ಟ್ 11 ರವರೆಗೂ ಕೊಡಗೂ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲಟ್೯ ಮುಂದುವರೆಸಲಾಗಿದೆ.

Advertisement

ಇನ್ನೂ 5 ದಿನಗಳವರೆಗೆ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಹಿನ್ನಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯಿಂದ ರೆಡ್ ಅಲಟ್೯ ಘೋಷಣೆ ಮಾಡಿದೆ.

ಜಿಲ್ಲಾಡಳಿತದಿಂದ ಪರಿಹಾರ ಕೇಂದ್ರ:
ಕೊಡಗು ಜಿಲ್ಲೆಯಲ್ಲಿ ಕಳೆದ 03 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜಿಲ್ಲೆಯ ಮೂರು ಭಾಗಗಳಲ್ಲಿ 03 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು ಒಟ್ಟು 20 ಕುಟುಂಬದ 48 ಜನರಿಗೆ ಇಲ್ಲಿ ಆಶ್ರಯ ನೀಡಲಾಗಿದ್ದು ಪರಿಹಾರ ಕೇಂದ್ರದ ವಿವರ ಇಂತಿದೆ,

1. ಕೆ.ವಿ.ಜಿ ಕಾಲೇಜು ಭಾಗಮಂಡಲ – ಒಟ್ಟು 01 ಕುಟುಂಬ 03 ಜನರು.
2. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕರಡಿಗೋಡು – 17 ಕುಟುಂಬ 40 ಜನರು.
3. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಚಿಕ್ಕಪೇಟೆ, ವಿರಾಜಪೇಟೆ – 02 ಕುಟುಂಬ 05 ಜನರು.

Advertisement

Udayavani is now on Telegram. Click here to join our channel and stay updated with the latest news.

Next