Advertisement

ಕೊಡಗು: ಶುಕ್ರವಾರ 78 ಮಂದಿಗೆ ಸೋಂಕು ದೃಢ; 507 ಸಕ್ರಿಯ ಪ್ರಕರಣ

10:16 AM Oct 03, 2020 | mahesh |

ಮಡಿಕೇರಿ: ಜಿಲ್ಲೆಯಲ್ಲಿ ಶುಕ್ರವಾರ 78 ಮಂದಿಗೆ ಸೋಂಕು ದೃಢಪಟ್ಟಿದ್ದು ಒಟ್ಟು ಸಂಖ್ಯೆ 2,879ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ. ಸದ್ಯ 507 ಸಕ್ರಿಯ ಪ್ರಕರಣಗಳಿದ್ದು, 44 ಮಂದಿ ಮೃತಪಟ್ಟಿದ್ದಾರೆ ಎಂದವರು ಹೇಳಿದ್ದಾರೆ. ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಅಂಬಟ್ಟಿ ಗ್ರಾಮವೊಂದರಲ್ಲೇ 16 ಮಂದಿದಲ್ಲಿ ಸೋಂಕು ದೃಢಪಟ್ಟಿದೆ.

Advertisement

ಜಿಲ್ಲೆಯಲ್ಲಿ ಗುರುವಾರ 53 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು ನಾಲ್ಕು ಮಂದಿ ಮೃತಪಟ್ಟಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 2,801ಕ್ಕೇರಿದ್ದು 486 ಸಕ್ರಿಯ ಪ್ರಕರಣಗಳಿವೆ. 44 ಮಂದಿ ಮೃತಪಟ್ಟಿದ್ದಾರೆ ಎಂದುಜಿಲ್ಲಾಧಿಕಾರಿ ಮಾಹಿತಿ ನೀಡಿದ್ದರು.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

ಕಾಸರಗೋಡು: 476 ಮಂದಿಗೆ ಸೋಂಕು
ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ 476 ಮಂದಿಗೆ ಸೋಂಕು ದೃಢಪಟ್ಟಿದ್ದು 158 ಮಂದಿ ಗುಣಮುಖರಾಗಿದ್ದಾರೆ. 451 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ.

9,258 ಮಂದಿಗೆ ಸೋಂಕು
ಕೇರಳದಲ್ಲಿ ಶುಕ್ರವಾರ 9,258 ಮಂದಿಗೆ ಸೋಂಕು ದೃಢಪಟ್ಟಿದೆ. ರೋಗ ಬಾಧಿತರಲ್ಲಿ 47 ಮಂದಿ ವಿದೇಶದಿಂದ ಹಾಗೂ 184 ಮಂದಿ ಇತರ ರಾಜ್ಯಗಳಿಂದ ಬಂದವರು. 8,931 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿ
ದ್ದರೆ 93 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ.

ಆರು ಪೊಲೀಸರಿಗೆ ಕೋವಿಡ್‌
ಕಾಸರಗೋಡು ಠಾಣೆಯ ಎಸ್‌ಎಚ್‌ಒ ಸಹಿತ 6 ಪೊಲೀಸರಿಗೆ ಕೋವಿಡ್‌ ದೃಢಪಟ್ಟಿದೆ. ಈ ಹಿಂದೆ 12 ಮಂದಿ ಪೊಲೀಸರಿಗೆ ಕೋವಿಡ್‌ ದೃಢಗೊಂಡಿತ್ತು. ಇದರಿಒಂದಾಗಿ ಠಾಣೆಗೆ ಪ್ರವೇಶಿಸಲು ನಿರ್ಬಂಧಿಸಲಾಗಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next