Advertisement
ನಗರದ ಪತ್ರಿಕಾ ಭವನದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಹೆಸರುಗಳನ್ನು ಘೋಸಿದ ಅವರು ಪಕ್ಷದ ಬಲವರ್ಧನೆಯ ದೃಷ್ಠಿಯಿಂದ ವಿವಿಧ ಘಟಕಗಳನ್ನು ಪುನರ್ ರಚಿಸಲಾಗಿದೆ ಎಂದರು.
Related Articles
Advertisement
ಕಾರ್ಯಕಾರಿ ಸುತಿಯ ಸದಸ್ಯರುಗಳಾಗಿ ಸೋಮವಾರಪೇಟೆಯ ರಾಜೇಶ್, ಎಂ.ಟಿ. ಮಂದಣ್ಣ, ಶನಿವಾರಸಂತೆಯ ಮುತ್ತಯ್ಯಗೌಡ್ರು, ರಾಜಪ್ಪ, ಮಾದಪುರದ ಮುಸ್ತಫ ಸೀದಿ, ಗೌಡಳ್ಳಿಯ ಕೂಗೂರು ಕುಮಾರಪ್ಪ, ಕುಶಾಲನಗರದ ಕಮಲಗಣಪತಿ, ಎಸ್.ಬಿ. ನಂದಕುಮಾರ್, ಶುಂಠಿಕೊಪ್ಪದ ಕರೀಂ, ಸೋಮವಾರಪೇಟೆಯ ಜಾನಕಿ ವೆಂಕಟರಾಮ್, ಕಾಕೋಟುಪರಂಬು ಪಂದ್ಯಂಡ ರ, ಚೆನ್ನಂಗಿ ಜಯಮ್ಮ, ಪೊನ್ನಂಪೇಟೆಯ ಕಳ್ಳಿಚಂಡ ನಟೇಶ್, ಅಜ್ಜಮಾಡ ಲವಕುಶಾಲಪ್ಪ, ವಾಟೇರಿರ àರಾಜ್ ಅಪ್ಪಚ್ಚು, ಕೋಚಮಾಡ ಹರೀಶ್, ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಕುಟ್ಟನ ಸಂದೀಪ್, ಸೋಮವಾರಪೇಟೆ ಅಧ್ಯಕ್ಷರಾಗಿ ಕೆ.ಪಿ.ನಾಗರಾಜು, ರಾಜಪೇಟೆ ಅಧ್ಯಕ್ಷರಾಗಿ ಎಚ್.ಎಸ್.ಮತೀನ್, ಕುಶಾಲನಗರ ಅಧ್ಯಕ್ಷರಾಗಿ ಸಿ.ಎಲ್.ವಿಶ್ವ ಹಾಗೂ ಪೊನ್ನಂಪೇಟೆ ಅಧ್ಯಕ್ಷರಾಗಿ ಕೋಳೆರ ದಯಾಚಂಗಪ್ಪ ಹಾಗೂ ಪರಿಶಿಷ್ಟಜಾತಿ ಘಟಕದ ಜಿಲ್ಲಾಧ್ಯಕ್ಷರಾಗಿ ಬಿ.ಡಿ.ಅಣ್ಣಯ್ಯ ಆಯ್ಕೆಯಾಗಿದ್ದಾರೆ ಎಂದು ಕೆ.ಎಂ.ಗಣೇಶ್ ಮಾತಿ ನೀಡಿದರು.
ಪಕ್ಷದ ಗೌರವ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ ಕೊಡಗು ಜಿಲ್ಲೆಗೆ ಕಾಫಿ ಬೆಳೆಗಾರರ ಕಣ್ಣೀರನ್ನು ಒರೆಸುವ ಸಂಸದರ ಅಗತ್ಯದ್ದು, ನಿಷ್ಕ್ರಿಯ ಸಂಸದ ಪ್ರತಾಪ್ ಸಿಂಹ ಈ ಬಾರಿ ದೊಡ್ಡ ಅಂತರದಲ್ಲಿ ಸೋಲು ಅನುಭಸಲಿದ್ದಾರೆ ಎಂದು ಭವಿಷ್ಯ ನುಡಿದರು. ನೂತನ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ಪಕ್ಷ ಸಂಘಟನೆಯನ್ನು ಚುರುಕುಗೊಳಿಸಿದ್ದು, ಅಲ್ಪಾವಧಿಯಲ್ಲೇ ಪಕ್ಷವನ್ನು ಪುನರ್ ರಚಿಸುವ ಮೂಲಕ ಬಲವರ್ಧನೆಗೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವೆಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ..ನಾಗೇಶ್, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಆಲಿ, ಉಪಾಧ್ಯ ಕ್ಷರುಗಳಾದ ಪಾಣತ್ತಲೆ ಶ್ವನಾಥ್ ಕೊಂಡಂಗೇರಿ ಯೂಸುಫ್ ಉಪಸ್ಥಿತರಿದ್ದರು.
ಭಿನ್ನಾಭಿಪ್ರಾಯವಿಲ್ಲ ಜಿಲ್ಲಾ ಜೆಡಿಎಸ್‌ನಲ್ಲಿ ಯಾವುದೇ ಗೊಂದಲಗಳಿಲ್ಲ, ಎಲ್ಲಾ ನಾಯಕರುಗಳು ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿಯ ಗೆಲುಗಾಗಿ ಶ್ರುಸುತ್ತಿದ್ದಾರೆ. ಹಿರಿಯ ನಾಯಕ ಬಿ.ಎ.ಜೀಜಯ ಅವರನ್ನು ಜಿಲ್ಲಾ ಸಮಿತಿಯ ಪೋಷಕರನ್ನಾಗಿ ಆಯ್ಕೆ ಮಾಡಲಾಗಿದ್ದು, ದೂರವಾಣಿ ಮೂಲಕ ಸಂಪರ್ಕಿಸಿ ಸಹಕಾರ ಕೋರಲಾಗಿದೆ. ಸೂಕ್ತ ರೀತಿಯ ಭರವಸೆಯೂ ದೊರೆತಿದೆ ಎಂದು ಗಣೇಶ್ ಸ್ಪಷ್ಟಪಡಿಸಿದರು. ಪಕ್ಷದ ವರಿಷ್ಠರ ಆದೇಶಕ್ಕೆ ಪ್ರತಿಯೊಬ್ಬರು ಬದ್ಧರಾಗಿರುವುದು ಅನಿವಾರ್ಯವೆಂದು ತಿಳಿಸಿದರು.