Advertisement

ಕೊಡಗು ಗೌಡ ವಿದ್ಯಾ ಸಂಘದ ಚುನಾವಣೆ: ಸದಸ್ಯರಿಂದ ಮತದಾನ

03:02 PM Mar 28, 2017 | Team Udayavani |

ಮಡಿಕೇರಿ: ಅರೆಭಾಷೆ ಗೌಡ ಜನಾಂಗದ ಅತ್ಯಂತ ಹಿರಿಯ ಸಂಸ್ಥೆ ಕೊಡಗು ಗೌಡ ವಿದ್ಯಾ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ಮಾ.26 ರಂದು ಚುನಾವಣೆ ನಡೆಯಿತು.

Advertisement

 ಒಟ್ಟು 4,388 ಸದಸ್ಯರನ್ನು ಹೊಂದಿರುವ ಸಂಘದ ಆಡಳಿತ ಮಂಡಳಿಯ 15 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಕೋಶಾಧಿಕಾರಿ ಸೇರಿದಂತೆ ಏಳು ಮಂದಿ ನಿರ್ದೇಶಕರು ಹಾಗೂ ಮೂರು ಮಂದಿ ಮಹಿಳಾ ಮೀಸಲಾತಿ ನಿರ್ದೇಶಕಿಯರ ಆಯ್ಕೆಗಾಗಿ ಸದಸ್ಯರು ಮತದಾನ ಮಾಡಿದರು. 

 ನಗರದ ಗೌಡ ಸಮಾಜದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ನಿವೃತ್ತ ತಹಶೀಲ್ದಾರರಾದ ಕಾಳೇರಮ್ಮನ ರಾಘವಯ್ಯ ಅವರು ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಸದಸ್ಯರು ಉತ್ಸಾಹದಿಂದ ಮತದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next