Advertisement

ಕೊಡಗು : ರೈಲ್ವೇ ಕಂಬಿ ಬೇಲಿಯಲ್ಲಿ ಸಿಲುಕಿ ಪರದಾಡಿದ ಕಾಡಾನೆ

11:15 PM May 14, 2022 | Team Udayavani |

ಮಡಿಕೇರಿ : ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ನೆಲ್ಯಹುದಿಕೇರಿ ಬರಡಿಯಲ್ಲಿ ರೈಲ್ವೇ ಕಂಬಿಗಳ ಬೇಲಿಯಲ್ಲಿ ಕಾಡಾನೆಯೊಂದು ಸಿಲುಕಿಕೊಂಡು ಪರದಾಡಿದ ಘಟನೆ ನಡೆದಿದೆ.

Advertisement

ಕಾಡಾನೆಗಳ ನುಸುಳುವಿಕೆಯನ್ನು ತಡೆಯಲು ನೆಲ್ಯಹುದಿಕೇರಿ ಬರಡಿ ಭಾಗದಲ್ಲಿ ರೈಲ್ವೇ ಕಂಬಿಗಳ ಬೇಲಿಯನ್ನು ಅಳವಡಿಸಲಾಗಿದೆ. ಇದು ಅವೈಜ್ಞಾನಿಕ ರೂಪದಲ್ಲಿರುವುದರಿಂದ ಗಜಪಡೆ ಗ್ರಾಮಗಳಿಗೆ ಲಗ್ಗೆ ಇಡುವುದನ್ನು ಬಿಟ್ಟಿಲ್ಲ. ಬಲಾಡ್ಯ ಆನೆಗಳು ಮನುಷ್ಯರಂತೆ ಮೇಲಿನಿಂದ ಬೇಲಿ ದಾಟಿದರೆ ಸಣ್ಣ ಆನೆಗಳು ಬೇಲಿಯ ತಳ ಭಾಗದಿಂದ ನುಸುಳಿ ತೋಟಗಳನ್ನು ಸೇರಿಸಿಕೊಳ್ಳುತ್ತವೆ.

ಇದೇ ಮಾದರಿ ಶನಿವಾರ ಕೂಡ ಹೊಳೆಯ ಭಾಗದಿಂದ ಬಂದ ಸಾಧಾರಣ ವಯಸ್ಸಿನ ಕಾಡಾನೆಯೊಂದು ಕಾಫಿ ತೋಟವನ್ನು ಸೇರಲು ಬೇಲಿಯ ಕೆಳಭಾಗದಿಂದ ದಾಟುವ ಪ್ರಯತ್ನ ಮಾಡಿತು. ಆದರೆ ದಾಟಲಾಗದೆ ಮಧ್ಯದಲ್ಲೇ ಸಿಲುಕಿಕೊಂಡು ಪರದಾಡಿತು. ಕೆಲವು ಗಂಟೆಗಳ ಹರಸಾಹಸದಿಂದ ಹೇಗೋ ಬೇಲಿಯಿಂದ ಮುಕ್ತಿ ಹೊಂದಿ ತೋಟ ಸೇರಿಕೊಂಡಿತು.

ಸ್ಥಳದಲ್ಲಿ ಸ್ವಲ್ಪ ಕಾಲ ಆತಂಕ ಸೃಷ್ಟಿಯಾಗಿತ್ತು, ಗ್ರಾಮಸ್ಥರು ಮೊಬೈಲ್‌ಗ‌ಳಲ್ಲಿ ದೃಶ್ಯವನ್ನು ಸೆರೆ ಹಿಡಿಯುವ ದೃಶ್ಯ ಕಂಡುಬಂತು.

ಇದನ್ನೂ ಓದಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದ ಮಹಿಳೆಯ 6.30 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Advertisement

 

Advertisement

Udayavani is now on Telegram. Click here to join our channel and stay updated with the latest news.

Next