Advertisement

ಕೋ.ಚೆ. ಸಾಹಿತ್ಯ ಓದದವರಿಂದ ಪ್ರಶಸ್ತಿ ಆಯ್ಕೆ

06:36 AM Mar 12, 2019 | Team Udayavani |

ಬೆಂಗಳೂರು: ಸಾಹಿತಿ ಮತ್ತು ನಿವೃತ್ತ ನ್ಯಾಯಾಧೀಶ ಕೋ.ಚೆನ್ನಬಸಪ್ಪ ಅವರ “ಬೇಡಿ ಕಳಚಿತು ದೇಶ ಒಡೆಯಿತು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಗದೇ ಇರುವುದು ಬೇಸರದ ಸಂಗತಿ ಎಂದು ಸಂಸ್ಕೃತಿ ಚಿಂತಕ ಮತ್ತು ಲೇಖಕ ಡಾ.ಜಿ.ರಾಮಕೃಷ್ಣ ಅಭಿಪ್ರಾಯಪಟ್ಟರು.

Advertisement

ನರಸಿಂಹರಾಜ ಕಾಲೋನಿಯ ಬಿಎಂಶ್ರೀ ಪ್ರತಿಷ್ಠಾನ ಸೋಮವಾರ ಕೋ.ಚೆನ್ನಬಸಪ್ಪ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಶಿಫಾರಸು ಮಾಡಬೇಕಾದವರು ಕೋ.ಚೆ ಅವರ ಸಾಹಿತ್ಯ ಓದದೇ ಇರುವ ಹಿನ್ನೆಲೆಯಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಿಗಲಿಲ್ಲ ಎಂದು ದೂರಿದರು.

ಕೋ.ಚೆನ್ನಬಸಪ್ಪ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದ ಅವರು, ಪ್ರಶಸ್ತಿಗೆ ಅರ್ಹವಾದ ಹಲವು ಕೃತಿಗಳನ್ನು ಕೋ.ಚೆ. ರಚಿಸಿ¨ªಾರೆ. ಆದರೆ ವಿಮರ್ಶಕರು ಅವುಗಳತ್ತ ಗಮನ ಹರಿಸಲಿಲ್ಲ. ಹೀಗಾಗಿ ಅವುಗಳು ಸಾಹಿತ್ಯ ವಲಯದಲ್ಲಿ ಚರ್ಚೆಯಾಗಲೇ ಇಲ್ಲ. ಆದರೂ ಕೂಡ ಅವರ ಸಾಹಿತ್ಯದ ಮೌಲ್ಯ ಕಡಿಮೆಯಾಗಿಲ್ಲ ಎಂದರು.

ಕೋ.ಚೆನ್ನಬಸಪ್ಪ ಅವರು ಐತಿಹಾಸಿಕ ಕಾದಂಬರಿಗಳನ್ನು ಬರೆಯುವಾಗ ಇತಿಹಾಸವನ್ನು ದಾಖಲಿಸಿ ಓದುಗರ ಮುಂದಿಡುತ್ತಿದ್ದರು. ವೈಚಾರಿಕ ಪ್ರಜ್ಞೆ ಅವರ ಬರವಣಿಗೆಯಲ್ಲಿತ್ತು. ಟಿಪ್ಪುಸುಲ್ತಾನ ಪುಸ್ತಕದಲ್ಲಿ ಕೂಡ ವೈಚಾರಿಕತೆಯನ್ನು ನಾವು ಕಾಣಬಹುದಾಗಿದೆ.

ಪುರಾವೆಗಳು ಇದ್ದರೆ ಯಾವುದೇ ವಿಷಯವನ್ನು ಹೆದರದೆ ಮಾತನಾಡಿ ಎನ್ನುತ್ತಿದ್ದ ಕೋ.ಚೆ ಟಿಪ್ಪು ಸುಲ್ತಾನನ ಹಿಂದುತ್ವದ ಬಗ್ಗೆ  ಅವರು ಪುಸ್ತಕ ಹೊರ ತಂದಾಗ ಕೆಲವರು ಅಪಸ್ವರ ಎತ್ತಿದರು. ಆದರೆ, ಬ್ರಿಟಿಷರ ಗುಂಡೇಟಿಗೆ ಎದೆಕೊಟ್ಟು ನಿಂತವನು ಇವರಿಗೆ ಹೆದರುತ್ತೇನೆಯಾ?ಎನ್ನುತ್ತಿದ್ದರು ಎಂದು ನುಡಿದರು.

Advertisement

ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಮಾತನಾಡಿ, ನ್ಯಾಯಾಧೀಶರಾಗಿದ್ದುಕೊಂಡು ಕನ್ನಡ ಸಾಹಿತ್ಯವನ್ನು ಬೆಳೆಸಿದವರಲ್ಲಿ ಕೆಲವೇ ಕೆಲವರಿದ್ದಾರೆ. ಅಂತವರ ಸಾಲಿಗೆ ಕೋ.ಚೆನ್ನಬಸಪ್ಪ ಸೇರುತ್ತಾರೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಒಡನಾಡಿಯಾಗಿ ರಾಜಕೀಯವಾಗಿ ಹಲವು ಸಲಹೆಗಳನ್ನು ನೀಡುತ್ತಿದ್ದರು, ಇದರಲ್ಲಿ ಮಹಿಳೆಯರಿಗೆ ಶೇ.25 ರಷ್ಟು ಮೀಸಲಾತಿ ಸಿಗಬೇಕು ಎಂಬುದು ಆಗಿತ್ತು ಎಂದರು. ಈ ವೇಳೆ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್‌.ಲಕ್ಷ್ಮೀನಾರಾಯಣ ಸೇರಿದಂತೆ ಮತ್ತಿತರರಿದ್ದರು.

ಕನ್ನಡದಲ್ಲಿ ತೀರ್ಪು ಬರೆದ  ದಿಟ್ಟವ್ಯಕ್ತಿ: ಕನ್ನಡದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕೋ.ಚೆನ್ನಬಸಪ್ಪ ಕನ್ನಡದಲ್ಲೇ ತೀರ್ಪು ಬರೆದು ಮಾದರಿಯಾಗಿದ್ದರು. ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಅವರ ಸಾಧನೆ ಇಂದಿನ ಯುವ ಪೀಳಿಗೆಗೆ ತಿಳಿಯಬೇಕು. ಆ ಹಿನ್ನೆಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಅವರ ಜೀವನ ಸಾಧನೆ ಕುರಿತ ಸಮಗ್ರ ಕೃತಿಯನ್ನು ಹೊರತರಬೇಕು ಎಂದು ಬಿಎಂ ಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷ ಪೊ›.ಎಂ.ಎಚ್‌ .ಕೃಷ್ಣಯ್ಯ ಒತ್ತಾಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next