ಮಹಾನಗರ: ಬಂಟರ ಯಾನೆ ನಾಡವರ ಮಾತೃ ಸಂಘ, ರೋಟರಿ ಕ್ಲಬ್ ಮಂಗಳೂರು ಈಸ್ಟ್ ಹಾಗೂ ರೋಟರಿ ಕ್ಲಬ್ ಬೈಕಂಪಾಡಿ ಇವರ ಸಹಯೋಗದಲ್ಲಿ ಅಮೃಥೋತ್ಸವ ಕಟ್ಟಡದ ಮಾತೃ ಸಂಘ ಸಭಾಭವನದಲ್ಲಿ ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆಗಳ ಎಲ್ಲ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬಂದಿಗೆ ಒಂದು ದಿನದ ಪುನಶ್ಚೇತನ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಚಿನ್ಮಯ ವಿದ್ಯಾಲಯ ಪ್ರಾಂಶುಪಾಲ ಡಾ| ಪುಷ್ಪರಾಜ್ ಬದಿಯಡ್ಕ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಆರ್.ಐ.ಡಿ. 3181ರ ಅಸಿಸ್ಟೆಂಟ್ ಗವರ್ನರ್ ಪ್ರಸಾದ್ ರೈ ಮಾತನಾಡಿ, ಇಂತಹ ಪುನಶ್ಚೇತನ ಕಾರ್ಯಕ್ರಮಗಳು ಶಿಕ್ಷಣ ಸಂಸ್ಥೆಗಳಲ್ಲಿ ಅತಿ ಅಗತ್ಯವಾಗಿ ನಡೆಯುತ್ತಿರಬೇಕು. ಇಲ್ಲವಾದಲ್ಲಿ ನಮ್ಮ ಜ್ಞಾನವು ನಿಂತ ನೀರಿನಂತಾಗಬಹುದು ಅದು ಹರಿವ ನೀರಿನಂತಾಗಬೇಕು ಎಂದು ಹೇಳಿದರು.
ಮಂಗಳೂರಿನ ಪೂರ್ವ ರೋಟರಿ ಕ್ಲಬ್ ಅಧ್ಯಕ್ಷ ಜಯಕುಮಾರ್, ಬೈಕಂಪಾಡಿಯ ರೋಟರಿ ಕ್ಲಬ್ ಕಾರ್ಯದರ್ಶಿ ಗಣೇಶ್ ಎಂ. ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರ.ಕಾರ್ಯದರ್ಶಿ ವಸಂತ ಶೆಟ್ಟಿ, ಮಾತನಾಡಿ, ಎಲ್ಲ ಶಿಕ್ಷಕ ಶಿಕ್ಷಕೇತರರು ಪ್ರತಿ ವರ್ಷ ಒಂದು ದಿನ ತರಬೇತಿಯನ್ನಾದರೂ ಪಡೆಯಬೇಕು. ಆಗ ತಮ್ಮಲ್ಲಿನ ಸಮಸ್ಯೆಗಳನ್ನು ತಿದ್ದಿಕೊಂಡು ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯ ಎಂದರು.
ರೋಟರಿ ಕ್ಲಬ್ ಬೈಕಂಪಾಡಿ ಚಾರ್ಟರ್ ಪ್ರಸಿಡೆಂಟ್ ಉಸ್ಮಾನ್ ಕುಕ್ಕಾಡಿ, ಶ್ರೀ ರಾಮಕೃಷ್ಣ ಪದವಿ ಕಾಲೇಜಿನ ಪ್ರಾಚಾರ್ಯ ಬಾಲಕೃಷ್ಣ ಶೆಟ್ಟಿ, ಶ್ರೀ ರಾಮಕೃಷ್ಣ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ| ಕಿಶೋರ್ ಕುಮಾರ್ ರೈ ಶೇಣಿ, ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ರಾಘವೇಂದ್ರ ಸ್ವಾಗತಿಸಿ, ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕ ಪಮೇಲನಾಥ್ ಆಳ್ವ ನಿರೂಪಿಸಿದರು. ಗ್ರಂಥಪಾಲಕಿ ಕವಿತಾ ಗಣೇಶ್ ವಂದಿಸಿದರು.