Advertisement

“ಜ್ಞಾನಕ್ಕೆ ಮಾನವೀಯ ಸ್ಪರ್ಶ ಅಗತ್ಯ’

01:10 AM Jun 20, 2019 | Team Udayavani |

ಬ್ರಹ್ಮಾವರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನವೇ ದೊಡ್ಡ ಶಕ್ತಿಯಾಗಿದೆ. ಆದರೆ ಮಾನವೀಯ ಮೌಲ್ಯವಿಲ್ಲದ ಜ್ಞಾನ ದುರಂತಕ್ಕೆ ಕಾರಣವಾದೀತು. ಹಾಗಾಗಿ ವಿದ್ಯಾರ್ಥಿಗಳು ಜ್ಞಾನದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಮಿಲಾಗ್ರಿಸ್‌ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ|ಫಾ| ಡಾ| ಲಾರೆನ್ಸ್‌ ಡಿ’ಸೋಜಾ ಹೇಳಿದರು.

Advertisement

ಅವರು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನಲ್ಲಿ ಋಋ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಕ್ಯಾಂಪಸ್‌ ನೇಮಕಾತಿಗೆ ಪೂರಕವಾದ ಒಂದು ವಾರದ ಕೌಶಲ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ| ವಿನ್ಸೆಂಟ್‌ ಆಳ್ವ, ಎಪಿಟೋಮ್‌ ತರಬೇತಿ ಸಂಸ್ಥೆಯ ವಿಲ್ಮಾ ಫೆರ್ನಾಂಡಿಸ್‌ ಉಪಸ್ಥಿತರಿದ್ದರು. ನ್ಯಾಕ್‌ ಸಂಯೋಜಕ ಡಾ| ಜಯರಾಮ ಶೆಟ್ಟಿಗಾರ್‌ ಕಾರ್ಯಕ್ರಮ ಸಂಘಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next