Advertisement

ಶಿಕ್ಷಣ ಸಂಸ್ಥೆಗಳು ಜ್ಞಾನ ವಿಹಾರ ಕೇಂದ್ರಗಳಾಗಬೇಕು

12:55 PM Apr 15, 2017 | Team Udayavani |

ಮೈಸೂರು: ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ವವಿದ್ಯಾನಿಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳು ಜ್ಞಾನ ವಿಹಾರ ಕೇಂದ್ರಗಳಾಗಿ ಬದಲಾದಾಗ ಮಾತ್ರ ಅಂಬೇಡ್ಕರ್‌ ಅವರಿಗೆ ನಮನ ಸಲ್ಲಿಸಿದಂತಾಗುತ್ತದೆ ಎಂದು ಮೈಸೂರು ವಿವಿ ಕುಲಸಚಿವ ಪೊ›. ಜೆ. ಸೋಮಶೇಖರ್‌ ಅಭಿಪ್ರಾಯ ಪಟ್ಟರು. ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜು ಸಾಂಸ್ಕೃತಿಕ ಮತ್ತು ಪ್ರಗತಿಪರ ವೇದಿಕೆಯಿಂದ ಶುಕ್ರವಾರ ಆಯೋಜಿಸಿದ್ದ ಅಂಬೇಡ್ಕರ್‌ ಅವರ 126ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಜ್ಞಾನದ ಬೆಳವಣಿಗೆ ದೇಶದ ಸ್ವಾತಂತ್ರ್ಯ ವೆಂದು ಅಂಬೇಡ್ಕರ್‌ ಪ್ರತಿಪಾದಿ ಸಿದ್ದರು. ಬ್ರಿಟಿಷ್‌ ಹಾಗೂ ಜಾತಿ ವ್ಯವಸ್ಥೆಯ ಬಲಿಷ್ಠ ಶಕ್ತಿಯನ್ನು ಏಕ ಕಾಲದಲ್ಲಿ ತಮ್ಮ ಬೌದ್ಧಿಕ ಶಕ್ತಿಯ ಆಧಾರ ದಲ್ಲಿ ಅನುಸಂಧಾನಕ್ಕೆ ತಂದವರು. ಈ ಹಿನ್ನೆಲೆ ಅವರ ಜನ್ಮದಿನ ಮತ್ತು ಅವರಿಗೆ ನಮನ ಸಲ್ಲಿಸಲು ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳು ಜ್ಞಾನ ವಿಹಾರವಾಗಬೇಕು ಎಂದರು.

ಅಂಬೇಡ್ಕರ್‌ ಸಮಾಜದ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಹಕ್ಕಿಗಾಗಿ ಹೋರಾಟ ಮಾಡಿದ ಮಾತ್ರವಲ್ಲದೇ ಹಕ್ಕನ್ನು ಅನುಷ್ಠಾ ನಗೊಳಿಸಲು ನಿರಾಕರಿಸಿದ ಕಾರಣಕ್ಕೆ ಮಂತ್ರಿ ಪದವಿ ತ್ಯಾಗ ಮಾಡಿದರು. ಆದರೆ ಚರಿತ್ರೆಕಾರರು ಅಂಬೇಡ್ಕರ್‌ರನ್ನು ತಪ್ಪಾಗಿ ಬಿಂಬಿಸಿದ್ದು, ಅಸತ್ಯವನ್ನು ಸತ್ಯವಾಗಿ ಪರಿಗಣಿಸಿದ ಪರಿಣಾಮ ಇಂದು ನಾವು ನೈತಿಕ ಶಕ್ತಿ ಇಲ್ಲದವರ ಆಳ್ವಿಕೆಯಲ್ಲಿರಬೇಕಾಗಿದೆ.

ಅಂಬೇಡ್ಕರ್‌ ಸಾಮಾಜಿಕ ಸ್ವಾತಂತ್ರ್ಯವನ್ನೇ ಹೆಚ್ಚು ಪ್ರತಿಪಾದಿಸುತ್ತಿದ್ದರಾದರೂ, ಇಂದಿಗೂ ಆ ಸ್ವಾತಂತ್ರ್ಯ ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ. ಆದ್ದರಿಂದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಮಾರಿಕೊಳ್ಳುವ ಸರಕು ಗಳನ್ನಾಗಿಸಬಾರದು, ನೈತಿಕ ಮೌಲ್ಯ ಗಳರಿತು ಕೊಲ್ಲುವ ಸಂಸ್ಕೃತಿಯಿಂದ ಜೀವ ಪರಂಪರೆಗೆ ಬದಲಾಗಬೇಕಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಮೌಲ್ಯಭರಿತ ಶಿಕ್ಷಣ ಪಡೆಯಬೇಕಿದ್ದು,

ಶಿಕ್ಷಣ ಸರ್ವ ರಿಗೂ ಸರಿಸಮನಾಗಿರುವ ಕಾರಣ ದಿಂದ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಕಾಲೇಜು ಪ್ರಾಂಶುಪಾಲ ಪೊ›. ಬಿ.ಟಿ. ವಿಜಯ್‌, ಸಾಂಸ್ಕೃತಿಕ ವೇದಿಕೆ ಅಧ್ಯಾಪಕ ಕಾರ್ಯದರ್ಶಿ ಪೊ›.ಎಚ್‌.ಎಂ. ಬಸವರಾಜು, ಸಾಂಸ್ಕೃತಿಕ ವೇದಿಕೆ ಅಧ್ಯಾಪಕ ಖಜಾಂಚಿ ಡಾ. ವಿಜಯ ಲಕ್ಷ್ಮೀ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರು ಪೊ›. ಎಂ. ಸುಂದರ, ಮನೋ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಆರ್‌. ಜಯರಾಜು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next