ಉಡುಪಿ: ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭ ಸೋಮವಾರ ಕಾಲೇಜಿನ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆಯಿತು.
ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವಚಿಸಿ, ತಿಳಿವಳಿಕೆ, ಜ್ಞಾನಕ್ಕೆ ಸಮಾನವಾದುದು ಇನ್ನೊಂದಿಲ್ಲ. ಈ ನಿಟ್ಟಿನಲ್ಲಿ ಆಲೋಚಿಸಿದ ಗುರು ಶ್ರೀ ವಿಬುಧಪ್ರಿಯ ತೀರ್ಥರು ಯಾವುದೇ ದೇವಸ್ಥಾನ, ಮಠ, ಮಂದಿರ ಕಟ್ಟದೆ ಜ್ಞಾನ ಸಂಪಾದನೆಗೆ ಒತ್ತು ಕೊಟ್ಟು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಎಂದರು.
ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥರು, ಪೂರ್ಣಪ್ರಜ್ಞ ಕಾಲೇಜಿನಲ್ಲಿ ತಾನು ಮೂರು ವರ್ಷ ಕಲಿತದ್ದನ್ನು ಮೆಲುಕು ಹಾಕಿಕೊಂಡರು.
ಸಮ್ಮಾನ: ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನ ನಿರ್ದೇಶಕ ಡಾ| ಎಂ.ಆರ್. ಹೆಗಡೆ ಅವರನ್ನು ಶ್ರೀಗಳೀರ್ವರು ಸಮ್ಮಾನಿಸಿದರು. ಸುವರ್ಣ ಮಹೋತ್ಸವದ ವಿಸ್ತೃತ ಕಟ್ಟಡ ನಿರ್ಮಾಣದ ನಿರ್ವಾಹಕರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಹರಿನಾರಾಯಣ ಆಸ್ರಣ್ಣ, ಸಂಧ್ಯಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶಪಾಲ್ ಎ. ಸುವರ್ಣ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ರಾವ್, ಉಪಾಧ್ಯಕ್ಷ ಶ್ರೀಪತಿ ಆಚಾರ್ಯ, ಪ್ರಾಂಶುಪಾಲೆ ಡಾ| ಸುಕನ್ಯಾ ಮೇರಿ ಜೆ., ಸ್ಟೂಡೆಂಟ್ ವೆಲ್‌ಫೇರ್ ಅಧಿಕಾರಿ ರಾಮಕೃಷ್ಣ ಉಡುಪ, ಕಾಲೇಜಿನ ಸ್ಟೂಡೆಂಟ್ ಕೌನ್ಸಿಲ್‌ನ ಚೈತ್ರಾ ಕಿಣಿ ಟಿ., ಜಯಕರ ಶೆಟ್ಟಿ, ಮಧುಸೂದನ ಹೆಗಡೆ, ಶಿವಾನಿ ಯು. ಶಾನುಭಾಗ್ ಅವರು ಉಪಸ್ಥಿತರಿದ್ದರು.
ಆಡಳಿತ ಮಂಡಳಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸ್ವಾಗತಿಸಿ, ಪ್ರಾಧ್ಯಾಪಕ ಮರ್ವಿನ್ ಡಿ’ಸೋಜಾ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಇತಿಹಾಸ ವಿಭಾಗದ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.