Advertisement
ಪಾಶ್ಚಾತ್ಯ ಅನುಕರಣೆಯನ್ನು ನಿಲ್ಲಿಸಿ ಭಾರತೀಯ ಧಾರ್ಮಿಕ ಚಿಂತನೆಯನ್ನು ಮತ್ತು ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಭಗವಂತನ ಆರಾಧನೆಯ ಮೂಲಕ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ. ಜೀವನ ಧರ್ಮವನ್ನು ಕಲಿಸುವ ಹಿಂದೂ ಧಾರ್ಮಿಕ ಚಿಂತನೆ, ಮೌಲ್ಯಗಳನ್ನು ಮಕ್ಕಳಿಗೆ ಹೇಳಿ ಕೊಡುವ ಮೂಲಕ ಧರ್ಮ ರಕ್ಷಣೆ ಸಾಧ್ಯವಾಗುತ್ತದೆ ಎಂದ ಸ್ವಾಮೀಜಿ ಅವರು ಹಿಂದೂ ಧರ್ಮ ಅವಿನಾಶಿನಿ. ದೇವರೊಂದಿಗೆ ಅನುಸಂಧಾನ ಮಾಡಿಕೊಳ್ಳಲು ಹೃದಯಲ್ಲಿ ಭಗವಂತನನ್ನು ಪ್ರತಿಷ್ಠಾಪಿಸಿಕೊಳ್ಳಬೇಕು. ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಭಜನೆ ಸಾಕು ಎಂದರು.
ಚಿಂತನೆಗಳನ್ನು ಮಕ್ಕಳಿಗೆ ತಿಳಿ ಹೇಳಬೇಕು ಎಂದರು. ಧಾರ್ಮಿಕ ಸಭೆಯಲ್ಲಿ ಮಂದಿರದ ಅಧ್ಯಕ್ಷ ದೇವಪ್ಪ ಅಧ್ಯಕ್ಷತೆ ವಹಿಹಿಸಿದರು. ಆರ್‌ಎಸ್‌ಎಸ್ ಕರ್ನಾಟಕ ಪ್ರಾಂತ್ಯ ಮಾಧ್ಯಮ ವಿಭಾಗ ಪ್ರಮುಖ್ ರಾಜೇಶ್ ಪದ್ಮಾರ್ ಧಾರ್ಮಿಕ ಭಾಷಣ ಮಾಡಿದರು.ವಾರ್ಡ್ ಕೌನ್ಸಿಲರ್ ಸುಜಿತ್ ಕುಮಾರ್, ವಿ.ಹಿಂ.ಪ.ಮಾತೃ ಮಂಡಳಿಯ ಜಲಜಾಕ್ಷಿ ಟೀಚರ್,ವಿಟ್ಲ ಮೈತ್ರೇಯಿ ಗುರುಕುಲದ ಜಗನ್ನಾಥ ಕಾಸರಗೋಡು ಮೊದಲಾದವರು ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಸೇವಕ ಬಿ.ಕೃಷ್ಣ ಕೊರಕ್ಕೋಡು, ಭಜನ ವಿದ್ವಾನ್ ಸುರೇಶ್ ಬಲ್ಲಾಳ್‌ಬಾಗ್ ಮಂಗಳೂರು ಮತ್ತು ಕಲ್ಯಾಣಿ ಅವರನ್ನು ಗೌರವಿಸಲಾಯಿತು. ಭಜನಾ ಮಂದಿರದ ಕಾರ್ಯದರ್ಶಿ ಸುರೇಶ್ ಅವರು ಸ್ವಾಗತಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಗುಣಪಾಲ ಅವರು ವರದಿ ಮಂಡಿಸಿ, ವಂದಿಸಿದರು. ಕಾರ್ಯಕ್ರಮಕ್ಕೆ ಮುನ್ನ ಒಡಿಯೂರು ಶ್ರೀ ಗುರುದೇವದತ್ತ ಮಹಾಸಂಸ್ಥಾನಮ್‌ನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ನಡೆಯಿತು.
Related Articles
Advertisement