Advertisement

ವಿದ್ಯಾರ್ಥಿಗಳಲ್ಲಿ ಕೃಷಿಯ ಬಗೆಗೆ ಅರಿವು ಮೂಡಿಸಿ

02:42 PM Dec 08, 2017 | Team Udayavani |

ಕೆಮ್ಮಿಂಜೆ : ಇಲ್ಲಿಯ ಗೇರು ಸಂಶೋಧನ ನಿರ್ದೇಶನಾಲಯ (ಡಿಸಿಆರ್‌)ದಲ್ಲಿ ಕೃಷಿ ಶಿಕ್ಷಣ ದಿನ ಆಚರಿಸಲಾಯಿತು. ಮುಖ್ಯ ಅತಿಥಿ ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ ಕಾರ್ಣಿಕ್‌ ಅವರು ಮಾತನಾಡಿ, ಭಾರತದಲ್ಲಿ ಸುಮಾರು ಶೇಕಡಾ ಅರವತ್ತರಷ್ಟು ಜನಸಂಖ್ಯೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಚಟುವಟಿಕೆಯನ್ನು ಆಧರಿಸಿ ಕೊಂಡಿದ್ದಾರೆ. ಆದರೆ 1947ರಲ್ಲಿ ಕೃಷಿಯಿಂದ ಶೇ. 82ರಷ್ಟಿದ್ದ ಜಿಡಿಪಿ ಕೊಡುಗೆ ಇಂದು 18ರಿಂದ 22ಕ್ಕೆ ಇಳಿದಿದೆ ಎಂದು ಹೇಳಿದರು.

Advertisement

ಕೀಳರಿಮೆ ಸಲ್ಲದು
ಐಸಿಎಆರ್‌ ಮಹಾಮಂಡಳಿ ಸದಸ್ಯ ಬಿ.ಕೆ. ರಮೇಶ್‌ ಮಾತನಾಡಿ, ಕೃಷಿಯ ಬಗ್ಗೆ ಕೀಳರಿಮೆ ಸಲ್ಲದು. ನಾವು ಆರ್ಥಿಕವಾಗಿ ಸದೃಢವಾಗಬೇಕಿದ್ದರೆ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅನಿವಾರ್ಯ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಅಚ್ಯುತ ಮೂಡೆತ್ತಾಯ, ವಿದ್ಯಾರ್ಥಿಗಳು ಕೃಷಿಯನ್ನು ಒಂದು ಕಲಿಕೆಯ ವಿಷಯವನ್ನಾಗಿ ತೆಗೆದುಕೊಂಡು ಅಧ್ಯಯನ ಮಾಡಬೇಕು. ಆಧುನಿಕ ಕೃಷಿ ಪರಿಕರಗಳು ಹಾಗೂ ಆಧುನಿಕ ಕೃಷಿಯಲ್ಲಿ ಅವುಗಳನ್ನು ಬಳಸಿಕೊಂಡು ಉತ್ಪನ್ನವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎನ್ನುವುದನ್ನು ತಿಳಿಯುವುದು ಅತೀ ಅವಶ್ಯವೆಂದರು.

ಸಭಾಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ| ಎಂ. ಗಂಗಾಧರ್‌ ನಾಯಕ್‌ ಅವರು ಕೃಷಿ ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಪುತ್ತೂರಿನ ವಿವಿಧ ಪದವಿಪೂರ್ವ ವಿದ್ಯಾಲಯಗಳಲ್ಲಿ ವಿಜ್ಞಾನ ವಿಷಯವನ್ನು ಅಭ್ಯಸಿಸುತ್ತಿರುವ 150ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಪ್ರಕಾಶ್‌ ಜಿ. ಭಟ್‌ ನಿರೂಪಿಸಿದರು. ಸಂಸ್ಥೆಯ ವಿಜ್ಞಾನಿ ಮುರಳೀಧರ್‌ ಬಿ.ಎಂ. ಅವರು ಸಹಕರಿಸಿದರು.

ಅರಿವು ಮೂಡಿಸಿ
ಕೃಷಿ ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ದೈನಂದಿನ ಜೀವನದಲ್ಲಿ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎನ್ನುವ ಬಗ್ಗೆ ಕ್ಯಾ| ಗಣೇಶ ಕಾರ್ಣಿಕ್‌ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next