Advertisement

ವೈದ್ಯ ರಂಗದಲ್ಲಿ ಜ್ಞಾನ ಅವಶ್ಯ

10:24 AM Jul 22, 2019 | Suhan S |

ಬೆಳಗಾವಿ: ಹೃದಯಾಘಾತ ಹಾಗೂ ಅಪಘಾತಗಳಿಂದ ಅಸುನೀಗುವವರ ಸಂಖ್ಯೆ ಅಧಿಕವಾಗುತ್ತಿದೆ. ಆದ್ದರಿಂದ ವೈದ್ಯಕೀಯ ರಂಗದಲ್ಲಿ ಎಲ್ಲರೂ ತಕ್ಕಮಟ್ಟಿನ ಜ್ಞಾನ ಹೊಂದಿರುವುದು ಅತ್ಯವಶ್ಯ ಎಂದು ಯು ಎಸ್‌ಎಂ ಕೆಎಲ್ಇ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ ಹೇಳಿದರು.

Advertisement

ನಗರದ ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಸಿಪಿಆರ್‌ ದಿನಾಚರಣೆ ಅಂಗವಾಗಿ ಆರೋಗ್ಯ ಸಹಾಯಕಿ ಪ್ರಶಿಕ್ಷಣಾರ್ಥಿಗಳು ಹಾಗೂ ಜೈನ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬಿಎಲ್ಎಸ್‌ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ತುರ್ತು ಸಂದರ್ಭಗಳು ಜೀವನದಲ್ಲಿ ಹೇಳಿ ಕೇಳಿ ಬರುವುದಿಲ್ಲ. ಆದರೆ ಈ ಸಂದರ್ಭ ಎದುರಿಸುವ ತಾಳ್ಮೆ ಹಾಗೂ ಜ್ಞಾನ ಹೊಂದಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆ ನಿಯೋಜಿತ ನಿರ್ದೇಶಕ ಡಾ. ಆರ್‌.ಜಿ. ನೆಲವಿಗಿ ಮಾತನಾಡಿ, ಸಿಪಿಆರ್‌ ಇದು ಜೀವ ರಕ್ಷಣೆಯ ಅದ್ಭುತ ಕಲೆಯಾಗಿದ್ದು, ಪ್ರತಿಯೊಬ್ಬರೂ ಅರಿಯಬೇಕಾದ ವಿಷಯವಾಗಿದೆ. ಅಲ್ಲದೇ ಮಾನವೀಯತೆ ಮೆರೆಯಲು ಅವಶ್ಯಕ ಅಂಶವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಐಎಪಿಯ ಸದಸ್ಯ ಡಾ. ಶರದ ಶ್ರೇಷ್ಠಿ, ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್‌. ಕಡ್ಡಿ, ಡಾ. ಅನಿತಾ ಮೋದಗೆ, ಡಾ. ಸೌಮ್ಯ ವೆರ್ಣೇಕರ, ಡಾ. ಸಂತೋಷ ಕರಮಸಿ ಮುಂತಾದವರು ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಜೈನ್‌ ಕಾಲೇಜಿನ 25ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ಆರೋಗ್ಯ ಸಹಾಯಕಿ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

ಡಾ. ಪ್ರಜ್ಞಾ ಕುರಕುರೆ ನಿರೂಪಿಸಿದರು. ಡಾ. ಬಸವರಾಜ ಕುಡಸೋಮಣ್ಣವರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next