Advertisement

ಸಮುದಾಯದಲ್ಲಿ ಏಡ್ಸ್‌ ತಡೆಗೆ ತಿಳಿವಳಿಕೆ ಅಗತ್ಯ

05:30 PM Dec 03, 2019 | Team Udayavani |

ಹಿರೇಕೆರೂರ: ಎಚ್‌ಐವಿ ವೈರಸ್‌ ನಿಂದ ನಮ್ಮನ್ನ ನಾವು ಸುರಕ್ಷತೆ ಮಾಡಿಕೊಳ್ಳೊಬೇಕು. ಇದು ಒಂದು ಭಯಾನಕ ಮಹಾಮಾರಿ ಆಗಿದ್ದು, ಈ ರೋಗ ಹರಡದಂತೆ ನಾವು ಸುರಕ್ಷಿತ ಲೈಂಗಿಕ ಮಾರ್ಗಗಳನ್ನು ಅನುಸರಿಸಬೇಕು ಎಂದು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆಡಳಿತಾ ಧಿಕಾರಿ ಡಾ| ಹೊನ್ನಪ್ಪ ಜೆ.ಎಂ. ಹೇಳಿದರು.

Advertisement

ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆ,ಜಿಲ್ಲಾ ಪ್ರತಿಂಬಂಧಕ ಘಟಕ ಹಾವೇರಿ, ತಾಲೂಕು ಆಸ್ಪತ್ರೆ ಮತ್ತು ಮದಕರಿ ಪ್ಯಾರಾ ಮೆಡಿಕಲ್‌ ಸೈನ್ಸ್‌ ಕಾಲೇಜಿನ ವತಿಯಿಂದ ಪಟ್ಟಣದಲ್ಲಿ ಏರ್ಪಡಿಸಿದ್ದ ಏಡ್ಸ್‌ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎಚ್‌ಐವಿ ಸೋಂಕು ಹರಡುವಿಕೆಯನ್ನು ಸಂಪೂರ್ಣ ತಡೆಗಟ್ಟುವುದು ಮತ್ತು ಏಡ್ಸ್‌ ಬಗ್ಗೆ ಜಾಗೃತಿ ಮೂಡಿಸುವುದು ಜಾಥಾದ ಉದ್ದೇಶವಾಗಿದೆ. ಪ್ರತಿಯೊಬ್ಬರು ಏಡ್ಸ್‌ ಬಗ್ಗೆ ತಿಳಿವಳಿಕೆ ಹೊಂದಿರಬೇಕು. ಏಡ್ಸ್‌ ಸೋಂಕಿತರನ್ನು

ಸಮಾಜದ ಮುಖ್ಯವಾಹಿನಿಗೆ ತರಲು ಸೂಕ್ತ ಮಾರ್ಗದರ್ಶನ ಹಾಗೂ ಮಾಹಿತಿ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ನೇಹ ಕ್ಲಿನಿಕ್‌ ಆರಂಭಿಸಿದೆ. ಸಮುದಾಯದಲ್ಲಿ ಈ ಕುರಿತು ಆರೋಗ್ಯ ಶಿಕ್ಷಣ ನೀಡಿ ಎಚ್‌ಐವಿ ಸೋಂಕು ಹರಡುವಿಕೆಯನ್ನು ಸಂಪೂರ್ಣ ತಡೆಗಟ್ಟುವುದು ಜಾಗೃತಿ ಉದ್ದೇಶ ಎಂದು ಹೇಳಿದರು.

ಮದಕರಿ ಪ್ಯಾರಾ ಮೆಡಿಕಲ್‌ ಸೈನ್ಸ್‌ ಕಾಲೇಜಿನ ಪ್ರಾಚಾರ್ಯೆ ಅಂಜುಮ್‌ ಬ್ಯಾಡಗಿ, ಆಪ್ತ ಸಮಾಲೋಚಕ ಜಯಪ್ಪ ಬಿದರಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಕಾಲೇಜು ಮತ್ತು ಆಸ್ಪತ್ರೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next