Advertisement

ನಿರಂತರ ಅಧ್ಯಯನದಿಂದ ಜ್ಞಾನ, ಕೌಶಲ್ಯ ವೃದ್ಧಿ

11:08 AM May 04, 2019 | Team Udayavani |

ಕೋಲಾರ: ನಿರಂತರ ಅಧ್ಯಯನದ ಮೂಲಕ ಜ್ಞಾನವನ್ನು ಇಂದಿನ ಅವಶ್ಯಕ ತೆಗೆ ಅನುಗುಣವಾಗಿ ಕೌಶಲ್ಯವನ್ನಾಗಿಸಿ ಕೊಳ್ಳುವ ಚತುರತೆ ಬೆಳೆಸಿಕೊಂಡರೆ ಮಾತ್ರ ಸಾಧಕರಾಗಿ ಹೊರಹೊಮ್ಮಲು ಸಾಧ್ಯ ಎಂದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಆರ್‌.ವೇಣುಗೋಪಾಲ್ ವಿದ್ಯಾರ್ಥಿಗ ಳಿಗೆ ಸಲಹೆ ನೀಡಿದರು.

Advertisement

ನಗರ ಹೊರವಲಯದ ದಾನಮ್ಮ ಚನ್ನಬಸವಯ್ಯ ಕಾಲೇಜ್‌ ಆಫ್‌ ಆರ್ಟ್ಸ್, ಕಾಮರ್ಸ್‌, ಸೈನ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರಧಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಮಾಹಿತಿಯನ್ನು ಜ್ಞಾನವನ್ನಾಗಿಸಿಕೊಂಡು ಅವಶ್ಯ ಕೌಶಲ್ಯವನ್ನು ರೂಢಿಸಿಕೊಂಡರೆ ಜೀವನದಲ್ಲಿ ಯಶಸ್ಸು ನಿಮ್ಮನ್ನೇ ಹುಡುಕಿ ಕೊಂಡು ಬರುತ್ತದೆ ಎಂದು ಸಲಹೆ ನೀಡಿದರು.

ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಾಹಿತಿಗಳು ಕೈಬೆರಳ ತುದಿಯಲ್ಲೇ ಸಿಗುತ್ತದೆ. ಇದನ್ನು ಜ್ಞಾನವನ್ನಾಗಿಸಿಕೊ ಳ್ಳುವ ಜಾಣ್ಮೆ ವಿದ್ಯಾರ್ಥಿಗಳು ಪಡೆದುಕೊ ಳ್ಳಬೇಕು. ಹಿಂದಿನ ಕೆಲ ದಶಕಗಳಿಗೆ ಹೋಲಿಸಿದರೆ ತಂತ್ರಜ್ಞಾನ ಸಾವಿರಪಟ್ಟು ಬೆಳೆದಿದೆ. ಜೈವಿಕ ತಂತ್ರಜ್ಞಾನ, ವೈದ್ಯ ಕೀಯ ಕ್ಷೇತ್ರಗಳಲ್ಲಿನ ಆವಿಷ್ಕಾರದಿಂದ ಕೃತಕ ಅಂಗಾಂಗಗಳ ಸೃಷ್ಟಿ ಸಾಧ್ಯವಾಗಿದೆ. ಇಂದು ಕಲಿತಿರುವ ಕೋರ್ಸ್‌ ನಾಳೆ ಪ್ರಯೋಜನಕ್ಕೆ ಬರುವುದಿಲ್ಲ.

ಆದ್ದರಿಂದ ಕಲಿಕೆ ನಿರಂತರವಾಗಿದ್ದರೆ ಮಾತ್ರವೇ ಜೀವನದ ಪ್ರತಿ ಹಂತದಲ್ಲೂ ಯಶಸ್ಸು ಸಿಗಲು ಸಾಧ್ಯ ಎಂದು ಹೇಳಿದರು.

Advertisement

ಕೇವಲ ಪದವೀಧರನಾದರೆ ಪ್ರಯೋ ಜನವಿಲ್ಲ. ಉದ್ಯೋಗಕ್ಕೆ ಅರ್ಜಿ ಸಲ್ಲಿಸು ವಾಗ ಪದವಿಯ ಅರ್ಹತೆ ಬೇಕಾಗುತ್ತದೆ. ನಂತರ ಲಿಖೀತ ಪರೀಕ್ಷೆ, ಸಂದರ್ಶನ ಎದುರಿಸಲು ಸನ್ನದ್ಧರಾಗ ಬೇಕು. ಪದವಿ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಇಂದಿ ನಿಂದ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದರು.

ಎಸ್‌ಡಿಸಿ ಎಜುಕೇಷನ್‌ ಟ್ರಸ್ಟ್‌ನ ಕಾರ್ಯದರ್ಶಿ ಉಷಾ ಗಂಗಾಧರ ಅಧ್ಯ ಕ್ಷತೆ ವಹಿಸಿದ್ದರು. ಬೆಂಗಳೂರು ವಿವಿ ಕುಲಸಚಿವ ಡಾ.ಬಿ.ಕೆ.ರವಿ, ಬೆಂಗಳೂರು ಉತ್ತರ ವಿವಿಯ ಕುಲಸಚಿವ ಪ್ರೊ.ಎಂ.ಎಸ್‌.ರೆಡ್ಡಿ ಹಾಜರಿದ್ದರು.

ಎಸ್‌ಡಿಸಿ ಪ್ರಿನ್ಸಿಪಾಲ್ ಪ್ರೊ.ಕೆ.ಪುಷ್ಪ ಲತಾ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಎಸ್‌ಡಿಸಿ ಬಂಗಾರ ಪೇಟೆಯ ಪ್ರಿನ್ಸಿಪಾಲ್ ಪ್ರೊ.ಜಗದೀಶ್‌, ಮುಳಬಾಗಿಲಿನ ಪ್ರಿನ್ಸಿಪಾಲ್ ಸೈಫುಲ್ಲಾ ಖಾನ್‌, ಶಿಕ್ಷಣ ಸಂಸ್ಥೆಯ ಟ್ರಸ್ಟಿ ತ್ರಿಶೂಲ್ ಹಾಜರಿದ್ದರು.

ಬೆಂಗಳೂರು ವಿವಿಯಿಂದ ಬಿಕಾಂನಲ್ಲಿ ರ್‍ಯಾಂಕ್‌ ಪಡೆದಿರುವ ಎನ್‌.ಸುನಿತಾ ಸೇರಿದಂತೆ ಇತರೆ ಕೋರ್ಸ್‌ಗಳಲ್ಲಿ ರ್‍ಯಾಂಕ್‌ ಪಡೆದ, ಪ್ರತಿಭಾವಂತ ವಿದ್ಯಾ ರ್ಥಿಗಳನ್ನು ಪುರಸ್ಕರಿಸಲಾಯಿತು. ಎಸ್‌ಡಿಸಿ ಕೋಲಾರ, ಬಂಗಾರಪೇಟೆ ಮತ್ತು ಮುಳಬಾಗಿಲಿನ ಕಾಲೇಜುಗಳಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next