Advertisement

ಪಠ್ಯವನ್ನು ಮೀರಿದ ಕೌಶಲ, ಜ್ಞಾನ ಅಗತ್ಯ: ವಿನಯ ಹೆಗ್ಡೆ

09:55 PM Apr 09, 2019 | Team Udayavani |

ಪುತ್ತೂರು: ಬದಲಾವಣೆಯ ಯುಗದಲ್ಲಿ ಪಠ್ಯವನ್ನು ಮೀರಿದ ಕೌಶಲ, ಜ್ಞಾನವನ್ನು ಪಡೆಯುವ ಅನಿವಾರ್ಯತೆ ವಿದ್ಯಾರ್ಥಿಗಳಿಗಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್‌. ವಿನಯ ಹೆಗ್ಡೆ ಹೇಳಿದರು.

Advertisement

ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ನರೇಂದ್ರ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಹಲವು ವಿದ್ಯಾಸಂಸ್ಥೆಗಳನ್ನು ನಡೆಸುವ ಮೂಲಕ ದೇಶ ಸಂತೋಷ ಪಡುವ ಕೆಲಸವನ್ನು ಮಾಡಿದೆ. ಈ ಹಿಂದೆ ಚರ್ಚ್‌ ಗಳಿಗೆ ಸೀಮಿತವಾದ ಶಾಲೆಗಳಿದ್ದವು. ಇಂದು ಹಿಂದೂಗಳ ಸಂಸ್ಥೆಯಲ್ಲೂ ಉತ್ತಮ ಶಿಕ್ಷಣ ವ್ಯವಸ್ಥೆಯಿದೆ. ಅಧ್ಯಾಪಕರು ದೇಶಕ್ಕಾಗಿ ತ್ಯಾಗ ಮಾಡುತ್ತಾರೆ. ಈ ವ್ಯವಸ್ಥೆ ಹಿಂದೂ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ. ಇವತ್ತಿನ ಜಾಗತಿಕ ವ್ಯವಸ್ಥೆಯಲ್ಲಿ ಆಂಗ್ಲ ಭಾಷೆಯನ್ನು ವಿರೋಧಿಸಲು ಸಾಧ್ಯವಿಲ್ಲ. ಆದರೆ ಕನ್ನಡವನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರಶಾಂತ್‌ ರೈ ಕೈಕಾರ, ಶಿಕ್ಷಣ ಮತ್ತು ಕ್ರೀಡೆ ಎರಡೂ ನಮಗೆ ಬೇಕು. ಕ್ರೀಡೆಯಲ್ಲಿ ಉತ್ತಮ ಭವಿಷ್ಯವಿದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಜಿಇವನದಲ್ಲಿ ಶಿಸ್ತು, ಸಂಯಮವನ್ನು ಕಾಯ್ದುಕೊಂಡು ಸಾಧನೆ ಮಾಡಬೇಕು ಎಂದರು.

ವಿವೇಕಾನಂದ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿ, ಪ್ರತಿಷ್ಠಿತ ಸಂಸ್ಥೆ ಬಿಟ್ಸ್‌ ಪಿಲಾನಿಯ ನಿರ್ದೇಶಕ ಪ್ರೊ| ರಘುರಾಮ ಜಿ., ಶಿಕ್ಷಣದಲ್ಲಿ ಜಿಜ್ಞಾಸೆ ಇರಬೇಕು. ಆಗ ವಿದ್ಯಾರ್ಥಿ ಉತ್ತುಂಗಕ್ಕೆ ಏರುತ್ತಾರೆ. ಅದೇ ರೀತಿ ಜ್ಞಾನವನ್ನು ವಿಮರ್ಶಿಸಿ ತಿಳಿದುಕೊಳ್ಳುವುದು ವಿದ್ಯಾರ್ಥಿಯ ಕರ್ತವ್ಯ ಎಂದು ಹೇಳಿದರು.

ರಾಷ್ಟ್ರೀಯ ಕಬಡ್ಡಿ ಆಟಗಾರ ಸುಕೇಶ್‌ ಹೆಗ್ಡೆ ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾಯರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್‌, ಕಾಲೇಜಿನ ಸಂಚಾಲಕ ಡಿ. ವಿಜಯಕೃಷ್ಣ ಭಟ್‌, ಸದಸ್ಯ ಅರುಣ್‌ ಬಿ.ಕೆ. ಉಪಸ್ಥಿತರಿದ್ದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ರೂಪಲೇಖಾ ಸ್ವಾಗತಿಸಿ, ಸದಸ್ಯ ಸಾಜ ರಾಧಾಕೃಷ್ಣ ಆಳ್ವ ವಂದಿಸಿದರು. ವಿನಯ ಮಾತಾಜಿ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next