ಪಡುಬಿದ್ರಿ: ಉತ್ತಮ ತಿಳಿವಳಿಕೆ ಹಾಗೂ ನಂಬುಗೆಯಿಂದ ಸ್ವಧರ್ಮವು ಹೇಳುವ ವಿದ್ಯೆಗಳನ್ನು ಕಲಿತಾಗ ಉತ್ತಮ ಕರ್ಮಾನುಷ್ಟಾನಕ್ಕೂ ಅನುಕೂಲವಾಗುತ್ತದೆ. ದೇವರ ಪ್ರತಿಬಿಂಬವಾಗಿ ಉತ್ತಮ ಶ್ರದ್ಧಾಭಕ್ತಿಗಳಿಂದ ದೇವರ ಧ್ಯಾನವನ್ನು ಮಾಡಿ ಉತ್ತಮ ಜೀವನಕ್ರಮದಲ್ಲಿ ಮುಂದುವರಿಯಲು ಇಂತಹಾ ಧಾರ್ಮಿಕ ಶಿಬಿರಗಳು ಅನುಕೂಲವೆನಿಸುತ್ತದೆ ಎಂದು ಉಡುಪಿ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹೇಳಿದರು.
ಅವರು ಪಡುಬಿದ್ರಿ ಬ್ರಹ್ಮಸ್ಥಾನದ ಬಳಿಯ ಬಾಸಟ್ಟ ಮನೆಯಲ್ಲಿ ವಿದ್ವಾನ್ ವೇಂಕಟೇಶಾಚಾರ್ಯರು ಪ್ರಾಯೋಜಿಸಿದ ಬ್ರಾಹ್ಮಣ ವಟುಗಳ, ಬಾಲಕಿಯರ ಧಾರ್ಮಿಕ ವಸಂತ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚಿಸಿದರು.
ಮುಖ್ಯ ಅತಿಥಿಗಳಾಗಿದ್ದ ದ.ಕ., ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ಜೀವನ ವ್ಯವಸ್ಥೆಗೆ ಪೂರಕವಾಗಿ ಸ್ವಧರ್ಮ ಚಿಂತನೆಯನ್ನೂ ನಡೆಸಿದಾಗ ಶ್ರೀಮದ್ವಾಚಾರ್ಯರ ಶಾಸ್ತ್ರೋಕ್ತ ವಾಕ್ಯಗಳನ್ನು ಒಂದಿಷ್ಟಾದರೂ ಅರಗಿಸಿಕೊಂಡು ಬ್ರಾಹ್ಮಣ್ಯವನ್ನು ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ. ಬ್ರಾಹ್ಮಣ ಪೋಷಕರೆಲ್ಲರೂ ಮುಂದಿನ ಮಹಾಚುನಾವಣೆಯಲ್ಲಿ ಅವಶ್ಯ ಮತದಾನವನ್ನು ಗೈಯ್ಯಬೇಕೆಂದರು. ಇನ್ನೋರ್ವ ಮುಖ್ಯ ಅತಿಥಿ ಹರೀಶ್ ಪುತ್ತೂರಾಯ ಸಂದಭೋìಚಿತವಾಗಿ ಮಾತನಾಡಿದರು.
ವಿದ್ಯಾರ್ಥಿಗಳ ಪೋಷಕರನ್ನು, ಅಧ್ಯಾಪಕರನ್ನು ಶ್ರೀಪಾದರು ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಹರಸಿದರು. ಶ್ರೀ ಖಡೆYàಶ್ವರೀ ಬ್ರಹ್ಮಸ್ಥಾನದ ಪ್ರಥಮ ಪಾತ್ರಿ ಪಿ. ಜಿ. ನಾರಾಯಣ ರಾವ್, ದ್ವಿತೀಯ ಪಾತ್ರಿ ಸುರೇಶ್ ರಾವ್, ಶಿಬಿರದ ಅಧ್ಯಾಪಕರು, ಲಕ್ಷಿ$¾à ಟೀಚರ್ ಉಪಸ್ಥಿತರಿದ್ದರು.
ವೇ| ವಿ| ವೆಂಕಟೇಶಚಾರ್ಯರು ಸ್ವಾಗತಿಸಿ ದರು. ಯದುನಂದನಾಚಾರ್ಯ ಪಾಜಕ ಅವರು ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಮಟ್ಟು ಪ್ರವೀಣ್ ತಂತ್ರಿ ವಂದಿಸಿದರು.
ಶಿಬಿರದಲ್ಲಿ 140 ಬಾಲಕ, ಬಾಲಕಿಯರು , 40 ಮಂದಿ ಬ್ರಾಹ್ಮಣರು ಭಾಗವಹಿಸಿದ್ದರು.
ಅಧ್ಯಾಪಕರ ಕೋಪವನ್ನು ಅರಗಿಸಿಕೊಳ್ಳಿ
ಶಿಬಿರದ ಉದ್ದೇಶವನ್ನು ಅರಿತು ವಿದ್ಯಾರ್ಥಿಗಳು ಪಾಠವನ್ನು ಕಲಿತುಕೊಳ್ಳಬೇಕು. ಮಕ್ಕಳ ಒಳ್ಳೆಯದಕ್ಕಾಗಿ ಅಧ್ಯಾಪಕರ ಕೋಪವನ್ನು ವಿದ್ಯಾರ್ಥಿಗಳು ಅರಗಿಸಿಕೊಳ್ಳಬೇಕು. ಅಂತಹಾ ಕೋಪವು ನಿಮ್ಮನ್ನೂ ಪಂಡಿತರಾಗಿಸಬಲ್ಲುದು.
-ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಅದಮಾರು ಕಿರಿಯ ಶ್ರೀ