Advertisement

ಹಣಕ್ಕಿಂತ  ಜ್ಞಾನವೇ ಶ್ರೇಷ್ಠ ಎಂಬುದನ್ನು ಅರಿತುಕೊಳ್ಳಿ

12:27 PM Jan 04, 2018 | Team Udayavani |

ಮೈಸೂರು: ಉತ್ತಮ ಸಮಾಜ ನಿರ್ಮಾಣಕ್ಕೆ ಪರೀಕ್ಷೆಗಿಂತ ಉತ್ತಮವಾದ ಹೊಸದೊಂದು ವಿಧಾನ ಈ ವ್ಯವಸ್ಥೆಯಿಂದಲೇ ರೂಪುಗೊಳ್ಳಬೇಕಿದೆ ಎಂದು ನಿವೃತ್ತ ಪ್ರಾಂಶುಪಾಲ ಪೊ›.ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.

Advertisement

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ 2017-18ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಇಂದು ಹಣವೇ ಶ್ರೇಷ್ಠ ಎನ್ನುವ ಕೆಟ್ಟ, ಅನಾಗರಿಕ ವಿಚಾರ ಜನರ  ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ. ಭವಿಷ್ಯದಲ್ಲಿ ಜಾnನವನ್ನು ಹೊಂದಿದವರಿಗೆ ಮಾತ್ರ ಗೌರವ, ಸಂಪತ್ತು ಮತ್ತು ಸಕಲವು ಲಭಿಸಲಿದೆ. ಹಣವೊಂದನ್ನೇ ನೆಚ್ಚಿಕೊಂಡರೆ ಭವಿಷ್ಯವಿಲ್ಲ. ಹೀಗಾಗಿ ಹಣಕ್ಕಿಂತ ಜಾnನವೇ ಶ್ರೇಷ್ಠ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕಿದೆ ಎಂದರು.

ಅಧ್ಯಾಪಕರಿಗೆ ಸವಾಲು: ನಾವು ಕಾಲೇಜಿನಲ್ಲಿ ಕಲಿಯುತ್ತಿರುವುದು ನೇರವಾಗಿ ಬದುಕಿಗೆ ಸಂಬಂಧಿಸಿದ್ದು ಎಂಬುದನ್ನು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಅಧ್ಯಾಪಕರಿಗೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂದು ವಿದ್ಯಾಭ್ಯಾಸ ಪರೀಕ್ಷೆ ಕೇಂದ್ರಿತವಾಗಿಬಿಟ್ಟಿದೆ. ಪರೀಕ್ಷೆ ವ್ಯರ್ಥ ಕಾರ್ಯವಾಗಿದ್ದು, ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಪರೀಕ್ಷೆಗಿಂತ ಉತ್ತಮವಾದ ಹೊಸದೊಂದು ವಿಧಾನ ಈ ವ್ಯವಸ್ಥೆಯಿಂದಲೇ ರೂಪುಗೊಳ್ಳಬೇಕಿದೆ ಎಂದು ಹೇಳಿದರು.

ಅಕ್ಷರ ಜಾnನವಿಲ್ಲದೆ, ಲಾಭ-ನಷ್ಟಗಳ ಬಗ್ಗೆ ಚಿಂತಿಸದೆ ಕೆಲಸ ಮಾಡಿದವರು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳೆನಿಸಿಕೊಂಡಿದ್ದಾರೆ. ಇಂದು ಕೊಳ್ಳುಬಾಕ ಮನಸ್ಥಿತಿಯಿಂದಾಗಿ ಸಮಾಜ ಭ್ರಷ್ಟಾಚಾರದಲ್ಲಿ ಮುಳುಗಿದೆ.ಅಕ್ಷರ ಜಾnನ ಹೊಂದಿರುವ ನಮ್ಮ ನಂತರದ ತಲೆಮಾರು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದರು.

Advertisement

ಬದುಕಲು ಆಹಾರದಷ್ಟೇ ಜಾnನ ಕೂಡ ಮುಖ್ಯ ಎಂಬುದನ್ನು ಬಹುಬೇಗ ಅರಿತುಕೊಂಡು ಸಮಾಜದ ಏಳಿಗೆಗಾಗಿ ಜಾnನ ದಾಸೋಹದಲ್ಲಿ ತೊಡಗಿಕೊಂಡಂತಹ ಧಾರ್ಮಿಕ ತಳಹದಿಯುಳ್ಳ ವಿದ್ಯಾಸಂಸ್ಥೆಗಳುಳ್ಳ ರಾಜ್ಯಗಳ ಪೈಕಿ ಕರ್ನಾಟಕವೇ ಪ್ರಥಮ ಎಂದು ಹೇಳಿದರು.

ವ್ಯಕ್ತಿತ್ವ ನಿರ್ವಹಿಸಿ: ಜೆಎಸ್‌ಎಸ್‌ ಕಾಲೇಜು ಸಮುತ್ಛಯದ ಮುಖ್ಯ ಕಾರ್ಯನಿರ್ವಾಹಕ ಪೊ›.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯ ಜತೆಗೆ ಉತ್ತಮ ವ್ಯಕ್ತಿತ್ವ ನಿರ್ವಹಣೆ, ಸರ್ವತೋಮುಖ ಬೆಳವಣಿಗೆಗಳತ್ತಲೂ ಗಮನಹರಿಸಬೇಕು. ಇದಕ್ಕೆ ಬೇಕಾದ ಕೌಶಲ್ಯಗಳನ್ನು ಕಲಿತು ಅಳವಡಿಸಿಕೊಳ್ಳಬೇಕು ಎಂದರು.

ಕೈಗೆಟುಕುವ ವಿಷಯದಲ್ಲಿ ಎಚ್ಚರ ವಹಿಸಿ: ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪೊ›.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಜಾnನ ಸ್ಫೋಟದ ಯುಗದಲ್ಲಿರುವ ನಾವು ನಮ್ಮ ಕೈಗೆಟುಕುವ ವಿಷಯಗಳನ್ನು ಬಹಳ ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕಾಗಿದೆ.

ಅಕ್ಷರ ಜಾnನವಿಲ್ಲದ ಜನರು ಇಡೀ ಜಗತ್ತಿನ ಒಳಿತಿಗಾಗಿ ನಿಸ್ವಾರ್ಥ ಮನೋಭಾವದಿಂದ ದುಡಿಯುತ್ತಿರುವ ನಿದರ್ಶನಗಳು ನಮ್ಮ ಮುಂದಿರುವಾಗ ಅಕ್ಷರ ಜಾnನ ಹೊಂದಿರುವ ಇಂದಿನ ಯುವ ಪೀಳಿಗೆಯ ಮನೋಭಾವ ಯಾವ ಗುಣಮಟ್ಟದ್ದಾಗಿರಬೇಕು ಎನ್ನುವುದನ್ನು ಆಲೋಚಿಸಬೇಕಿದೆ ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಸತತ ಮೂರು ವರ್ಷಗಳಿಂದ ಸಾಂದರ್ಭಿಕ, ನಿರ್ಬಂದಿತ ಅಥವಾ ಗಳಿಕೆ ರಜೆ ಯಾವುದನ್ನೂ ಪಡೆಯದೇ ಕಾರ್ಯನಿರ್ವಹಿಸಿದ ಕನ್ನಡ ಉಪನ್ಯಾಸಕ ಟಿ.ಗುರುಪಾದಸ್ವಾಮಿ ಹಾಗೂ ಮೈಸೂರು ವಿವಿಯಿಂದ ಪಿಎಚ್‌.ಡಿ.ಪಡೆದ ಸಂಸ್ಕೃತ ಉಪನ್ಯಾಸಕಿ ಡಾ.ಕೋಮಲ ಅವರನ್ನು ಸನ್ಮಾನಿಸಲಾಯಿತು.

ರಾಷ್ಟ್ರಮಟ್ಟದ ಕ್ರೀಡಾಪಟು ಕುಮಾರಿ ಷಾಹೇಜಹಾನಿ, ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಟಿ.ಗುರುಪಾದ ಸ್ವಾಮಿ, ಕ್ರೀಡಾ ಸಮಿತಿ ಸಂಚಾಲಕ ಟಿ.ಅರವಿಂದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next