Advertisement
ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ. ಭ್ರಷ್ಟಾಚಾರದ ಪರ ನಾವು ನಿಂತಿಲ್ಲ. ನಮ್ಮ ಕಡೆ ಬೊಟ್ಟು ತೋರಿರುವಶಿವಕುಮಾರ್ ಭ್ರಷ್ಟಾಚಾರಕ್ಕೆ ಲೈಸನ್ಸ್ ಸಿಕ್ಕಿದೆ ಎಂದುಕೊಂಡಿದ್ದಾರೆ. ಹೀಗಾಗಿ ಭ್ರಷ್ಟಾಚಾರ ಮಾಡಿದವರೆಲ್ಲರೂ ಒಂದಾಗಿದ್ದಾರೆ. ನಮ್ಮಿಂದ ಹಗರಣ ಆಗಿದ್ದರೆ ತನಿಖೆ ಯಾಕೆ ಮಾಡುತ್ತಿಲ್ಲ. ನಮ್ಮ ವಿರುದ್ಧ ಸಾಕ್ಷ್ಯಾ ಧಾರ ಇದ್ದರೆ ಬ್ಲಾಕ್ ಮೇಲ್ ಮಾಡಿ ಹೆದರಿಸಬೇಡಿ, ತನಿಖೆ ಮಾಡಿ ಶಿಕ್ಷೆ ಕೊಡಿಸಲಿ ಎಂದು ಪಾಪ ವಿಮೋಚನೆಗಾಗಿ ಪಾದಯಾತ್ರೆ ಎಂಬ ಡಿಕೆಶಿ ಹೇಳಿಕೆಗೆ ಸವಾಲು ಹಾಕಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಹಗರಣಗಳ ಬಗ್ಗೆ ಹಾಗೂ ಎಸ್‌ಸಿ/ಎಸ್‌ಟಿ ಮೀಸಲು ಹಣ ಬೇರೆ ಉದ್ದೇಶಕ್ಕೆ ಬಳಸಿರುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತುಟಿ ಬಿಚ್ಚುತ್ತಿಲ್ಲ. ಖರ್ಗೆ ಸೌಂಡ್ ಲೆಸ್, ರಾಹುಲ್ ವಾಯ್ಸ ಲೆಸ್ ಆಗಿದ್ದಾರೆ ಎಂದು ಸಿ.ಟಿ.ರವಿ ಕುಟುಕಿದರು. ಮಲ್ಲಿಕಾರ್ಜುನ ಖರ್ಗೆ ಅವರೇ, ರಾಹುಲ್ ಗಾಂಧಿ ಅವರೇ ಮಾತನಾಡಿ. ಅಲ್ಪಸಂಖ್ಯಾಕರ ಇಲಾಖೆಯಲ್ಲೂ ಲೂಟಿ ನಡೆದಿದೆ. ಕಾರ್ಮಿಕ ಇಲಾಖೆಯಲ್ಲೂ ಆರೋಗ್ಯ ತಪಾಸಣೆ ಹೆಸರಲ್ಲಿ ಹಣ ತೆಗೆಯಲಾಗಿದೆ. ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಯಲ್ಲಿ ಟೆಂಡರ್ ಹಗರಣ ನಡೆದಿದ್ದರೂ ಕೈ ಹೈಕಮಾಂಡ್ ಮಾತನಾಡದಂತಾಗಿದೆ ಎಂದರು.
Related Articles
ಸಾವಿರಾರು ಜನ ಭಾಗವಹಿಸಿರುವ ಕಾರ್ಯಕ್ರಮದಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ಪೈಕಿ ಕೆಲವು ಜನರಷ್ಟೇ ಕೈ ಕೈ ಮಿಲಾಯಿಸಿದ್ದು, ಅವರವರ ನಾಯಕರ ಬಗ್ಗೆ ಅಭಿಮಾನದಿಂದ ಘೋಷಣೆ ಕೂಗಿದ್ದಾರೆ ಅಷ್ಟೇ. ಆ ರೀತಿಯ ಘಟನೆ ಏನೂ ನಡೆದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸಮರ್ಥಿಸಿಕೊಂಡರು.
Advertisement
ಪ್ರೀತಂಗೌಡ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ನಮ್ಮ ಎನ್‌ಡಿಎ ನಾಯಕರು. ನಮ್ಮಲ್ಲಿ ಅವರಿಗೆ ಇರಬೇಕಾದ ಗೌರವ ಇದ್ದೇ ಇದೆ. ಪ್ರೀತಂಗೌಡ ಭವಿಷ್ಯದ ಬಿಜೆಪಿ ನಾಯಕರಾಗಿದ್ದು, ಅವರನ್ನು ರಕ್ಷಣೆ ಮಾಡಿಕೊಂಡು ಕುಮಾರಸ್ವಾಮಿ ಅವರಿಗೂ ಗೌರವ ನೀಡಿ ನಮ್ಮ ಮೈತ್ರಿ ಮುಂದುವರಿಸುತ್ತೇವೆ.
ವೇದಿಕೆಗೆ ಬಹಳ ಜನ ಹತ್ತಿಲ್ಲ. ವೇದಿಕೆ ದೊಡ್ಡದಿರಲಿಲ್ಲ. ಎಲ್ಲರಿಗೂ ಗೌರವ ಇದೆ. ರಾಜಕಾರಣದಲ್ಲಿ ವರ್ತಮಾನದಲ್ಲಿದ್ದು, ಭವಿಷ್ಯದ ಬಗ್ಗೆ ಯೋಚನೆ ಮಾಡಿ ರಾಜಕಾರಣ ಮಾಡಬೇಕು. ನಿನ್ನೆಯ ಬಗ್ಗೆ ಅಲ್ಲ. ಊಹಾತ್ಮಕ ಪ್ರಶ್ನೆಗೆ ಉತ್ತರಿಸಲ್ಲ ಎಂದು ಸಮರ್ಥಿಸಿಕೊಂಡರು.