Advertisement

ಸಿದ್ಧಗೊಳ್ಳುತ್ತಿದೆ ಅಟಲ್‌ ಟನೆಲ್‌: ಪ್ರತಿ ದಿನ 3 ಸಾವಿರ ವಾಹನ ಸಂಚಾರ ನಡೆಸುವ ಸಾಮರ್ಥ್ಯ

01:57 AM Aug 27, 2020 | Hari Prasad |

ಈ ಟನೆಲ್‌ನ ಉದ್ದ ಬರೋಬ್ಬರಿ 8.3 ಕಿ.ಮೀ. ದೂರ. ಸಮುದ್ರಮಟ್ಟದಿಂದ 3 ಸಾವಿರ ಮೀಟರ್‌ ಎತ್ತರ.

Advertisement

ಹಿಮಾಚಲ ಪ್ರದೇಶದ ಮನಾಲಿಯಿಂದ ಲಡಾಖ್‌ ವರೆಗೆ ಅದನ್ನು ನಿರ್ಮಿಸಲಾಗುತ್ತಿದೆ.

‘ಬಾರ್ಡರ್‌ ರೋಡ್‌ ಆರ್ಗನೈಸೇಷನ್‌’ (BRO) ಅದರ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ.

ಮುಂದಿನ ತಿಂಗಳ ಅಂತ್ಯಕ್ಕೆ ಕಾಮಗಾರಿ ಮುಕ್ತಾಯವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಲೋಕಾರ್ಪಣೆಗೊಳಿಸುವ ಸಾಧ್ಯತೆ ಇದೆ. ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಯೋಜನೆ ಬಗ್ಗೆ ಘೋಷಣೆ ಮಾಡಿದ್ದರಿಂದ ಅವರ ಹೆಸರನ್ನೇ ಇರಿಸಲಾಗಿದೆ.

ಭೌಗೋಳಿಕ ಸವಾಲುಗಳು
ಕಡಿದಾಗಿರುವ ಪರ್ವತ ಪ್ರದೇಶ ಮತ್ತು ಭೌಗೋಳಿಕವಾಗಿ ನಿರ್ಮಾಣ ಕಾರ್ಯಕ್ಕೆ ಹಲವು ಅಡ್ಡಿಗಳು ಎದುರಾಗಿದ್ದುದರಿಂದ 2015ರ ಫೆಬ್ರವರಿಗೆ ಕಾಮಗಾರಿ ಪೂರ್ತಿಗೊಂಡಿರಲಿಲ್ಲ. ಅಗತ್ಯವಾಗಿರುವ ಜಮೀನು ಪಡೆದುಕೊಳ್ಳುವುದು, ಸೇರಿ ನಾಲಾದಿಂದ ಬರುತ್ತಿರುವ ನೀರು ಹೀಗೆ ಹಲವು ಅಡ್ಡಿಗಳು ಉಂಟಾಗಿದ್ದವು.

Advertisement

ಕೋವಿಡ್ 19 ಸವಾಲು
– ಕೋವಿಡ್ 19 ಸೋಂಕಿನ ನಡುವೆಯೂ ಹಲವಾರು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಾಮಗಾರಿ ತಡೆಯಿಲ್ಲದೆ ಮುಂದುವರಿದಿದೆ.

– ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶೀಘ್ರದಲ್ಲಿಯೇ ಸ್ಥಳಕ್ಕೆ ಆಗಮಿಸಿ ಪ್ರಗತಿ ವೀಕ್ಷಿಸಲಿದ್ದಾರೆ.


ಪ್ರಯೋಜನವೇನು?

– ಲಾಹುಲ್‌ ಮತ್ತು ಸ್ಪಿಟಿ ಪ್ರದೇಶಗಳಿಗೆ ಚಳಿಗಾಲದಲ್ಲಿ ಕೂಡ ನಿರಂತರ ರಸ್ತೆ ಸಂಪರ್ಕ ಒದಗಿಸಲು.

– ಜಮ್ಮು ಮತ್ತು ಕಾಶ್ಮೀರಕ್ಕೆ ಸೇನೆ ರವಾನೆ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

– ಯಾವುದೇ ರೀತಿಯ ಹವಾಮಾನದಲ್ಲಿಯೂ ಪ್ರತಿ ದಿನ 3 ಸಾವಿರ ವಾಹನ ಸಂಚಾರ ನಡೆಸುವ ಸಾಮರ್ಥ್ಯ.

700 : ಮಂದಿ ಹಲವು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

1,700 : ಕೋಟಿ ರೂ. ಆರಂಭದಲ್ಲಿ ಮೀಸಲಾಗಿ ಇರಿಸಿದ್ದ ಮೊತ್ತ.

3,200 : ಕೋಟಿ ರೂ. ಸೆಪ್ಟಂಬರ್‌ ವೇಳೆಗೆ ವೆಚ್ಚವಾಗಲಿರುವ ಮೊತ್ತ.

Advertisement

Udayavani is now on Telegram. Click here to join our channel and stay updated with the latest news.

Next