Advertisement

ಬ್ಯಾಂಕಿಂಗ್‌ ವ್ಯವಹಾರ ಅರಿಯಿರಿ

04:00 PM Feb 07, 2020 | Suhan S |

ಯಲಬುರ್ಗಾ: ದೇಶದಲ್ಲಿ ನಗದು ರಹಿತ ವಹಿವಾಟು ಹೆಚ್ಚಿಸಿ ಡಿಜಿಟಲ್‌ ವ್ಯವಹಾರಕ್ಕೆ ಉತ್ತೇಜನ ನೀಡುವಲ್ಲಿ ಯುವ ಜನತೆ ಪಾತ್ರ ಮಹತ್ವದ್ದು ಎಂದು ಅಮೂಲ್ಯ ಆರ್ಥಿಕ ಸಾಕ್ಷರತಾ ಸಮನ್ವಯಾಧಿಕಾರಿ ಬಿ. ಪಂಪನಗೌಡ ಪಾಟೀಲ ಹೇಳಿದರು.

Advertisement

ಪಟ್ಟಣದ ಶ್ರೀಮಂಜುನಾಥ ಪಪೂ ಕಾಲೇಜಿನಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಬ್ಯಾಂಕ್‌ಗಳ ಮಹತ್ವದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಿಂದಲೇ ಬ್ಯಾಂಕಿನಲ್ಲಿ ವ್ಯವಹರಿಸಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದರ ಜತೆಗೆ ತಂತ್ರಜ್ಞಾನದ ಬಳಕೆ ಮತ್ತು ಅದರಿಂದ ಆಗುವಂತಹ ಪ್ರಯೋಜನ ಅರಿಯಬೇಕು. ಆ ಮೂಲಕ ಡಿಜಿಟಲ್‌ ವ್ಯವಹಾರ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಹಣಕಾಸಿನ ವ್ಯವಹಾರ ಅಥವಾ ಬ್ಯಾಂಕ್‌ ಸೇವೆಗಳ ಕುರಿತು ಮೊಬೈಲ್‌ ಗಳಿಗೆ ಬರುವ ಕೆಲವು ಸುಳ್ಳು ಜಾಹೀರಾತು, ಸಂದೇಶಗಳುಮತ್ತು ವಂಚಕರ ಕರೆಗಳಿಂದ ಮೋಸ ಹೋಗದಂತೆ ಜಾಗೃತರಾಗಬೇಕು ಎಂದರು. ನಮ್ಮ ಜೀವನದಲ್ಲಿ ಉಳಿತಾಯ ಎನ್ನುವುದು ಅಂತ್ಯಂತ ಪ್ರಮುಖವಾಗಿದ್ದು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ದಂದು ವೆಚ್ಚ ಮಾಡದೆ ಉಳಿತಾಯ ಮೈಗೂಡಿಸಿಕೊಳ್ಳಬೇಕು ಎಂದರು.

ಬ್ಯಾಂಕಿಂಗ್‌ ಕ್ಷೇತ್ರ ನಿತ್ಯದ ಹಣಕಾಸಿನ ವ್ಯವಹಾರಗಳನ್ನು ಸುಲಭದಲ್ಲಿ ನಡೆಸಲು ಡಿಜಿಟಲ್‌ ವೇದಿಕೆ ಮೂಲಕ ಅವಕಾಶ ಒದಗಿಸಿದೆ. ನಾವಿರುವ ಸ್ಥಳದಿಂದಲೇ ಮೊಬೈಲ್‌ ಮೂಲಕ ಹಣಕಾಸಿನ ವ್ಯವಹಾರ ಮತ್ತು ಬ್ಯಾಂಕ್‌ ವ್ಯವಹಾರ ನಡೆಸಬಹುದು. ಈ ಸೇವೆ ಪಡೆಯಲು ಬ್ಯಾಂಕ್‌ ಖಾತೆಗೆ ಮೊಬೈಲ್‌ ಸಂಖ್ಯೆ ಜೋಡಿಸಿ ಡಿಜಿಟಲ್‌ ವ್ಯವಹಾರ ನಡೆಸುವುದರ ಜತೆಗೆ ನಮ್ಮ ಅಮೂಲ್ಯ ಸಮಯ, ಶ್ರಮ, ಹಣ ಉಳಿಸಿ ಸರಳ ಜೀವನ ನಡೆಸಬಹುದು. ಪ್ರತಿಯೊಬ್ಬರು ಬ್ಯಾಂಕ್‌ ಖಾತೆ ಹೊಂದಿರಬೇಕು. ಖಾತೆದಾರರು ರೂಪೆ, ಡೆಬಿಟ್‌ ಕಾರ್ಡ್‌ ಪಡೆದು ಅದರ ಮೂಲಕವೂ ನಗದು ರಹಿತ ವ್ಯವಹಾರ ನಡೆಸಬಹುದು ಎಂದರು.

ಕಾಲೇಜಿನ ಪ್ರಾಚಾರ್ಯ ಗಂಗಾಧರ ದಫೇದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತಂತ್ರಜ್ಞಾನ ಇಂದು ಜಗತ್ತನ್ನು ಸಣ್ಣದಾಗಿಸುತ್ತಿದೆ. ತಂತ್ರಜ್ಞಾನದ ಮೂಲಕ ನಾವು ನಮ್ಮ ಜೀವನವನ್ನು ಸರಳವಾಗಿಸಿಕೊಳ್ಳುವ ಅನಿವಾರ್ಯತೆ ಇದೆ. ಇಂತಹ ಕಾರ್ಯಕ್ರಮಗಳು ಡಿಜಿಟಲ್‌ ವ್ಯವಹಾರದ ಕುರಿತು ನಮ್ಮಲ್ಲಿರುವಂತಹ ಅನೇಕ ಅನುಮಾನಗಳನ್ನು ಮತ್ತು ಭಯ ನಿವಾರಿಸಲು ಸಹಕಾರಿಯಾಗಿದೆ ಎಂದರು.

ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಕುರಿತು ಬ್ಯಾಂಕ್‌ನ ಖಾತೆ ಮತ್ತು ವಹಿವಾಟಿನ ಮುಖಾಂತರ ಆಗುವ ಲಾಭಗಳು ಹಣವನ್ನು ವರ್ಗಾಯಿಸುವ ಮತ್ತು ಪಾವತಿಸುವ ಹಲವಾರು ವಿಷಯಗಳನ್ನು ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಳ್ಳಬೇಕು. ಬ್ಯಾಂಕ್‌ಗಳು ನೀಡುವ ಸೇವೆಗಳು ಮತ್ತು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆದಾಯವನ್ನು ಹೆಚ್ಚಿಸಿಕೊಂಡು ಜೀವನಮಟ್ಟ ಸುಧಾರಿಸಿಕೊಳ್ಳಬೇಕು. ನಿಮ್ಮ ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಈ ಮಾಹಿತಿ ರವಾನಿಸಬೇಕು ಎಂದರು.

Advertisement

ಉಪನ್ಯಾಸಕ ಎಸ್‌.ಕೆ. ಪಾಟೀಲ್‌, ಮುಖ್ಯಶಿಕ್ಷಕ ಎಸ್‌. ಎಲ್‌. ಬಸವರಾಜ, ಶರಣಪ್ಪ ಹೊರಪೇಟೆ ಮುತ್ತುರಾಜ ಜುಂಜಾ, ಆರ್ಥಿಕ ಸಾಕ್ಷರತಾ ಕ್ಷೇತ್ರ ಕೇಂದ್ರ ಸಿಬ್ಬಂದಿ ನಾಗರಾಜ ಹೊಸಳ್ಳಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next