Advertisement
ಈಕೆ ಭಾರತದ ಪ್ರಪ್ರಥಮ ಮಹಿಳಾ ವೈದ್ಯೆ.31 ಮಾರ್ಚ್ 1865ರಲ್ಲಿ ಪೂನಾದಲ್ಲಿ ಜನಿಸಿದ ಆನಂದಿ ಅವರ ಬಾಲ್ಯದ ಹೆಸರು ಯಮುನಾ ಎಂದಾಗಿತ್ತು. ಒಂಬತ್ತನೇ ವಯಸ್ಸಿಗೆ ವಿವಾಹವಾದರು ಸಹ, ಪತಿ ಗೋಪಾಲ್ ರಾವ್ ಅವರ ಪ್ರೋತ್ಸಾಹದಿಂದ ಶಿಕ್ಷಣ ಪಡೆಯುವಂತಾಯಿತು.
Related Articles
Advertisement
ಎಸ್ ಡಿ ಎಂ, ಉಜಿರೆ
2) ಅಲ್ಪಾಯುಷದಲ್ಲೇ ಅರಳಿ ಹೋದ ಯಮುನೆ ಉರ್ಫ್ ಆನಂದಿಬಾಯಿ
“ಹೆಣ್ಣು ಪಂಜರದ ಗಿಳಿಯಲ್ಲ , ದೇಶ ಬದಲಿಸೋ ಶಕ್ತಿ”. ಇತಿಹಾಸದುದ್ದಕ್ಕೂ ಹೆಣ್ತನದ ಸಬಲೀಕರಣಕ್ಕಾಗಿ ಸಮಾಜದ ಎದುರಿಗೆ ನಿಂತ ಸಾಧಕಿಯರು ಸಿಗುತ್ತಾರೆ. ಅಂತವರಲ್ಲಿ ತನ್ನ ಅಲ್ಪಾಯುಷದಲ್ಲೇ ಅರಳಿ ಹೋದ ಯಮುನೆ ಉರ್ಫ್ ಆನಂದಿಬಾಯಿಯ ಕಥೆ ಇದು.
ಮರಾಠಿ ಸಂಪ್ರದಾಯಿಕ ಬ್ರಾಹ್ಮಣ ಕುಟುಂಬದಿ ಜನಿಸಿದ ಯಮುನ. ಬಾಲ್ಯ ಕಳೆವ ಮುಂಚೆಯೇ ಕರಿಮಣಿಗೆ ಕೊರಳು ಕೊಟ್ಟವಳು, ತನ್ನ ಒಂಬತ್ತನೇ ವಯಸ್ಸಿನಲ್ಲೇ ತನಗಿಂತ ಮೂರು ಪಟ್ಟು ಹಿರಿಯ ವಿಧುರ ಗೋಪಾಲ್ ಜೋಷಿಯ ವಿವಾಹವಾದವಳು. ಅವರು ಪತ್ನಿಯನ್ನು ತಾನು ಓದಿಸುತ್ತೇನೆಂಬ ವಿಚಿತ್ರ ಷರತ್ತಿನ ಮೇಲೆ ವಿವಾಹವಾಗಿದ್ದರು. ವಿವಾಹದ ನಂತರ ಯಮುನ ಆನಂದಿಯಾದಳು. ಗೋಪಾಲ್ ರಾವ್ ಓದಿಸುವ ಹಠ ನೆತ್ತಿಗೇರಿತು. ಆನಂದಿಗೆ ಬೀಳುತ್ತಿದ್ದ ಏಟು ಮನೆಗೆಲಸ ಮಾಡದಿದ್ದಕ್ಕಲ್ಲ ಓದದಿದ್ದಕ್ಕೆ. ತನ್ನ ತುಂಟ ವಯಸ್ಸಿನಲ್ಲೇ ಗರ್ಭಿಣಿಯಾದಳು. ಹದಿನಾಲ್ಕನೇ ವಯಸ್ಸಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಳು ಆನಂದಿ. ಆದರೆ ಮಗು ಬದುಕಿದ್ದು ಕೇವಲ ಹತ್ತು ದಿನ. ಆ ಮೆದು ದೇಹ-ಮನಸು ಆಗಲೇ ಮಾಗಿ ಹೋಯಿತೇನೋ. ಸಾಂಪ್ರದಾಯಿಕ ಸಮಾಜದಲ್ಲಿ ಪುರುಷ ವೈದ್ಯರಿಗೆ ತೋರಿಸಲಾಗದೆ ಹೆಣ್ಣು ಮಗಳಾಗಿ ತಾನು ಅನುಭವಿಸಿದ್ದ ಕಷ್ಟ ಮನವರಿಕೆ ಆಗಿತ್ತು ಅವಳಿಗೂ. ಅವಳಲ್ಲೂ ಓದುವ ಛಲ ಚುರುಕಾಯಿತು, ವೈದ್ಯಳಾಗುವ ಪಣತೊಟ್ಟಳು. ಪತಿಯ ತನ್ನ ಹಠಕ್ಕೆ ಸಾಥ್ ಸಿಕ್ಕಿತ್ತು. ದೇಹ ಸಹಕರಿಸದಿದ್ದರೂ ಮನಸ್ಸು ಕಲ್ಲಾಗಿತ್ತು ಹೊರಟೆ ಬಿಟ್ಟಳು ಸಾಗರಗಳ ದಾಟಿ, ಗಂಡು ಸಮಾಜದ ಧೃತಿಗೆಡಿಸಿ ಕಿವಿ ಕಿವುಡಾಯಿತು ಮಾತುಗಳಿಗೆ, ತಿಳಿದಿದ್ದಳು ಅವಳು ಬದುಕಿನ ದಾರಿಯ.
ಈ ಎಲ್ಲದರ ನಡುವೆ ವಯಸ್ಸಿನಲ್ಲಿ ಚಿಕ್ಕವಳಾಗಿದ್ದ ಅನಂದಿ, ಬದುಕಿನಲ್ಲಿ ದೂಡ್ಡವಳಾಗಿ ಬೆಳೆದಿದ್ದಳು. ಕಷ್ಟಗಳನ್ನೇ ಕರಗಿಸುವ ಕಲ್ಲಾದಳು. ವಿದೇಶದಲ್ಲಿ ದೃಢವಾಗಿ ನಿಂತು ಡಿಗ್ರಿ ಹಾಗೂ ಎಂ.ಡಿ ಯನ್ನು ಪೂರೈಸಿದಳು. 1886ರಲ್ಲಿ ಭಾರತಕ್ಕೆ ಹಿಂತುರಿಗಿದಳು. ಅವಳಿಗೆ ಅಭೂತಪೂರ್ವವಾಗಿ ಸ್ವಾಗತ ಸಿಕ್ಕಿತು. ಈ ಖುಷಿ ಅರೆಗಳಿಗೆಯದ್ದಾಗಿತ್ತು ಚಳಿ ಹಾಗೂ ಆಹಾರಕ್ಕೆ ಒಗ್ಗದ ಅವಳ ದೇಹಕ್ಕೆ ಅದಾಗಲೇ ಟಿ.ಬಿ ತಗುಲಿತ್ತು. ಕಾಲಡಿ ಹೂತಿದ್ದ ಸಮಾಜದ ಹುಳುಗಳು ದುರ್ಬಲವಾಗುತ್ತಿದ್ದಂತೆ ಮೇಲೆದ್ದು ನಿಂತವು. ” ಬ್ರಾಹ್ಮಣ ಸಮೂದಾಯದವಳಾಗಿ ಸಾಗರ ದಾಟಿದ್ದಕ್ಕೆ ಸಿಕ್ಕಿದ ಶಾಪವೆಂಬ ಮಾತುಗಳು ಕೇಳಿಬಂದವು. ಪಂಡಿತರು ಯಾರು ಅವಳನ್ನು ಮುಟ್ಟಲು ಒಪ್ಪಲಿಲ್ಲ, “ಅವಳಿಗೆ ಸಿಕ್ಕಿದ ಫಲವೆಂದು” ಕೈ ತೊಳೆದುಕೊಂಡರು. ಕೊನೆಗೂ ತನ್ನ ಆಸೆಯಂತೆ ಸೇವೆ ಸಲ್ಲಿಸಲಾಗದೆ 1887ರಲ್ಲಿ ಕೊನೆ ಉಸಿರೆಳೆದಳು ಅನಂದಿ.
ಇಂದು ಹಲವು ಅನಂದಿಗಳು ಭಾರತ ಆರೋಗ್ಯ ವ್ಯವಸ್ಥೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ . ಅಂದು ಕಿಚ್ಚು ಹಚ್ಚಿದ ಆನಂದಿ ಎಂದಿಗೂ ಮಹಿಳೆಯರಿಗೆ ದಾರಿದೀಪದಂತೆ.
– ನಿಧೀಶ ಕೆ ಶೆಟ್ಟಿಗಾರ್