Advertisement

‘Mr. Rascal’ನ ನಟಿ ಯಾರೀಕೆ ‘ಊಸರವಳ್ಳಿ’ ಪಾಯಲ್ ಘೋಷ್?

01:37 PM Sep 20, 2020 | Hari Prasad |

ಮುಂಬಯಿ: ಚಿತ್ರರಂಗವೇ ಹಾಗೆ. ಇಲ್ಲಿ ಕೆಲವರು ತಮ್ಮ ಕೆಲಸಗಳ ಮೂಲಕ ಪ್ರಸಿದ್ಧಿಗೆ ಬಂದರೆ ಇನ್ನು ಕೆಲವರು ಗಾಸಿಪ್ ಮತ್ತು ಹೇಳಿಕೆಗಳ ಮೂಲಕ ಹೆಡ್ ಲೈನ್ ನ್ಯೂಸ್ ಆಗುತ್ತಾರೆ.

Advertisement

ಇಂತವರ ಸಾಲಿಗೆ ಕಿರುತೆರೆ ಮತ್ತು ಬಹುಭಾಷಾ ನಟಿ ಪಾಯಲ್ ಘೋಷ್ ಎಂಬ ನಟಿ ಇದೀಗ ಸೇರ್ಪಡೆಗೊಂಡಿದ್ದಾರೆ.

‘ಬ್ಲ್ಯಾಕ್ ಫ್ರೈಡೇ’, ‘ನೊ ಸ್ಮೋಕಿಂಗ್’ ಮೊದಲಾದ ಸಿನೆಮಾಗಳ ನಿರ್ದೇಶಕ, ಬರಹಗಾರ, ನಿರ್ಮಾಪಕರಾಗಿರುವ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳದ ಆರೋಪವನ್ನು ಮಾಡುವ ಮೂಲಕ ನಟಿ ಪಾಯಲ್ ಘೋಷ್ ಇದೀಗ ಏಕಾಏಕಿ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.

ಶನಿವಾರದಂದು ಪಾಯಲ್ ತಮ್ಮ ಈ ಸ್ಪೋಟಕ ಟ್ವೀಟ್ ಮೂಲಕ ಅನುರಾಗ್ ಮೇಲೆ ಈ ಗಂಭೀರವಾದ ಆರೋಪವನ್ನು ಮಾಡಿದ್ದರು. ಮಾತ್ರವಲ್ಲದೇ ಈ ಟ್ವೀಟ್ ನಲ್ಲಿ ಅವರು ಪ್ರಧಾನ ಮಂತ್ರಿ ಕಛೇರಿ ಹಾಗೂ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯನ್ನೂ ಸಹ ಟ್ಯಾಗ್ ಮಾಡಿದ್ದರು.

ಇದನ್ನೂ ಓದಿ: ‘ವಾವ್.. ನನ್ನ ಬಾಯಿ ಮುಚ್ಚಿಸುವ ಪ್ರಯತ್ನಕ್ಕೆ ಇಷ್ಟು ಸಮಯ ವ್ಯಯಿಸಿದಿರಲ್ಲಾ…’!: ಅನುರಾಗ್

Advertisement


ಹೀಗೆ ಏಕಾ ಏಕಿ ಸುದ್ದಿಯ ಕೇಂದ್ರಬಿಂದುವಾದ ನಟಿ ಪಾಯಲ್ ಘೋಷ್ ಬಾಲಿವುಡ್ ಮತ್ತು ದಕ್ಷಿಣ ಭಾರತದ ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ದಾರೆ.

2017ರಲ್ಲಿ ರಿಷಿ ಕಪೂರ್ ಮತ್ತು ಪರೇಶ್ ರಾವಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ‘ಪಟೇಲ್ ಕಿ ಪಂಜಾಬ್ ಶಾದಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಪಡೆದಿದ್ದರು. ಇನ್ನು 2008ರಲ್ಲಿಯೇ ಪಾಯಲ್ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಅಡ್ವಾಣಿ ಎದುರು ಸ್ಪರ್ಧೆ, 15 ವರ್ಷದ ನಟಿ ಜತೆ ಸೂಪರ್ ಸ್ಟಾರ್ ವಿವಾಹ! ಪ್ರಿಯತಮೆ ಮುನಿಸು

‘ಪ್ರಯಾಣಂ’, ‘ವರ್ಷಧಾರೆ’, ‘ಊಸರವಳ್ಳಿ’ ಮತ್ತು ‘Mr. Rascal’ ಸೇರಿದಂತೆ ದಕ್ಷಿಣ ಭಾರತದ ಅದರಲ್ಲೂ ಮುಖ್ಯವಾಗಿ ತೆಲುಗು ಚಿತ್ರಗಳಲ್ಲಿ ಪಾಯಲ್ ಘೋಷ್ ಅವರು ನಾಯಕಿಯಾಗಿ ನಟಿಸಿದ್ದಾರೆ.

‘ಸಾಥ್ ನಿಭಾನಾ ಸಾಥಿಯಾ’ ಎಂಬ ಜನಪ್ರಿಯ ಕಿರುತೆರೆ ಕಾರ್ಯಕ್ರಮದಲ್ಲೂ ಪಾಯಲ್ ಘೋಷ್ ಅವರು ಭಾಗವಹಿಸಿದ್ದಾರೆ.

ಈ ರೀತಿಯಾಗಿ ಕಳೆದ 12 ವರ್ಷಗಳಿಂದ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ತನ್ನ ನಟನಾ ಪ್ರತಿಭೆಯಿಂದ ಮಿಂಚಿರುವ ಈ ನಟಿ ಇದೀಗ ಹೆಸರಾಂತ ನಿರ್ದೇಶಕ ಹಾಗೂ ಕ್ರಿಯಾಶೀಲ ಬರಹಗಾರ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳ ಆರೋಪವನ್ನು ಮಾಡಿರುವುದು ಈ ನಟಿಯನ್ನು ಇದೀಗ ಟಾಕ್ ಆಫ್ ದಿ ಟೌನ್ ಆಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next