ಉಡುಪಿ: ಅಮೆರಿಕದ ಸ್ಟಾನ್‌ಫೋರ್ಡ್ ವಿ.ವಿ.ಯಲ್ಲಿ ಸ್ನಾತ ಕೋತ್ತರ ಅಧ್ಯಯನಕ್ಕಾಗಿ ಮಣಿಪಾಲ ಎಐಟಿಯ ಕಂಪ್ಯೂಟರ್ ವಿಜ್ಞಾನ ಎಂಜಿನಿಯರಿಂಗ್ ವಿಭಾಗದ ಅಕ್ಷತಾ ಕಾಮತ್ ಮತ್ತು ಏರೋ ನಾಟಿಕಲ್ ಎಂಜಿನಿ ಯರಿಂಗ್‌ನ ಧ್ರುವ ಸೂರಿ ಪ್ರತಿಷ್ಠಿತ ನೈಟ್-ಹೆನೆಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಯಾಗಿದ್ದಾರೆ.
ಸಮುದಾಯ ಎದುರಿಸುತ್ತಿರುವ ಸಂಕೀರ್ಣ ಸವಾಲುಗಳನ್ನು ಪರಿಹರಿ ಸಲು ಸಹಭಾಗಿತ್ವ, ಶೋಧನೆ ಮತ್ತು ಸಂವಹನಕ್ಕಾಗಿ ಬಹುವಿಷಯ, ಬಹು ಸಂಸ್ಕೃತಿ ಸಮುದಾಯದಲ್ಲಿ ಮೂಡುವ ಹೊಸ ನಾಯಕರಿಗೆ ಈ ವಿದ್ಯಾರ್ಥಿವೇತನ ಪುರಸ್ಕಾರವನ್ನು ನೀಡಲಾಗುತ್ತಿದೆ. 26 ದೇಶಗಳ 76 ವಿದ್ಯಾರ್ಥಿಗಳಲ್ಲಿ ಅಕ್ಷತಾ ಮತ್ತು ಧ್ರುವ ಮಾತ್ರ ಭಾರತದಿಂದ ಆಯ್ಕೆಯಾದ ವಿದ್ಯಾರ್ಥಿಗಳು.
ಉಡುಪಿಯ ಅಕ್ಷತಾ ಕಾಮತ್ ಸ್ಟಾನ್‌ಫೋರ್ಡ್ ಗ್ರಾಜುವೇಟ್ ಸ್ಕೂಲ್ ಆಫ್ ಎಜುಕೇಶನ್‌ನಲ್ಲಿ ಶಿಕ್ಷಣ ಅಂಕಿ ಅಂಶ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಲಿ ದ್ದಾರೆ. ಇವರು ವಿಶೇಷವಾಗಿ ಬಡ ವರ್ಗ ದವರಿಗೆ ನೆರವಾಗುವ ವೇದಿಕೆ ಯೊಂದನ್ನು ಸ್ಥಾಪಿಸಿದ್ದಾರೆ.
ಕೋವಿಡ್ 19 ಸವಾಲುಗಳನ್ನು ಇದಿರಿ ಸಲು ಅವರು ಹಲವು ವೈದ್ಯಕೀಯ ತಂತ್ರ ಜ್ಞಾನಗಳನ್ನು ಅಭಿವೃದ್ಧಿಪಡಿಸಿ ದ್ದಾರೆ. ಸ್ಟಾನ್‌ಫೋರ್ಡ್++ ಹ್ಯಾಕತಾನ್‌ನಲ್ಲಿ ಬಹುಮಾನ ಗಳಿಸಿದ್ದರು. ಇದಕ್ಕೆ ಮಣಿಪಾಲ ಹೆಲ್ತ್ ಇನ್ಫಾರ್ಮೆಟಿಕ್ಸ್‌ನ ಡಾ| ಟಿಎಂಎ ಪೈ ದತ್ತಿಪೀಠದಿಂದ ಬೆಂಬಲ ನೀಡಲಾಗಿತ್ತು.
ದಿಲ್ಲಿ ಮೂಲದ ಧ್ರುವ ಸೂರಿ ಅವರು ಸ್ಟಾನ್‌ಫೋರ್ಡ್ ಸ್ಕೂಲ್‌ನ ಶಕ್ತಿ ಸಂಪನ್ಮೂಲ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸ ಲಿದ್ದಾರೆ. ಶಕ್ತಿ, ಹವಾ ಮಾನದೊಂದಿಗೆ ಸಂಕಷ್ಟಪೀಡಿತ ಸಮುದಾಯಕ್ಕೆ ನೆರ ವಾಗುವ ಇರಾದೆ ಅವರಿಗೆ ಇದೆ. ಇವರಿಬ್ಬರ ಸಾಧನೆಯನ್ನು ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಎಂಐಟಿ ನಿರ್ದೇಶಕ ಡಾ| ಶ್ರೀಕಾಂತ ರಾವ್ ಶ್ಲಾ ಸಿದ್ದಾರೆ.