Advertisement

ಕಡಲ ಕಾವಲಿನಲ್ಲಿ ಕೆಎನ್‌ಡಿ ಸಕ್ರಿಯ

01:27 AM Sep 18, 2020 | mahesh |

ಮಂಗಳೂರು: ಕಡಲು/ ತೀರದಲ್ಲಿ ಭದ್ರತೆ ನೀಡುವ ಕರಾವಳಿ ಕಾವಲು ಪೊಲೀಸ್‌ಗೆ (ಸಿಎಸ್‌ಪಿ) ಸ್ಥಳೀಯರನ್ನೇ ನೇಮಿಸಿಕೊಳ್ಳಬೇಕೆಂಬ ಬಹುಕಾಲದ ಬೇಡಿಕೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಆದರೆ ಸ್ಥಳೀಯರನ್ನೊಳಗೊಂಡ ಕೆಎನ್‌ಡಿ(ಕರಾವಳಿ ನಿಯಂತ್ರಣ ದಳ) ಕರಾವಳಿ ಕಾವಲು ಪೊಲೀಸರಿಗೆ ಸಾಥ್‌ ನೀಡಿ ಕರಾವಳಿಯ ಕಾವಲು ಕಾಯುತ್ತಿದೆ.

Advertisement

ಸಮುದ್ರದ ಬಗ್ಗೆ ಸರಿಯಾದ ಮಾಹಿತಿ ಇರುವವರು, ಬೋಟ್‌ಗಳ ಬಗ್ಗೆ ತಿಳಿದಿರುವವರು, ಉತ್ತಮ ಈಜುಪಟುಗಳು, ಸಮುದ್ರ ಭಾಗದ ವಾತಾವರಣಕ್ಕೆ ಹೊಂದಿಕೊಳ್ಳುವ ವರನ್ನು ಅರ್ಥಾತ್‌ ಸಮುದ್ರ ಪಕ್ಕದಲ್ಲೇ ವಾಸವಿರುವ ಮೀನುಗಾರ ಸಮುದಾಯ ಅಥವಾ ಮೀನು ಗಾರಿಕಾ ವೃತ್ತಿ ನಡೆಸುವ ಕುಟುಂಬ ಗಳ ಯುವಕರನ್ನೇ ಕರಾವಳಿ ಕಾವಲು ಪೊಲೀಸ್‌ಗೆ ನೇಮಕ ಮಾಡಿಕೊಳ್ಳಬೇಕು ಎಂಬುದು ಹಲವು ವರ್ಷಗಳಿಂದ ಇರುವ ಬೇಡಿಕೆ. ಸಮುದ್ರ/ತೀರದಲ್ಲಿ ಅವಘಡಗಳಾ ದಾಗ, ಅನಪೇಕ್ಷಿತ ಘಟನೆಗಳಾದಾಗ ಈ ವಿಚಾರ ಚರ್ಚೆಗೆ ಬರುತ್ತಿದೆ. ಆದರೆ ಈ ಕುರಿತಾಗಿ ಸರಕಾರದ ಮಟ್ಟದಲ್ಲಿ ಇನ್ನೂ ನಿರ್ಧಾರಗಳು ಹೊರಬಿದ್ದಿಲ್ಲ.

ಪ್ರತ್ಯೇಕ ನೇಮಕಾತಿ ಬೇಕು
ಸದ್ಯ ಕರಾವಳಿ ಕಾವಲು ಪೊಲೀಸ್‌ಗೆ ಜಿಲ್ಲಾ ಪೊಲೀಸ್‌ನಿಂದ ಕೆಲವು ಸಿಬಂದಿಯನ್ನು ಡೆಪ್ಯುಟೇಶನ್‌ನಲ್ಲಿ ನೀಡಲಾಗುತ್ತದೆ. ಒಂದುವೇಳೆ ಕರಾವಳಿ ಕಾವಲು ಪೊಲೀಸ್‌ಗೆ ಪ್ರತ್ಯೇಕ ನೇಮಕಾತಿ ನಡೆದರೆ, ಅದಕ್ಕೆ ಪೂರಕವಾಗಿ ಸರಕಾರ ನಿರ್ಧಾರಗಳನ್ನು ತೆಗೆದುಕೊಂಡು ಸ್ಥಳೀಯರ ಆಯ್ಕೆಗೆ ಅವಕಾಶ ನೀಡಿದರೆ ಮಾತ್ರ ಇದು ಕಾರ್ಯಸಾಧ್ಯವಾಗಬಹುದು.

ತರಬೇತಿ ಪಡೆದರೂ ನಿರಾಸಕ್ತಿ
ಕರಾವಳಿಯ ಯುವಜನತೆ ಇಲಾಖೆಗೆ ಸೇರಬೇಕೆಂಬ ಉದ್ದೇಶ ದಿಂದ ಪೊಲೀಸ್‌ ಇಲಾಖೆ ಕಳೆದ ಬಾರಿ 240 ಮಂದಿಗೆ ಇಲಾಖೆಯ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಲು ಶಿಬಿರ ನಡೆಸಿತ್ತು. ಅರ್ಜಿ ಸಲ್ಲಿಸಿದವರು 40 ಮಂದಿ ಮಾತ್ರ. ಅದರಲ್ಲಿಯೂ ಆಯ್ಕೆ ಹಂತದವರೆಗೆ ಹೋದವರು ಸುಮಾರು ಐವರಷ್ಟೇ. ಅವರಲ್ಲಿ ಮೂವರು ಮಹಿಳೆಯರು. ನೇಮಕಾತಿ ಆದೇಶ ಇನ್ನಷ್ಟೇ ಆಗಬೇಕಿದೆ.

ಕರಾವಳಿ ಕಾವಲು ಪೊಲೀಸ್‌(ಸಿಎಸ್‌ಪಿ) ಜತೆಗೆ 200 ಮಂದಿಯನ್ನೊಳಗೊಂಡ ಕೆಎನ್‌ಡಿ (ಕರಾವಳಿ ನಿಯಂತ್ರಣ ದಳ) ಕೆಲಸ ಮಾಡುತ್ತಿದೆ. ಕೆಎನ್‌ಡಿ ಸಂಪೂರ್ಣವಾಗಿ ಸ್ಥಳೀಯರನ್ನೊಳಗೊಂಡಿರುವ ದಳ. ಗೃಹರಕ್ಷಕರ ನೆಲೆಯಲ್ಲಿ ಇವರ ಸೇವೆ ಪಡೆದುಕೊಳ್ಳಲಾಗುತ್ತಿದೆ. ಕರಾವಳಿ ಕಾವಲು ಪೊಲೀಸ್‌ಗೆ ಸ್ಥಳೀಯರ ನೇಮಕ ಮಾಡಿಕೊಳ್ಳಬೇಕಾದರೆ ಸರಕಾರದ ಮಟ್ಟದಲ್ಲಿಯೇ ತೀರ್ಮಾನವಾಗಬೇಕಾಗುತ್ತದೆ.
-ಚೇತನ್‌ ಕುಮಾರ್‌, ಎಸ್‌ಪಿ, ಕರಾವಳಿ ಕಾವಲು ಪೊಲೀಸ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next