Advertisement
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಾವು ರಾಜೀನಾಮೆ ನೀಡಿಲ್ಲವೆಂದು ಕೋರ್ಟ್ ಮೆಟ್ಟಿಲೇರಿರುವ ಪಿ.ನಾಗರಾಜು ಅಧ್ಯಕ್ಷಧಿರಾಗಿ ಕೆಲಸ ಮಾಡುವಂತೆಯೂ ಇಲ್ಲ. ಹೊಸದಾಗಿ ಎಂ.ಪಿ.ರವೀಂದ್ರ ಅಧ್ಯಕ್ಷರಾಗಿ ಆಯ್ಕೆಯಾಗುವಂತೆಯೂ ಇಲ್ಲ. ಆಡಳಿತಾಧಿಕಾರಿಯದೇ ಉಸ್ತುವಾರಿ. ಅಧ್ಯಕ್ಷರ ಆಯ್ಕೆ ಪ್ರತಿಷ್ಠೆಯಲ್ಲಿ ಲಕ್ಷಾಂತರ ರೈತರ ಸಂಸ್ಥೆ ಕೆಎಂಎಫ್ ಬಡವಾದಂತಾಗಿದೆ.
ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವಿಚಾರ ಏಕಸದಸ್ಯ ಪೀಠದಲ್ಲಿ ವಿಚಾರಣಾ ಹಂತದಲ್ಲಿದೆ. ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ವಿಭಾಗೀಯ ಪೀಠದ ಮೊರೆಹೋಗಿದ್ದರು.
Related Articles
ನೂತನ ಅಧ್ಯಕ್ಷರ ಆಯ್ಕೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಸಲ್ಲಿಸಿದ್ದ
ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಕೆ ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ, ಈ ಅರ್ಜಿಗೆ ಸಂಬಂಧಿಸಿದಂತೆ ಈಗಾಗಲೇ
ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ. ಅಲ್ಲದೆ ಮಾರ್ಚ್ 25ರಂದು ನಡೆದ ಕೆಎಂಎಫ್ ಆಡಳಿತ ಮಂಡಳಿ
ಸಭೆಯ ನಡಾವಳಿಗಳು ನ್ಯಾಯಾಲಯದ ವ್ಯಾಪ್ತಿಗೆ ಒಳಪಡಲಿವೆ ಎಂದು ಹೇಳಿದೆ. ಹೀಗಾಗಿ ಏಕಸದಸ್ಯ
ಪೀಠದ ಮುಂದೆಯೇ ಆದೇಶ ಪಡೆದುಕೊಳ್ಳಿ ಎಂದು ಹೇಳಿದ ನ್ಯಾಯಪೀಠ, ಅಲ್ಲದೆ ನ್ಯಾಯಾಲಯದ
ಮುಂದಿನ ಆದೇಶದವರೆಗೆ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಯಥಾಸ್ಥಿತಿ
ಮುಂದುವರಿಸಿ ಎಂದು ಸೂಚಿಸಿ ಅರ್ಜಿ ಇತ್ಯರ್ಥಗೊಳಿಸಿತು. ಈ ಮೊದಲು ಏಕಸದಸ್ಯ ಪೀಠದ ಮುಂದೆ
ಸಲ್ಲಿಕೆಯಾಗಿದ್ದ ನಾಗರಾಜು ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾ.ರವಿ ಮಳೀಮs…, ಮಾರ್ಚ್ 25ರಂದು
ನಡೆಯಲಿರುವ ಕೆಎಂಎಫ್ ಸಭೆಯ ಮುಂದೆ ನಡೆಯಲಿರುವ ಕೆಎಂಎಫ್ ಆಡಳಿತ ಮಂಡಳಿ ಸಭೆಯ ನಡಾವಳಿ ನ್ಯಾಯಾಲಯದ ವ್ಯಾಪ್ತಿಗೆ ಒಳಪಡಲಿದೆ ಎಂದು ಸೂಚಿಸಿದ್ದರು. ಜತೆಗೆ ಮಾರ್ಚ್ 28ರಂದು ನಡೆದ ವಿಚಾರಣೆಯಲ್ಲಿ ಕೆಎಂಎಫ್ ಆಡಳಿತ ಮಂಡಳಿಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವುದು ನ್ಯಾಯಾಲಯದ ವ್ಯಾಪ್ತಿಗೆ ಒಳಪಡಲಿದೆ ಎಂದು ಆದೇಶಿಸಿ ಕೆಎಂಎಫ್ ಆಡಳಿತ ಮಂಡಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದ್ದರು.
Advertisement