Advertisement

KMF ಗೆ ಪೈಪೋಟಿ ನೀಡಲು ಸಾಧ್ಯವಿಲ್ಲ: ಕೆಎಂಎಫ್ ಎಂಡಿ ಬಿ.ಸಿ. ಸತೀಶ್‌

10:40 PM Apr 08, 2023 | Team Udayavani |

ಬೆಂಗಳೂರು: ಹೆರಿಟೇಜ್‌, ದೊಡ್ಲ, ತಿರುಮಲ, ಆರೋಗ್ಯ ಸೇರಿ ಸುಮಾರು 18 ಸಂಸ್ಥೆಗಳು ಬೆಂಗಳೂರಿಗೆ ಹಾಲು ಪೂರೈಕೆ ಮಾಡುತ್ತಿವೆ. ಆದರೆ ಹಾಲು ಮಾರಾಟದಲ್ಲಿ ಈ ಸಂಸ್ಥೆಗಳು ಕೆಎಂಎಫ್ ಗೆ ಹತ್ತಿರ ಬರಲು ಅಸಾಧ್ಯ ಎಂದು ಕೆಎಂಎಫ್ ಎಂಡಿ ಬಿ.ಸಿ. ಸತೀಶ್‌ ಹೇಳಿದರು.

Advertisement

“ಉದಯವಾಣಿ’ ಜತೆ ಮಾತನಾಡಿ, 33 ಲಕ್ಷ ಲೀ. ಹಾಲು ಬೆಂಗಳೂರಿನಲ್ಲಿ ಪ್ರತೀ ದಿನ ಮಾರಾಟವಾಗುತ್ತದೆ. ಅದರಲ್ಲಿ 26 ಲಕ್ಷ ಲೀ. ಹಾಲು ಕೆಎಂ ಎಫ್ನದು. ಕೇವಲ 7 ಲಕ್ಷ ಲೀ. ಮಾತ್ರ ಬೇರೆ ಸಂಸ್ಥೆಗಳದು ಎಂದಿದ್ದಾರೆ.

ಅಮುಲ್‌ ಕ್ವಿಕ್‌ ಇ-ಕಾಮರ್ಸ್‌ ಸೇವೆ ಆರಂಭಿಸಲಿ. ಅದಕ್ಕೆ ಕೆಎಂಎಫ್ ಹೆದರುವುದಿಲ್ಲ. 7 ವರ್ಷಗಳಿಂದ 300 ಲೀ. ಹಾಲನ್ನು ಗೋವಾದಿಂದ ತಂದು ಹುಬ್ಬಳ್ಳಿ, ಬೆಳಗಾವಿಯಲ್ಲಿ ಅಮುಲ್‌ ಮಾರಾಟ ಮಾಡುತ್ತಿದೆ. ಆದರೆ ಅವರ ಮಾರಾಟ ಹೆಚ್ಚಳ ಕಂಡಿಲ್ಲ ಎಂದು ತಿಳಿಸಿದ್ದಾರೆ.

ಕ್ವಿಕ್‌-ಇ-ಕಾಮರ್ಸ್‌ ಸೇವೆ
ಮುಂದಿನ ವಾರದಿಂದ ಅಮುಲ್‌ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕ್ವಿಕ್‌-ಇ-ಕಾಮರ್ಸ್‌ ಸೇವೆ ಆರಂಭಿಸಲಿದೆ ಎಂದು ಅಮುಲ್‌ ಹೇಳಿದೆ. ಮದನಪಲ್ಲಿಯಿಂದ ಬೆಂಗ ಳೂರಿಗೆ ಹಾಲು, ಮೊಸರು ಸರಬ ರಾಜಾಗಲಿದೆ. ಇ-ಕಾಮರ್ಸ್‌ ಮೂಲಕ ಅಮುಲ್‌ ಹಾಲು, ಮೊಸರು ಮಾರಾಟ ಮಾಡುತ್ತೇವೆ. ನಂದಿನಿ ಅಥವಾ ಕರ್ನಾಟಕ ಹಾಲು ಉತ್ಪಾದಕರ ಜತೆ ಪೈಪೋಟಿ ನಡೆಸುವುದಿಲ್ಲ ಎಂದು ಅಮುಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯನ್‌ ಮೆಹ್ತಾ ಹೇಳಿ ದ್ದಾರೆ.

ಸುಳ್ಳು ಸುದ್ದಿಗೆ ಕಿವಿಗೊಡಬೇಡಿ
ಕೆಎಂಎಫ್ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವದಂತಿಗಳು ಹರಡುತ್ತಿದ್ದು, ಇದಕ್ಕೆ ಕಿವಿಗೊಡ ಬೇಡಿ ಎಂದು ಕರ್ನಾಟಕ ಹಾಲು ಮಹಾಮಂಡಳ ಮನವಿ ಮಾಡಿದೆ.
ಈ ಬಗ್ಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌ ಪತ್ರಿಕಾ ಹೇಳಿಕೆ ನೀಡಿದ್ದು, 2022-23ನೇ ಸಾಲಿನಲ್ಲಿ ನಮ್ಮ ಹಾಲಿನ ಮಾರಾಟ ಶೇ. 25ರಷ್ಟು ಪ್ರಗತಿ ಕಂಡಿದೆ. ಹೀಗಾಗಿ ಅಮುಲ್‌ನಿಂದ ನಂದಿನಿಗೆ ಬಾಧಕ ಇಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next