Advertisement
ಸದ್ಯ ಮಾರುಕಟ್ಟೆಯಲ್ಲಿ ಪ್ರತಿದಿನ ಒಟ್ಟು 59,112 ಸಾವಿರ ಲೀಟರ್‌ದಷ್ಟು ಉತ್ಕೃಷ್ಟ ದರ್ಜೆಯ ನಂದಿನ ಹಾಲು ಮತ್ತು 7,595ಲೀಟರ್‌ನಷ್ಟು ಮೊಸರು ಮಾರಾಟವಾಗುತ್ತಿದೆ.
Related Articles
Advertisement
ತೆರಿಗೆ ಹೆಚ್ಚಳ ವಿಚಾರ ಹಿನ್ನೆಲೆಯಲ್ಲಿ ಕೆಎಂಎಫ್ ನಂದಿನಿ ಮೊಸರಿನ ಬೆಲೆ ಹೆಚ್ಚಳವಾಗಿದೆ ಎನ್ನುವ ಸದ್ದು ಗದ್ದಲದ ಮಧ್ಯೆಯೂ ಮೊಸರಿನ ಮಾರಾಟದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ನಂದಿನಿ ಮೊಸರು ತುಂಬಾ ಉತ್ಕೃಷ್ಟವಾಗಿದ್ದು, ಜನರು ಹೆಚ್ಚು ಇಷ್ಟ ಪಡುತ್ತಾರೆ. ಮಾರುಕಟ್ಟೆಯಲ್ಲಿ ಖಾಸಗಿ ಬ್ರ್ಯಾಂಡಿನ ಹಾಲು-ಮೊಸರಿನ ಮಧ್ಯೆಯೂ ಕೆಎಂಎಫ್‌ನ ನಂದಿನಿ ಬ್ರ್ಯಾಂಡಿನ ಹಾಲು-ಮೊಸರು ಸೇರಿದಂತೆ ಇತರೆ ಉತ್ಪನ್ನದ ಮಾರಾಟ ನಿರಂತರವಾಗಿ ಏರುತ್ತಲೇ ಇದೆ. ಪ್ರತಿನಿತ್ಯ 7596 ಲೀಟರ್ ಮೊಸರಿನ ಮಾರಾಟ ಆಗುತ್ತಿದೆ. ಕಳೆದ ಸಾಲಿನಲ್ಲಿ(2021-22) 4,767 ಲೀಟರ್ ಮಾರಾಟವಾಗುತ್ತಿತ್ತು. ಒಂದು ವರ್ಷದಲ್ಲಿ ಅಂದಾಜು 3ಸಾವಿರ ಲೀಟರ್‌ದಷ್ಟು ಮೊಸರಿನ ಮಾರಾಟ ಹೆಚ್ಚಾಗಿದೆ. ಕೋವಿಡ್ ಸಂದರ್ಭದಲ್ಲಿ ಕಲಬೆರಕೆ ಭಯದಿಂದ ಮತ್ತು ತಯಾರು ಮಾಡುವ ಪ್ರೊಸೆಸ್ ಬಗ್ಗೆ ಜನರಿಗೆ ಭಯ ಹುಟ್ಟಿದೆ. ಇದರಿಂದಾಗಿ ಕೆಎಂಎಫ್‌ನ ನಂದಿನಿ ಮೊಸರಿನ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಕಾರಣ ಮೊಸರಿನ ಗುಣಮಟ್ಟ ಮತ್ತು ರುಚಿ ಎನ್ನುವುದು ಕೆಎಂಎಫ್ ಅಧಿಕಾರಿಗಳ ಮಾತು.
ನಮ್ಮ ಕೆಎಂಎಫ್ ಹಾಲು ಮತ್ತು ಮೊಸರು ಹಾಗೂ ಇತರೆ ಉತ್ಪನ್ನಗಳನ್ನು ನಾವು ತುಂಬಾ ಜಾಗರೂಕವಾಗಿ ಸಂಸ್ಕೃರಣೆ ಮಾಡುತ್ತೇವೆ. ಮೊಸರು ತುಂಬಾ ಹೈಜನಿಕ್ ಆಗಿ ಸಿದ್ಧವಾಗುತ್ತದೆ. ಇದರಿಂದಾಗಿ ಜನರಿಗೆ ನಮ್ಮ ನಂದಿನಿ ಬ್ರ್ಯಾಂಡ್ ಮೇಲೆ ಭರವಸೆ ಇದೆ. ಶೀಘ್ರವೇ ನಾವು 1ಲಕ್ಷ ಲೀಟರ್ ಹಾಲಿನ ಸಂಗ್ರಹ ಮಾಡುತ್ತೇವೆ. ಅದಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕೆ ನಮ್ಮ ಅಧ್ಯಕ್ಷ ಅರ್.ಕೆ.ಪಾಟೀಲ ಅವರ ಬೆಂಬಲ ಮತ್ತು ಸಿಬ್ಬಂದಿಗಳ ಸಹಕಾರವೂ ಇದೆ. –ಬಿ.ಎಸ್.ಸಿದ್ದೇಗೌಡ ಎಂಡಿ, ಕೆಎಂಎಫ್, ಕಲಬುರಗಿ
-ಸೂರ್ಯಕಾಂತ ಜಮಾದಾರ