Advertisement

ಕೆಎಂಎಫ್‌: 8 ಲಕ್ಷ ಲೀಟರ್‌ಹಾಲು ಮಾರಾಟ ಸ್ಥಗಿತ

12:21 AM Mar 30, 2020 | Sriram |

ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ನಂದಿನಿ ಹಾಲು ಮತ್ತು ಮೊಸರಿಗೆ ಬೇಡಿಕೆ ಕುಸಿದಿದೆ. ನಿತ್ಯ 8 ಲಕ್ಷ ಲೀಟರ್‌ ಹಾಲು ಮಾರಾಟವಾಗದೇ ಉಳಿ ಯುತ್ತಿದ್ದು ಅದನ್ನು ಪೌಡರ್‌ಗೆ ಪರಿವರ್ತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 10 ಲ.ಲೀ. ಮಾರಾಟ ವಾಗದೆ ಉಳಿಯುವ ಸಾಧ್ಯತೆ ಯೂ ಇದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲ ಚಂದ್ರ ಜಾರಕಿಹೊಳಿ ಹೇಳಿದ್ದಾರೆ.

Advertisement

ಕೋವಿಡ್-19 ಹರಡುವುದನ್ನು ತಡೆಯಲು ಕೆಎಂಎಫ್ ಮುನ್ನಚ್ಚರಿಕೆ ಕ್ರಮ ಕೈಗೊಂಡಿದೆ. ಹಾಲು ಉತ್ಪಾದಕರ ಸಂಘಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. 14 ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ ನಿತ್ಯ 9 ಲಕ್ಷ ಹೈನುಗಾರರಿಂದ 68 ಲ.ಲೀ. ಹಾಲು ಸಂಗ್ರಹಿಸಲಾಗುತ್ತಿದ್ದು, ಆ ಪೈಕಿ 40 ಲ.ಲೀ. ಹಾಲು, ಮೊಸರು ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಪೌಡರ್‌ ಮಾಡಲಾಗುತ್ತಿದೆ ಎಂದವರು ತಿಳಿಸಿದರು.

ಕೋವಿಡ್‌ 19 ಹಿನ್ನೆಲೆಯಲ್ಲಿ 15 ಸಾವಿರ ಕಾರ್ಮಿಕರ ಪೈಕಿ 5,000 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಕಾರ್ಮಿಕರ ಕೊರತೆ ಎದುರಾಗಿದೆ. ಹಾಲಿನ ಮಾರಾಟಕ್ಕೆ ಕಚ್ಚಾ ಪದಾರ್ಥಗಳು, ಸಾರಿಗೆ ವ್ಯವಸ್ಥೆಗೆ ಚಾಲಕರ ಕೊರತೆ ಎದುರಾಗಿದೆ. ರೈತರು ಮತ್ತು ಗ್ರಾಹಕರು ಕೆಎಂಎಫ್ಗೆ ಸಹಕಾರ ನೀಡಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next