ಮಕ್ಕಿಮನೆ ಕಲಾವೃಂದ -2019 ಕಾರ್ಯಕ್ರಮ ಮಂಗಳೂರಿನ ಡಾನ್ ಬಾಸ್ಕೋ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು. ವಿಭಿನ್ನ ವೇಷಭೂಷಣ ಅದಕ್ಕೆ ಅದರದ್ದೆ ಆದ ಗೌರವದೊಂದಿಗೆ ಸದ್ದಿಲ್ಲದೇ ದೇವಲೋಕದ ದರ್ಶನ ಮಾಡಿಸಿ ಬಿಟ್ಟದ್ದು ಮಾತ್ರ ಸೋಜಿಗ. ಚಿತ್ರಾಪುರ ತಂಡದವರ ಚೆಂಡೆವಾದನ, ಶ್ರೀದೇವಿ ಸ್ಯಾಕ್ಸೋಫೋನ್ ಬಳಗದ ಜ್ಯೋತಿ – ತುಳಸಿ ಸಹೋದರಿಯರ ನಾದ, ನಂದಗೋಕುಲ ಕಲಾತಂಡ ಮಂಗಳೂರು ಶ್ವೇತಾ ರಾವ್ ಅರೆಹೊಳೆ ನೇತೃತ್ವದಲ್ಲಿ ಗಣಪತಿ ಸ್ತುತಿಯ ಭರತನಾಟ್ಯಮನಸೂರೆಗೊಳಿಸಿತು.ಮಕ್ಕಿಮನೆ ಕಲಾವೃಂದ ಮಾರ್ನಾಡು ತಂಡದ ಪುಟ್ಟ ಮಕ್ಕಳ ಜಾನಪದ ನೃತ್ಯ ಹೊಗಳುವಂತಿತ್ತು. ಡ್ರೀಮ್ ಕ್ರಶಸ್ ತಂಡ ಮಂಗಳೂರು ಇವರು ನಿನ್ನ ಪೂಜೆಗೆ ಬಂದೆ ಮಹದೇಶ್ವರ ಅಂತ ಹಾಡಿದ್ದು ಶಿವನ ಭಕ್ತಿಗೆ ಸಾಕ್ಷಿಯಾಯಿತು. ಸಾಕ್ಷಿ ಗುರುಪುರ ತಂಡದ ಸಿನಿನೃತ್ಯ, ಪುಟಾಣಿಗಳ ನೃತ್ಯ ಬೆರಗುಗೊಳಿಸಿತು.
ಅಪೂರ್ವ ಮಳಿ ಬೆರಗುಗೊಳಿಸುವಂತೆ ಜಾದೂ ಲೋಕವನ್ನು ತೋರಿಸಿದರು. ಕಲಾ ಮಾಯಾ ಜಾನಪದ ಕಲಾ ತಂಡ ಉಡುಪಿ ಇವರ ಪೂಜಾ ಕುಣಿತ ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕತೆಯ ನ್ನು ಸಾರಿತು.ನಾಟ್ಯ ಲಹರಿ ನೃತ್ಯ ತಂಡದ ಶಿವತಾಂಡವ ನೃತ್ಯವು ಕೂಡ ಅದ್ಭುತ ಎನಿಸಿತು.
ರಾಜಸ್ಥಾನಿ ಶೈಲಿಯ ನೃತ್ಯವನ್ನು ತಾಂಡವ ನೃತ್ಯಾಲಯ ಹಳೆನೆರಂಕಿ ಇವರು ಪ್ರದರ್ಶಿಸಿದರು. ಇದಾದನಂತರ ಮಕ್ಕಿಮನೆ ಕಲಾವೃಂದ ಸಂಗೀತ ತಂಡ ಜಯಶ್ರೀ ಡಿ. ಜೈನ್ ಹೊರನಾಡು, ವಿಶ್ವಾಸ ಗುರುಪುರ,ವೈಷ್ಣವಿ ಪಿ ಭಟ್,ಸಂಧ್ಯಾ ಭಟ್ ನಾಲ್ವರ ಹಾಡಿನ ಮೋಡಿಗೆ ಅರೆಗಳಿಗೆ ಮೌನಾವರಿಸಿ ಕೇಳಿದರು. ಅನಂತರ ಮಕ್ಕಿಮನೆ ಕಲಾವೃಂದ ಮಂಗಳಾದೇವಿ ತಂಡವು ವಿಭಿನ್ನ ಬಗೆಯ ನೃತ್ಯ ಪ್ರದರ್ಶನ ನೀಡಿತು. ಶ್ರೀ ಯಕ್ಷನಿಧಿ ಯಕ್ಷಗಾನ ಸಂಸ್ಥೆಯವರು ಯಕ್ಷಗಾನ ಪ್ರದರ್ಶಿಸಿದರು.
ಸುಜಾತ ಗಜೇಂದ್ರ ಜೈನ್