Advertisement
ಕೆ.ಎಂ. ಉಡುಪರು ವಿಧಿವಶರಾಗಿ ಒಂದು ವರ್ಷವಾಗಿದೆ. ಅವರು ನಂಬಿಕೊಂಡು ಬದುಕಿದ ಜೀವನಕ್ರಮ, ಆದರ್ಶಗಳು ಮತ್ತು ಅನುಷ್ಠಾನಕ್ಕೆ ತಂದ ಬ್ಯಾಂಕಿಂಗ್ ಪರಿಕ್ರಮಗಳು ಯಾವತ್ತಿಗಿಂತಲೂ ಇವತ್ತು ಹೆಚ್ಚು ಪ್ರಸ್ತುತ ಎಂಬ ಕಾರಣಕ್ಕೆ ಅವರೀಗ ನೆನಪಾಗುತ್ತಿದ್ದಾರೆ. ಅವರನ್ನು ನೆನಪಿಸಿಕೊಳ್ಳುವುದು ಎಂದರೆ ಹಲವು ಅರ್ಥಗಳಲ್ಲಿ ಟಿ.ಎ. ಪೈ ಮತ್ತು ಕೆ.ಕೆ. ಪೈಯರು ಅನುಷ್ಠಾನಕ್ಕೆ ತಂದ ಬ್ಯಾಂಕಿಂಗ್ ಕ್ಷೇತ್ರದ ಹಲವು ಹೊಸತುಗಳನ್ನು ನೆನಪಿಸಿಕೊಳ್ಳುವುದು; ಇವತ್ತು ಇಲ್ಲದ ಸಿಂಡಿಕೇಟ್ ಬ್ಯಾಂಕಿನ ಸುವರ್ಣಪುಟಗಳನ್ನು ಮಗುಚಿ ಹಾಕುವುದು ಕೂಡ ಹೌದು.
Related Articles
Advertisement
ಗ್ರಾಮ ವಿಕಾಸ ಕೇಂದ್ರ ಸ್ಥಾಪನೆಫೋರ್ಡ್ ಫೌಂಡೇಶನ್ನಿನ ನೆರವಿ ನಿಂದ ಮಣಿಪಾಲ ಇಂಡಸ್ಟ್ರಿಯಲ್ ಟ್ರಸ್ಟಿಗೆ ಬಂದ ಅನುದಾನದ ಬಳಕೆಗೆ ಟಿ.ಎ. ಪೈಗಳ ಆದೇಶದ ಮೇರೆಗೆ ಉಡುಪರು ಪರಿಕಲ್ಪಿಸಿದ “ಗ್ರಾಮ ವಿಕಾಸ ಕೇಂದ್ರ’ದ ಮೂಲಕ 51 ಗ್ರಾಮಗಳ 15,000 ಕುಟುಂಬಗಳ ಸರ್ವತೋಮುಖ ಅಭಿವೃದ್ಧಿಯ ಯೋಜನೆಯು ಪೈಗಳ ದೂರದೃಷ್ಟಿ ಮತ್ತು ಉಡುಪರ ವಿಚಕ್ಷಣಮತಿಯ ಸಂಕೇತದಂತಿದೆ. ಉಡುಪರು ಬ್ಯಾಂಕ್ ಉದ್ಯೋಗದ ನಿವೃತ್ತಿಯ ಅನಂತರದ ತಮ್ಮ ಬದುಕನ್ನು ಟಿ.ಎ. ಪೈಗಳ ಗ್ರಾಮ ಸಶಕ್ತೀಕರಣದ ಕನಸುಗಳನ್ನು ನನಸು ಮಾಡಲು ಮೀಸಲಿಟ್ಟರು. ಎಂಬತ್ತರ ಇಳಿವಯಸ್ಸಿನ ತನಕವೂ ಭಾರತೀಯ ವಿಕಾಸ್ ಟ್ರಸ್ಟಿನ ಮೂಲಕ ಟಿ.ಎ. ಪೈಯವರ ಬದುಕಿನ ಧ್ಯೇಯೋದ್ದೇಶಗಳನ್ನು ಜೀವಂತವಾಗಿಟ್ಟರು. ಉಡುಪರ ವ್ಯಕ್ತಿತ್ವದ ಮಹತ್ವವೆಂದರೆ ಬದುಕಿನ ಯಾವುದೇ ಯಶಸ್ಸು ಅವರಿಗೆ ಅಹಂಕಾರವನ್ನು ತಂದುಕೊಡಲಿಲ್ಲ. ಕೆ.ಕೆ. ಪೈ ನಿರ್ದೇಶನದ ಮೇರೆಗೆ ಉಡುಪರು ತಯಾರಿಸಿದ “ಬಯೋ ಗ್ಯಾಸ್ ಯೋಜನೆ’ಗೆ ಆರ್‌ಬಿಐ ಅನುಮತಿ ಸಿಗದೇ ಹೋದಾಗ, ಉಡುಪರು ಟಿ.ಎ. ಪೈಯವರ ಮೂಲಕ ಅದನ್ನು ಅನುಷ್ಠಾನಕ್ಕೆ ತಂದದ್ದು ಮಾತ್ರವಲ್ಲ, 1974ರಲ್ಲಿ ಸಿಂಡಿಕೇಟ್ ಬ್ಯಾಂಕಿಗೆ ಇದಕ್ಕಾಗಿಯೇ ರಾಷ್ಟ್ರಮಟ್ಟದ ಊಐಇಇಐ ಪುರಸ್ಕಾರ ಸಿಗಲು ಕಾರಣರಾದರು. ಉಡುಪರ ಅಧಿಕಾರಾವಧಿಯಲ್ಲಿ ಮಲಪ್ರಭಾ ಗ್ರಾಮೀಣ ಬ್ಯಾಂಕು ಸೋಲಾರ್ ಘಟಕ ಗಳಿಗೆ ಸಾಲ ಕೊಟ್ಟ ಪ್ರಪಂಚದ ಮೊದಲ ಬ್ಯಾಂಕ್ ಎಂದೂ ಖ್ಯಾತವಾಯಿತು. ಇವತ್ತು ಉಡುಪರಿಲ್ಲ. ಆದರೆ ಅವರ ವಿಚಕ್ಷಣಮತಿ ಹೊಸ ತಲೆಮಾರಿನ ಬ್ಯಾಂಕ್ ಉದ್ಯೋಗಿಗಳಿಗೆ ಮಾತ್ರವಲ್ಲ, ಸಮಾಜಕ್ಕೇ ಒಂದು ಅನುಕರಣೀಯ ಆದರ್ಶವಾಗಿ ನಮ್ಮೆದುರಿಗಿದೆ. ಬೆಳಗೋಡು ರಮೇಶ ಭಟ್