Advertisement

ಕೆ.ಎಲ್.ರಾಹುಲ್‌ ಗೆ ಮತ್ತೆ ಕಾಡಿದ ಬ್ಯಾಟಿಂಗ್ ವೈಫಲ್ಯ; ಸಾಮಾಜಿಕ ತಾಣಗಳಲ್ಲಿ ಟ್ರೋಲ್

11:02 PM Oct 23, 2022 | Team Udayavani |

ಮೆಲ್ಬರ್ನ್ : ಪಾಕಿಸ್ಥಾನದ ವಿರುದ್ಧದ ವಿಶ್ವಕಪ್  ದೊಡ್ಡ ಪಂದ್ಯದಲ್ಲಿ ಮತ್ತೊಮ್ಮೆ ಕಡಿಮೆ ಸ್ಕೋರ್‌ಗೆ ಔಟಾಗಿರುವ ಕಾರಣ ಭಾರತದ ಆರಂಭಿಕ ಬ್ಯಾಟ್ಸ್ ಮ್ಯಾನ್ ಕೆ.ಎಲ್.ರಾಹುಲ್‌ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

Advertisement

ಗೆಲ್ಲಲು 160 ರನ್‌ಗಳನ್ನು ಬೆನ್ನಟ್ಟಿದ ವೇಳೆ ರಾಹುಲ್ ನಸೀಮ್ ಶಾ ಅವರ ಎಸೆತದಲ್ಲಿ ಬೌಲ್ಡ್ ಆದರು. 8 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿದರು.

ಇದನ್ನೂ ಓದಿ : ಹೇಗೆ ಗೆದ್ದೆವು ಎಂದು ನನಗೆ ತಿಳಿದಿಲ್ಲ.. : ಗೆಲುವಿನ ಬಳಿಕ ಭಾವುಕರಾದ ಕಿಂಗ್ ಕೊಹ್ಲಿ

ಏಷ್ಯಾಕಪ್‌ನಲ್ಲೂ ರಾಹುಲ್ ಇದೇ ಮಾದರಿಯಲ್ಲಿ ಔಟಾಗಿದ್ದರು ಮತ್ತು ಒಂದು ವರ್ಷದ ಹಿಂದೆ, ಅವರು ಶಾಹೀನ್ ಶಾ ಅಫ್ರಿದಿ ಅವರಿಂದ ಕ್ಲೀನ್ ಬೌಲ್ಡ್ ಆಗಿದ್ದರು. ಪಾಕಿಸ್ಥಾನದ ಅಭಿಮಾನಿಗಳು ಕೂಡ ಟ್ವಿಟ್ಟರ್‌ ನಲ್ಲಿ ರಾಹುಲ್ ಅವರನ್ನು ಟ್ರೋಲ್ ಮಾಡಿದ ನಂತರ ಪ್ರತಿಕ್ರಿಯೆಗಳು ಸುರಿಯುತ್ತಿದ್ದಂತೆ ‘ ರಾಹುಲ್ ಅವರು ಕೆಲವು ಶಾ ಗಳನ್ನು ಎದುರಿಸಲು  ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಪ್ರಮುಖ ಆಟಗಳಲ್ಲಿ ನಿರಾಶೆಗೊಳಿಸುವ ಕೆ.ಎಲ್. ರಾಹುಲ್ ಅವರ ಸಾಮರ್ಥ್ಯವನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ’ ಎಂದು ಹಲವಾರು ಮಂದಿ ಪಂದ್ಯ ಗೆಲ್ಲುವ ಮುನ್ನವೇ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next