Advertisement

ರಾಹುಲ್‌ ಅಪಾಯಕಾರಿ ಆಟಗಾರ, ಆತನನ್ನು ಔಟ್ ಮಾಡಲಿರುವುದು ಒಂದೇ ವಿಧಾನ: ಮ್ಯಾಕ್ಸ್ ವೆಲ್

10:14 AM Nov 21, 2020 | keerthan |

ಸಿಡ್ನಿ: ಕಳೆದ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನವಿತ್ತ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ಆಸ್ಟ್ರೇಲಿಯ ಪ್ರವಾಸದಲ್ಲಿ ಅತ್ಯಂತ ಅಪಾಯಕಾರಿಯಾಗಬಲ್ಲರು ಎಂಬುದಾಗಿ ಕಾಂಗರೂ ನಾಡಿನ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಭಿಪ್ರಾಯಪಟ್ಟಿದ್ದಾರೆ. ಇವರಿಬ್ಬರೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಸದಸ್ಯರೆಂಬುದು ಉಲ್ಲೇಖನೀಯ.

Advertisement

“ರಾಹುಲ್‌ ಐಪಿಎಲ್‌ ಗನ್‌ ಆಗಿದ್ದರು. ಅವರ ಮನೋಸ್ಥೈರ್ಯ ಅಮೋಘ. ಒತ್ತಡ ಸಂದರ್ಭದಲ್ಲೂ ಬಹಳ ತಣ್ಣಗೆ ಉಳಿದು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದರು. ಹೀಗಾಗಿ ಟೆಸ್ಟ್‌ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಗೈರಾದರೂ ರಾಹುಲ್‌ ನಮ್ಮ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸುವ ಎಲ್ಲ ಸಾಧ್ಯತೆ ಇದೆ’ ಎಂಬುದಾಗಿ ಮ್ಯಾಕ್ಸ್‌ವೆಲ್‌ ಎಚ್ಚರಿಸಿದರು.

“ಭಾರತ-ಆಸ್ಟ್ರೇಲಿಯ ಸರಣಿಯ ಟೀಮ್‌ ಮೀಟಿಂಗ್‌ ವೇಳೆ ರಾಹುಲ್‌ ಅವರನ್ನು ಹೇಗೆ ಔಟ್‌ ಮಾಡಬಹುದು ಎಂದು ನನ್ನಲ್ಲಿ ಕೇಳುವ ಸಂದರ್ಭ ಬರಬಹುದು. ಆಗ, ಅವರನ್ನು “ರಾಹುಲ್‌ ಅಪಾಯಕಾರಿ ಬ್ಯಾಟ್ಸ್‌ ಮನ್‌’ ರನೌಟ್‌ ಮಾಡಲು ಪ್ರಯತ್ನಿಸಿ ಎಂದು ಹೇಳಬೇಕಾಗುತ್ತದೋ ಏನೋ’ ಎಂದು ಮ್ಯಾಕ್ಸ್‌ವೆಲ್‌ ಭಾರತೀಯನ ಸಾಮರ್ಥ್ಯದ ಕುರಿತು ವಿವರಿಸಿದರು.

“ರಾಹುಲ್‌ ಐಪಿಎಲ್‌ ಫಾರ್ಮನ್ನು ಆಸ್ಟ್ರೇಲಿಯದಲ್ಲಿ ಮುಂದುವರಿಸುವ ಎಲ್ಲ ಸಾಧ್ಯತೆ ಇದೆ. ಸೀಮಿತ ಓವರ್‌ಗಳ ತಂಡಕ್ಕೆ ಉಪ ನಾಯಕರಾಗಿಯೂ ನೇಮಕಗೊಂಡಿದ್ದಾರೆ. ಇದು ರಾಹುಲ್‌ ಮೇಲೆ ಭಾರತದ ಆಯ್ಕೆ ಸಮಿತಿ ಇರಿಸಿದ ವಿಶ್ವಾಸಕ್ಕೆ ಸಾಕ್ಷಿ’ ಎಂದರು ಮ್ಯಾಕ್ಸ್‌ವೆಲ್‌.

Advertisement

Udayavani is now on Telegram. Click here to join our channel and stay updated with the latest news.

Next