Advertisement

INDvsAUS; ವಿರಾಟ್-ಧೋನಿ ಮಾಡಿರದ ಸಾಧನೆ ಮಾಡಿದ ಕೆಎಲ್ ರಾಹುಲ್

12:42 PM Sep 23, 2023 | Team Udayavani |

ಮೊಹಾಲಿ: ವಿಶ್ವಕಪ್ ಗಾಗಿ ತಯಾರಿ ನಡೆಸುತ್ತಿರುವ ಭಾರತ ತಂಡವು ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದೆ. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಪಡೆ ಐದು ವಿಕೆಟ್ ಅಂತರದ ಗೆಲುವು ಕಂಡಿತು.

Advertisement

ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ 276 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ಭಾರತ 48.4 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 281 ರನ್ ಮಾಡಿತು. ಮೊಹಮ್ಮದ್ ಶಮಿ, ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಕೆಎಲ್ ರಾಹುಲ್ ಭಾರತದ ಜಯದಲ್ಲಿ ಪ್ರಮುಖ ಕೊಡುಗೆ ನೀಡಿದರು.

ಇದೇ ವೇಳೆ ನಾಯಕ ಕೆಎಲ್ ರಾಹುಲ್ ಅವರು ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ನಾಯಕರು ಮಾಡಿರದ ಸಾಧನೆಯನ್ನು ಈ ಪಂದ್ಯದಲ್ಲಿ ಮಾಡಿದ್ದಾರೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಭಾರತವು ಕಡೆಯದಾಗಿ 1996ರಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಆಗ ಸಚಿನ್ ತೆಂಡೂಲ್ಕರ್ ಅವರು ತಂಡದ ನಾಯಕರಾಗಿದ್ದರು.

ಅದರ ಬಳಿಕ ಧೋನಿ, ವಿರಾಟ್ ನಾಯಕತ್ವದಲ್ಲೂ ಆಸೀಸ್ ವಿರುದ್ಧ ಮೊಹಾಲಿಯಲ್ಲಿ ಭಾರತ ಪಂದ್ಯವಾಡಿತ್ತು. ಆದರೆ ಸೋಲಾಗಿತ್ತು. ಇದೀಗ ರಾಹುಲ್ ನಾಯಕತ್ವದಲ್ಲಿ ತಂಡ ಗೆಲುವು ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next