ಶಾರ್ಜಾ: ತಾವಾಡಿರುವ ಮೂರು ಪಂದ್ಯಗಳಲ್ಲಿ ತಲಾ ಎರಡು ಪಂದ್ಯ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಇಂದು ಶಾರ್ಜಾ ಅಂಗಳದಲ್ಲಿ ಮುಖಾಮುಖಿಯಾಗಲಿದೆ. ಇಂದಿನ ಪಂದ್ಯ ಗೆದ್ದ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲಿದೆ.
ಕೋಲ್ಕತಾ ಕೂಡ ಬಿಗ್ ಹಿಟ್ಟರ್‌ಗಳನ್ನು ಹೊಂದಿದೆ. ಶುಭ್ಮನ್ ಗಿಲ್, ರಸೆಲ್, ನಾರಾಯಣ್, ಮಾರ್ಗನ್ ಬಲವನ್ನು ತಂಡ ಹೊಂದಿದೆ. ಆದರೆ ಇವರು ರಕ್ಷಣಾತ್ಮಕ ಆಟವನ್ನು ಬದಲಿಸಿ ಮುನ್ನುಗ್ಗಿ ಬಾರಿಸಬೇಕಾದುದು ಅನಿವಾರ್ಯ. ಇವರಲ್ಲಿ ಇಬ್ಬರಾದರೂ ಸಿಡಿದು ನಿಲ್ಲುವುದು ಮುಖ್ಯ. ಹಾಗೆಯೇ ಕಾರ್ತಿಕ್ ಕಪ್ತಾನನ ಆಟ ಆಡುವುದೂ ಅಗತ್ಯವಾಗಿದೆ.
ಇದನ್ನೂ ಓದಿ:“ಅವ್ನು ಬರ್ತಿದ್ದಾನೆ ಕಣ್ರೋ..”ಇಂದಿನಿಂದ ರಾಜಸ್ಥಾನ ರಾಯಲ್ಸ್ ತಂಡ ಸೇರಲಿರುವ ಬೆನ್ ಸ್ಟೋಕ್ಸ್
ಸಾಮಾನ್ಯ ತಂಡವೆಂದು ಭಾವಿಸಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈಗ “ಸೈಲೆಂಟ್ ಕಿಲ್ಲರ್’ ಆಗಿ ಗೋಚರಿಸುತ್ತಿದೆ. ಈಗಾಗಲೇ ಪಂಜಾಬ್ ಮತ್ತು ಚೆನ್ನೈಗೆ ಆಘಾತ ವಿಕ್ಕಿದೆ. ಮೇಲ್ನೋಟಕ್ಕೆ ಕೆಕೆಆರ್‌ಗಿಂತ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ.
ಬ್ಯಾಟಿಂಗ್‌ನಲ್ಲಿ ಪೃಥ್ವಿ ಶಾ, ಧವನ್, ಅಯ್ಯರ್, ಹೆಟ್‌ಮೈರ್, ಆಲ್‌ರೌಂಡರ್ ಸ್ಟೋಯಿನಿಸ್, ಬೌಲಿಂಗ್‌ನಲ್ಲಿ ರಬಾಡ, ನೋರ್ಜೆ, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ ಅವರೆಲ್ಲ ಡೆಲ್ಲಿ ತಂಡಕ್ಕೆ ಶಕ್ತಿ ತುಂಬಿದ್ದಾರೆ. ಗಾಯಾಳಾಗಿದ್ದ ಆರ್. ಅಶ್ವಿನ್ ವಾಪಸಾದರೆ ಡೆಲ್ಲಿ ಇನ್ನಷ್ಟು ಬಲಿಷ್ಠವಾಗಲಿದೆ.