Advertisement

ಕಾರ್ತಿಕ್‌ ಗೆದ್ದರೂ, ಕೆಕೆಆರ್‌ಗೆ ಸೋಲು!

09:11 AM Apr 27, 2019 | keerthan |

ಕೋಲ್ಕತ: ಸತತ ಕಳಪೆ ಬ್ಯಾಟಿಂಗ್‌, ತಂಡದ ಸತತ ಸೋಲುಗಳು ಇದರಿಂದ ನೊಂದು ಹೋಗಿದ್ದ ಕೋಲ್ಕತ ನಾಯಕ ದಿನೇಶ್‌ ಕಾರ್ತಿಕ್‌  ಅದನ್ನೆಲ್ಲ ಮರೆಸುವಂತೆ ಅಸಾಮಾನ್ಯ ಬ್ಯಾಟಿಂಗ್‌ ಮಾಡಿದರು. ಆದರೂ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸೋಲುವುದನ್ನು ಅವರಿಗೆ ತಪ್ಪಿಸಲು ಸಾಧ್ಯವಾಗಲಿಲ್ಲ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ 20 ಓವರ್‌ ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 175 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ರಾಜಸ್ಥಾನ್‌ 19.2 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 177 ರನ್‌ ಗಳಿಸಿತು.

ರಾಜಸ್ಥಾನ್‌ ಬ್ಯಾಟಿಂಗ್‌ನಲ್ಲಿ ಅಂತಹ ಆಕರ್ಷಕ ಇನಿಂಗ್ಸ್‌ ಗಳೇನಿರಲಿಲ್ಲ. ಆದರೆ ಇಡೀ ತಂಡ ಸಾಂಕವಾಗಿ ಹೋರಾಡಿ ಗೆಲುವನ್ನು ಸೆಳೆದುಕೊಂಡಿತು. ಅದರಲ್ಲೂ ಹಿಟ್‌ ವಿಕೆಟ್‌ ಆಗುವ ಮುನ್ನ ರಿಯಾನ್‌ ಪರಾಗ್‌ ಗಳಿಸಿದ 47 ರನ್‌ ನಿರ್ಣಾಯಕವಾಯಿತು. ಕೋಲ್ಕತದ ಚಾವ್ಲಾ 3 ವಿಕೆಟ್‌ ಗಳಿಸಿದರು.

ಕಾರ್ತಿಕ್‌ ಅಸಾಧ್ಯ ಆಟ: ಈ ಪಂದ್ಯಕ್ಕೂ ಮುನ್ನ ದಿನೇಶ್‌ ಕಾರ್ತಿಕ್‌ ಮಾನಸಿಕವಾಗಿ ನೊಂದಿದ್ದರು. ಅವರು ನಾಯಕರಾಗಿ ವಿಫ‌ಲರಾಗಿದ್ದಾರೆ ಎಂಬ ಆರೋಪದ ಜೊತೆಗೆ, ಬ್ಯಾಟ್ಸ್‌ಮನ್‌ ಆಗಿಯೂ ವೈಫ‌ಲ್ಯ ಎದುರಿಸಿದ್ದರು. ಅದನ್ನು ಒಂದೇ ಏಟಿಗೆ ತೊಳೆದುಕೊಳ್ಳುವ ಯತ್ನ ಮಾಡಿದರು. ತಂಡ ಸೋತಿದ್ದರಿಂದ ನಾಯಕರಾಗಿ ಮತ್ತೆ ವಿಫ‌ಲರಾದರೂ, ಬ್ಯಾಟ್ಸ್‌ಮನ್‌ ಆಗಿ ಸಂಪೂರ್ಣ ಯಶಸ್ವಿಯಾದರು.

ಭಾರತ ವಿಶ್ವಕಪ್‌ ತಂಡಕ್ಕೆ ತನ್ನನ್ನು ಆಯ್ಕೆ ಮಾಡಿದ್ದರಲ್ಲಿ ಯಾವ ತಪ್ಪೂಇಲ್ಲ ಎನ್ನುವುದನ್ನು ಸಾಬೀತು ಮಾಡಿದರು. 4ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ದಿನೇಶ್‌ ಕಾರ್ತಿಕ್‌ ಕೊನೆಯವರೆಗೂ ರಾಜಸ್ಥಾನ್‌ ಬೌಲರ್‌ಗಳನ್ನು ದಂಡಿಸುತ್ತ ಸಾಗಿದರು. ಆರಂಭದ ಹತ್ತು ಎಸೆತದಲ್ಲಿ ಅವರು ಗಳಿಸಿದ್ದು ಕೇವಲ 3 ರನ್‌, ಮುಂದಿನ 40 ಎಸೆತದಲ್ಲಿ 94 ರನ್‌ ಚಚ್ಚಿದರು. ಈ ಇನಿಂಗ್ಸ್‌ನಲ್ಲಿ ಒಟ್ಟು  50 ಎಸೆತ ಎದುರಿಸಿ 97 ರನ್‌ ಗಳಿಸಿದರು. ಇದರಲ್ಲಿ 7 ಬೌಂಡರಿ, 9 ಸಿಕ್ಸರ್‌ ಬಾರಿಸಿ, ಈ ಎರಡರಲ್ಲೇ 82 ರನ್‌ ಗಳಿಸಿದರು. ಉಳಿದಂತೆ ಅವರು ಓಡಿ ಗಳಿಸಿದ್ದು ಬರೀ 15 ರನ್‌ ಮಾತ್ರ! ಇದು ಇಡೀ ಐಪಿಎಲ್‌ ಇತಿಹಾಸದಲ್ಲೇ ಕೋಲ್ಕತ ಬ್ಯಾಟ್ಸ್‌ಮನ್‌ ಒಬ್ಬ ಗಳಿಸಿದ 2ನೇ ಗರಿಷ್ಠ ಮೊತ್ತ! ಉಳಿದಂತೆ ಯಾವ ಬ್ಯಾಟ್ಸ್‌ಮನ್‌ಗಳೂ ಯಶಸ್ವಿಯಾಗಲಿಲ್ಲ. ಶುಬ¾ನ್‌ ಗಿಲ್‌, ಸುನೀಲ್‌ ನಾರಾಯಣ್‌, ನಿತೀಶ್‌ ರಾಣಾ, ಆಂಡ್ರೆ ರಸೆಲ್‌ ಎಲ್ಲರೂ ವಿಫ‌ಲರಾದರು.

Advertisement

ಪ್ಲೇಆಫ್ ಲೆಕ್ಕಾಚಾರ
ದೀರ್ಘ‌ ಸಮಯದ ನಂತರ ರಾಜಸ್ಥಾನ್‌ ರಾಯಲ್ಸ್‌ ಗೆಲುವೊಂದನ್ನು ಕಂಡಿದೆ.
ಒಟ್ಟು 11 ಪಂದ್ಯವಾಡಿರುವ ಅದು 4 ಜಯ, 7 ಸೋಲು ಕಂಡಿದೆ. ಇನ್ನುಳಿದಿರುವುದು 3 ಪಂದ್ಯ ಮಾತ್ರ. ಆದರೂ ಅದಕ್ಕೆ ಪ್ಲೇಆಫ್ ಆಸೆ ಹೋಗಿಲ್ಲ! ಇನ್ನುಳಿದ ಮೂರೂ ಪಂದ್ಯವನ್ನು ಗೆದ್ದು ರನ್‌ ದರದ  ಆಧಾರದಲ್ಲಿ ಮುಂದಿನ ಸುತ್ತಿಗೆ ನೆಗೆಯುವ ಲೆಕ್ಕಾಚಾರ ಹೊಂದಿದೆ. ಇದು ಎಷ್ಟರ ಮಟ್ಟಿಗೆ ಸತ್ಯವಾಗುತ್ತೋ ಗೊತ್ತಿಲ್ಲ. ಇದೇ ಸ್ಥಿತಿಯಲ್ಲಿ ಕೋಲ್ಕತ ಇದೆ.
ಅದು ಇದುವರೆಗೆ 11 ಪಂದ್ಯವಾಡಿ 4 ಜಯ,  7 ಸೋಲು ಕಂಡಿದೆ. ಉಳಿದಿರುವ ಮೂರು ಪಂದ್ಯ ಗೆದ್ದರೆ ಅದು ಪ್ಲೇಆಫ್ಗೇರುವುದು ಕಷ್ಟದ ವಿಚಾರವಲ್ಲ. ಈ ತಂಡಕ್ಕೂ ಅಂತಿಮ ಹಂತದಲ್ಲಿ ರನ್‌ ದರ ನೆರವಿಗೆ ಬರಬೇಕಾಗುತ್ತದೆ. ಆಗ ಅಗ್ರ 4ರಲ್ಲಿ ಒಂದು ತಂಡವಾಗಬಹುದು. ಉಳಿದ ಪಂದ್ಯಗಳಲ್ಲಿ ತನ್ನ ಕಳಪೆ ಪರಿಸ್ಥಿತಿಯನ್ನು ಮೀರಿ, ಈ ಅಸಾಧ್ಯ ಕನಸನ್ನು ಸಾಧ್ಯವಾಗಿಸಿಕೊಳ್ಳುವ ಸವಾಲು ಮಾತ್ರ ಕೋಲ್ಕತ ಮುಂದಿದೆ.

ಕೋಲ್ಕತಾ ನೈಟ್‌ರೈಡರ್
ಕ್ರಿಸ್‌ ಲಿನ್‌ ಬಿ ಆರೋನ್‌ 0
ಶುಭಮನ್‌ ಗಿಲ್‌ ಬಿ ಆರೋನ್‌ 14
ನಿತೀಶ್‌ ರಾಣಾ ಸಿ ಆರೋನ್‌ ಬಿ ಗೋಪಾಲ್‌ 21
ದಿನೇಶ್‌ ಕಾರ್ತಿಕ್‌ ಔಟಾಗದೆ 97
ಸುನೀಲ್‌ ನಾರಾಯಣ್‌ ರನೌಟ್‌ 11
ಆ್ಯಂಡ್ರೆ ರಸೆಲ್‌ ಪರಾಗ್‌ ಬಿ ಥಾಮಸ್‌ 14
ಕಾರ್ಲೋಸ್‌ ಬ್ರಾತ್‌ವೇಟ್‌ ಸಿ ರಹಾನೆ ಬಿ ಉನಾದ್ಕತ್‌ 5
ರಿಂಕು ಸಿಂಗ್‌ ಔಟಾಗದೆ 3
ಇತರ 10
ಒಟ್ಟು (6 ವಿಕೆಟಿಗೆ) 175
ವಿಕೆಟ್‌ ಪತನ: 1-0, 2-31, 3-42, 4-80, 5-119, 6-131.
ಬೌಲಿಂಗ್‌:
ವರುಣ್‌ ಆರೋನ್‌ 4-1-20-2
ಒಶೇನ್‌ ಥಾಮಸ್‌ 4-0-32-1
ಜೋಫ‌ ಆರ್ಚರ್‌ 4-0-28-0
ಶ್ರೇಯಸ್‌ ಗೋಪಾಲ್‌ 3-0-31-1
ರಿಯಾನ್‌ ಪರಾಗ್‌ 1-0-7-0
ಜೈದೇವ್‌ ಉನಾದ್ಕತ್‌ 4-0-50-1

ರಾಜಸ್ಥಾನ್‌ ರಾಯಲ್ಸ್‌
ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ನಾರಾಯಣ್‌ 34
ಸಂಜು ಸ್ಯಾಮ್ಸನ್‌ ಬಿ ಚಾವ್ಲಾ 22
ಸ್ಟೀವನ್‌ ಸ್ಮಿತ್‌ ಬಿ ನಾರಾಯಣ್‌ 2
ಬೆನ್‌ ಸ್ಟೋಕ್ಸ್‌ ಸಿ ರಸೆಲ್‌ ಬಿ ಚಾವ್ಲಾ 11
ರಿಯಾನ್‌ ಪರಾಗ್‌ ಹಿಟ್‌ ವಿಕೆಟ್‌ ಬಿ ರಸೆಲ್‌ 47
ಸ್ಟುವರ್ಟ್‌ ಬಿನ್ನಿ ಸಿ ರಿಂಕು ಬಿ ಚಾವ್ಲಾ 11
ಶ್ರೇಯಸ್‌ ಗೋಪಾಲ್‌ ಸಿ ಗಿಲ್‌ ಬಿ ಪ್ರಸಿದ್ಧ ಕೃಷ್ಣ 18
ಜೋಫ‌Å ಆರ್ಚರ್‌ ಔಟಾಗದೆ 27
ಉನಾದ್ಕತ್‌ ಔಟಾಗದೆ 0
ಇತರ 5
ಒಟ್ಟು ( 19.2 ಓವರ್‌ಗಳಲ್ಲಿ 7ವಿಕೆಟಿಗೆ) 177
ವಿಕೆಟ್‌ ಪತನ: 1-53, 2-57, 3-63, 4-78, 5-98, 6-123, 7-167.
ಬೌಲಿಂಗ್‌:
ಬ್ರಾತ್‌ವೇಟ್‌ 2-0-16-0
ಪ್ರಸಿದ್ಧ್ ಕೃಷ್ಣ 3.2-0-43-1
ಆ್ಯಂಡ್ರೆ ರಸೆಲ್‌ 3-0-32-1
ಸುನೀಲ್‌ ನಾರಾಯಣ್‌ 4-0-25-2
ಯರ್ರಾ ಪೃಥ್ವಿರಾಜ್‌ 2-0-28-0
ಪೀಯೂಷ್‌ ಚಾವ್ಲಾ 4-0-20-3
ನಿತೀಶ್‌ ರಾಣ 1-0-13-0

Advertisement

Udayavani is now on Telegram. Click here to join our channel and stay updated with the latest news.

Next