Advertisement

ಕೆಕೆಆರ್‌ ಮುಂದೆ ಉಳಿವಿನ ಹೋರಾಟ

02:33 AM Apr 21, 2019 | mahesh |

ಹೈದರಾಬಾದ್‌: ಹಾಲಿ ಚಾಂಪಿಯನ್‌ ಚೆನ್ನೈ ವಿರುದ್ಧ ಬುಧವಾರ 6 ವಿಕೆಟ್ ಜಯ ಸಾಧಿಸಿ ಸಂಭ್ರಮಿಸುತ್ತಿರುವ ಸನ್‌ರೈಸರ್ ಹೈದರಾಬಾದ್‌ ಈಗ ತವರಿನಲ್ಲೇ ಕೋಲ್ಕತಾ ನೈಟ್ರೈಡರ್ ವಿರುದ್ಧ ತುಂಬು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಇತ್ತಂಡಗಳಿಗೂ ಪ್ಲೇ ಆಫ್ಗೆ ಏರಲು ಗೆಲುವು ಅಗತ್ಯವಾಗಿದೆ.

Advertisement

‘ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕೆಕೆಆರ್‌ 6 ವಿಕೆಟ್‌ಗಳಿಂದ ಹೈದರಾಬಾದ್‌ಗೆ ಸೋಲುಣಿಸಿತ್ತು. ಆರಂಭಿಕನಾಗಿ ಇಳಿದ ನಿತೀಶ್‌ ರಾಣಾ 68, ರಸೆಲ್ 19 ಎಸೆತಗಳಿಂದ ಅಜೇಯ 49 ರನ್‌ ಬಾರಿಸಿ ಮೆರೆದಿದ್ದರು. ಇದಕ್ಕೀಗ ಹೈದರಾಬಾದ್‌ ಸೇಡು ತೀರಿಸಿಕೊಳ್ಳಬೇಕಿದೆ. ತವರಿನ ಈಡನ್‌ ಅಂಗಳದಲ್ಲೇ ಸತತ 3 ಸೋಲುಂಡ ಸಂಕಟದಲ್ಲಿರುವ ಕಾರ್ತಿಕ್‌ ಪಡೆ ಈ ಆಘಾತದಿಂದ ಹೊರಬಂದೀತೇ ಎಂಬುದೊಂದು ಪ್ರಶ್ನೆ.

ಯಶಸ್ವೀ ಆರಂಭಿಕ ಜೋಡಿ
ಹೈದರಾಬಾದ್‌ ತಂಡ ಓಪನರ್‌ಗಳಾದ ಡೇವಿಡ್‌ ವಾರ್ನರ್‌ ಮತ್ತು ಜಾನಿ ಬೇರ್‌ಸ್ಟೊ ಅವರನ್ನೇ ಹೆಚ್ಚಾಗಿ ಅವಲಂಬಿಸಿದೆ. ಪ್ರತೀ ಪಂದ್ಯದಲ್ಲೂ ಇವರ ಆಟ ಮಹತ್ವದ್ದಾಗಿತ್ತು. ಇವರ ನಿರ್ಗಮನದ ಬಳಿಕ ಮಧ್ಯಮ ಕ್ರಮಾಂಕದ ಆಟಗಾರರು ರನ್‌ ಗಳಿಸಲು ಪರದಾಡಿ ಸೋತಿರುವ ನಿದರ್ಶನ ಸಾಕಷ್ಟಿದೆ. ಆದರೆ ಹೈದರಾಬಾದ್‌ ಬೌಲಿಂಗ್‌ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ರಶೀದ್‌, ನಬಿ, ಭುವನೇಶ್ವರ್‌, ಸಂದೀಪ್‌ ಶರ್ಮ ಸಂಘಟಿತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ಹೈದರಾಬಾದ್‌ಗೆ ಭಾರೀ ನಷ್ಟ
ವಿಶ್ವಕಪ್‌ಹಾಗೂ ಪಾಕಿಸ್ಥಾನ ವಿರುದ್ಧದ ಏಕದಿನ ಸರಣಿಯ ತಯಾರಿ ಹಿನ್ನೆಲೆಯಲ್ಲಿ ಇಂಗ್ಲೆಂಡಿಗರ ಐಪಿಎಲ್ ಆಟ ಎ. 26ಕ್ಕೆ ಕೊನೆಗೊಳ್ಳುಲಿದ್ದು, ಜಾನಿ ಬೇರ್‌ಸ್ಟೊಗೆ ಇದು ಕೊನೆಯ ಪಂದ್ಯವಾಗಲಿದೆ. ತಂಡದ ಸ್ಟಾರ್‌ ಆಟಗಾರನಾಗಿರುವ ಬೇರ್‌ಸ್ಟೊ 365 ರನ್‌ ಗಳಿಸಿ ಗರಿಷ್ಠ ರನ್‌ ಸಾಧಕರಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಇವರ ನಿರ್ಗಮನದಿಂದ ಹೈದರಾಬಾದ್‌ಗೆ ಭಾರೀ ನಷ್ಟ ಸಂಭವಿಸುವುದರಲ್ಲಿ ಅನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next