Advertisement

ಬಾನಂಗಳದಲ್ಲಿ ಪತಂಗಗಳ ಚಿತ್ತಾರ

10:19 AM Jan 21, 2020 | Suhan S |

ಹುಬ್ಬಳ್ಳಿ: ನೂರು ಅಡಿ ಉದ್ದದ ಕಾಳಿಂಗ ಸರ್ಪ, ಆಕ್ಟೋಪಸ್‌, ಮುದ್ದಾದ ಡಾಲ್ಫಿನ್‌, ಚಿಟ್ಟೆ, ಶಾರ್ಕ್‌ ಮೀನು, 150ನೇ ಜನ್ಮ ದಿನಾಚರಣೆಯ ಸ್ವತ್ಛತೆ ಸಂದೇಶ ಸಾರುವ ಮಹಾತ್ಮಾ ಗಾಂಧಿ, ಮೋದಿ ಹಾಗೂ ಶಾ ಅವರ ಸ್ನೇಹದ ಸಂದೇಶ, ಒಂದೇ ಸೂತ್ರದಡಿ 120 ಬಣ್ಣದ ಪತಂಗಗಳು ಬಾನಂಗಳದಲ್ಲಿ ಹಾರಾಡುತ್ತಿದ್ದರೆ ನೆರೆದವರ ಕೇಕೆ, ಹರ್ಷೋದ್ಘಾರಕ್ಕೆ ಪಾರವೇ ಇರಲಿಲ್ಲ.

Advertisement

ಕ್ಷಮತಾ ಸಂಸ್ಥೆ ಕುಸುಗಲ್ಲ ರಸ್ತೆಯ ಆಕ್ಸ್‌ಫ‌ರ್ಡ್‌ ಕಾಲೇಜು ಸಮೀಪದ ಮೈದಾನದಲ್ಲಿ ಆಯೋಜಿಸಿದ 3ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಮೊದಲ ದಿನ ಶನಿವಾರ ಗಾಳಿಪಟಗಳು ಏಕಕಾಲಕ್ಕೆ ಹಾರಿ ಬಾನಂಗಣದಲ್ಲಿ ಬಣ್ಣದ ಚಿತ್ತಾರ ಮೂಡಿಸಿದವು. ಬೃಹದಾಕಾರದ ಪತಂಗಗಳನ್ನು ನೋಡುಗರನ್ನು ಬೆರಗುಗೊಳಿಸಿದವು.

ಉತ್ಸವದಲ್ಲಿ 15 ದೇಶಗಳ 32 ಹಾಗೂ ಗುಜರಾತ, ಮಹಾರಾಷ್ಟ್ರ ಪಂಜಾಬ, ಸೇರಿದಂತೆ ರಾಜ್ಯದ ಗಾಳಿಪಟ ವೃತ್ತಿಪರರು ಪಾಲ್ಗೊಂಡಿದ್ದರು. ಬೆಂಗಳೂರಿನ ವಿ.ಕೆ. ರಾವ್‌ ಅವರ 40 ಅಡಿ ವಿಸೀ¤ರ್ಣದ ರಿಂಗ್‌, 35 ಅಡಿ ಉದ್ದದ ಮೀನು ಒಂದೆಡೆಯಾದರೆ ಪ್ರಧಾನಿ ನರೇಂದ್ರಮೋದಿ ಹಾಗೂ ಅಮಿತ್‌ ಶಾ ಅವರು ಸ್ನೇಹ ಸಂದೇಶ ಸಾರುವ ಪಟ ಇನ್ನೊಂದೆಡೆಯಾಗಿತ್ತು.

ನಾಯಕರಿಗೆ ನಮನ: ಅಗಲಿದ ಬಿಜೆಪಿ ನಾಯಕರಾದ ಅಟಲ್‌ ಬಿಹಾರಿ ವಾಜಪೇಯಿ, ಅರುಣ ಜೇಟ್ಲಿ, ಸುಷ್ಮಾ ಸ್ವರಾಜ್ಯ, ಅನಂತಕುಮಾರ ಹಾಗೂ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಭಾವಚಿತ್ರವುಳ್ಳ ಪಟಗಳನ್ನು ಹಾರಿಸುವ ಮೂಲಕ ನಮನ ಸಲ್ಲಿಸಲಾಯಿತು.

ರೈಲು ಗಾಳಿಪಟ: ದೊಡ್ಡಬಳ್ಳಾಪುರದ ಸುಹಾಸ ಹಾಗೂ ಅವರ ತಂಡದ ಸದಸ್ಯರು ಮುತ್ತಿನ ಸರದಂತೆ ಸಾಲಾಗಿ ಪೋಣಿಸಿದ್ದ 120 ಪಟಗಳ “ರೈಲು ಗಾಳಿಪಟ’ ಗಮನ ಸೆಳೆಯಿತು. ಸೂರತ್‌ನಿಂದ ಆಗಮಿಸಿದ ನಿತೇಶ ಲಕುಂ ಅವರ ರಾಷ್ಟ್ರೀಯತೆ ಸಾರುವ ಪಟಗಳುವಿಶೇಷವಾಗಿದ್ದವು. 15 ಕೆಜಿ ಭಾರದ ಡ್ರ್ಯಾಗನ್ ಹಾರಾಟದ ಸಂದರ್ಭದಲ್ಲಿ 150 ಕೆಜಿ ಭಾರವಾಗುವ ಪಟ ಗಮನ ಸೆಳೆಯಿತು.

Advertisement

ಎರಡೂ ಕೈಗಳಿಂದ ಹಾರಿಸುವ ಸ್ಟಂಟ್‌ ಗಾಳಿಪಟ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಕೆಳಗೆ ಹಾಗೂ ಮೇಲೆ ಹಾರಾಡುವಾಗ ಮಾಡುವ ಶಬ್ದ ಪ್ರತಿಯೊಬ್ಬರನ್ನು ಆಕರ್ಷಿಸುತ್ತಿತ್ತು. ನೆದರ್‌ಲ್ಯಾಂಡ್‌, ಇಂಡೋನೇಷ್ಯಾ, ಯುನೈಟೆಡ್‌ ಕಿಂಗ್‌ಡಂ, ಥೈಲ್ಯಾಂಡ್‌ ಪಟುಗಳ ಲೈಟ್‌ ವಿಂಡ್‌ ಕೈಟ್‌, ಫಿಶ್‌ ಡೆಲ್ಟಾ, ಡಾಲ್ಫಿನ್‌ ಮತ್ತಿತರಪತಂಗಗಳು ಕಣ್ಮನ ಸೆಳೆದವು. ಮಧ್ಯಾಹ್ನ ಮೂರು ಗಂಟೆ ನಂತರ ಸ್ವಲ್ಪ ಮಟ್ಟಿಗೆ ಗಾಳಿ ಬೀಸಲು ಆರಂಭಿಸಿದ್ದರಿಂದ ಒಂದೊಂದೇ ಪಟಗಳು ಮೆಲೇರಲು ಆರಂಭಿಸಿದವು. ಆದರೆ ಸಂಜೆಯಾಗುತ್ತಿದ್ದಂತೆ ಗಾಳಿಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಪಟಗಳು ಮೇಲೇರಲಿಲ್ಲ. ಇದರಿಂದ ಜನರಿಗೆ ಕೊಂಚ ನಿರಾಸೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next