Advertisement
ದೇಶದ ವಿವಿಧ ಭಾಗಗಳಿಂದ 30-35 ಮಂದಿ ವೃತ್ತಿಪರ ಗಾಳಿಪಟ ವಿನ್ಯಾಸಗಾರರು ಆಗಮಿಸಿದ್ದು, ಆಸಕ್ತರಿಗೆ ಗಾಳಿಪಟ ತಯಾರಿ ಬಗ್ಗೆ ತರಬೇತಿಯನ್ನೂ ನೀಡಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ನಗರಸಭೆಯ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಸ್ವಾಗತಿಸಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ವಂದಿಸಿದರು. 110 ಅಡಿ ಉದ್ದದ ನಾಗನ ಹೋಲುವ 3ಡಿ ಗಾಳಿಪಟ, ಚಾರ್ಲಿ ಚಾಪ್ಲಿನ್ ಹೋಲುವ ಗಾಳಿಪಟ ಬಾನಂಗಳದಲ್ಲಿ ರಾರಾಜಿಸಿದವು.ಬಾನಂಗಳದಲ್ಲಿ ಚಿತ್ತಾರ
ಒಮ್ಮೆ ಒಂದರ ಸನಿಹ ಇನ್ನೊಂದು ಓಡಿ ಬಂದು ಮುತ್ತಿಕ್ಕಿದಂತೆ, ಇನ್ನೊಮ್ಮೆ ದೂರ ಚದುರಿ ಒಬ್ಬಂಟಿಯಾದಂತೆ… ಮತ್ತೂಮ್ಮೆ ನೂರಾರು ಪಟಗಳು ಒಂದಾಗಿ ಕಡಲಿನಿಂದ ಮೇಲೆದ್ದ ಮೀನಿನ ರಾಶಿಯಂತೆ… ಕಡಲ ಗಾಳಿಗೆದುರಾಗಿ ಮೇಲೇರುವ ತವಕ. ಆಕಾಶವೆಲ್ಲ ಬಣ್ಣದ ಚಿತ್ತಾರ. ಪಟಪಟ ಸದ್ದು. ನಯನ ಮನೋಹರ ದೃಶ್ಯಕ್ಕೆ ಸಾಕ್ಷಿಯಾಗಿ ಸಾಗರ ತಟದಲ್ಲಿ ಸೇರಿದ್ದ ಸಹಸ್ರ ಜನತೆಯಿಂದ ಉದ್ಘಾರ. 80 ಅಡಿ ವ್ಯಾಸದ “ರಿಂಗ್ ಕೈಟ್ಸ್’ನಿಂದ ಹಿಡಿದು ಅಂಗೈಯಷ್ಟು ಪುಟ್ಟದಾದ ಗಾಳಿಪಟಗಳು ಉತ್ಸವಕ್ಕೆ ಮೆರುಗು ತಂದವು.