Advertisement

ಅಡುಗೆ ಮನೆ ಮಾತ್ರ ಯಾವಾಗಲೂ ಓಪನ್‌…!

07:14 PM Oct 14, 2020 | Suhan S |

ಕೋವಿಡ್‌-19 ಪ್ಯಾಂಡೆಮಿಕ್‌ನಲ್ಲಿ ಬಹುಮುಖ್ಯವಾದದ್ದು “ಅಡುಗೆಮನೆ’ಗೆ ಸಂಬಂಧಿಸಿದ ವಿಷಯಗಳು. ನಮ್ಮ ದೇಶದಲ್ಲಿ, ಮನೆಯ ಸದಸ್ಯರೆಲ್ಲರ ಆಹಾರ-ಆರೋಗ್ಯಕುರಿತ ಜವಾಬ್ದಾರಿ ಮಹಿಳೆಯದ್ದೇ. ಮಕ್ಕಳಿಗೆ – ವೃದ್ಧರಿಗೆ ಜ್ವರ-ಕಾಯಿಲೆಯಂತಹ ಸಂದರ್ಭದಲ್ಲಿ ಏನು ನೀಡಬೇಕು, ಸಕ್ಕರೆಕಾಯಿಲೆಯವರಿಗೆ ಯಾವ ರೀತಿಯ ಆಹಾರ, ಬಿ.ಪಿ.ಯಿದ್ದರೆ ಏನೇನು ಎಚ್ಚರಿಕೆವಹಿಸಬೇಕು ಎಂಬುದೆಲ್ಲವೂ ನಿರ್ಧಾರವಾಗುವುದು ಅಡುಗೆಮನೆಯಲ್ಲಿ. ಇಷ್ಟೆಲ್ಲಾ ಮಾಡಿದ್ದಕ್ಕೆ ಆ ಗೃಹಿಣಿಗೆ ಪ್ರಶಂಸೆ ಅಥವಾ ಮೆಚ್ಚುಗೆ ಸಿಗುವ ಸಂದರ್ಭಗಳು ಕಡಿಮೆಯೇ.

Advertisement

ಇತಿಹಾಸದುದ್ದಕ್ಕೂ ಗಮನಿಸಿ ನೋಡಿದರೆ, ಯುದ್ಧ – ಪ್ರಕೃತಿ ವಿಕೋಪ- ಸಾಂಕ್ರಾಮಿಕ ರೋಗ ಅಮರಿಕೊಂಡಂಥ ಸಂದರ್ಭಗಳಲ್ಲೆಲ್ಲಾ, ಮಹಿಳೆಯರು ತಮ್ಮ ಸಮಚಿತ್ತ-ಜಾಣ್ಮೆಕಾದುಕೊಂಡು ಅಡುಗೆಯ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದ ಉದಾಹರಣೆಗಳಿವೆ. ಮಳೆಗಾಲ ಜೋರಾಗಿ, ಪ್ರವಾಹಗಳ ಭೀತಿಯಲ್ಲಿ ಬದುಕುವ ಜನರು ಹಲಸಿನ ಹಪ್ಪಳ, ಉಪ್ಪಿನಕಾಯಿ, ಸಂಡಿಗೆ, ಚಟ್ನಿಗಳಲ್ಲಿ, ತರಕಾರಿಗಳಿಲ್ಲದೇಕೆಲವು ತಿಂಗಳುಗಳೇ ಕಳೆಯುವುದುಕರಾವಳಿ ಪ್ರದೇಶಗಳಲ್ಲಿ ಇಂದಿಗೂ ರೂಢಿಯೇ. ಬಂಗಾಲ, ಬಿಹಾರ, ಒಡಿಶಾಗಳಲ್ಲಿ ತರಕಾರಿ ಪಲ್ಯಗಳಲ್ಲಿ ಗಸಗಸೆಯ ಬೀಜಗಳನ್ನು ಉದುರಿಸುವ ರೂಢಿ ಆರಂಭವಾದದ್ದೂ ಹೀಗೆಯೇ. ಕಷ್ಟಕಾಲ ಜೊತೆಯಾದಾಗಲ್ಲೆಲ್ಲಾ ಗಸಗಸೆ ಬೆಳೆಯುವ ಜಮೀನುಗಳಲ್ಲಿಕೆಲಸ ಮಾಡುತ್ತಿದ್ದ ಮಹಿಳೆಯರು, ಅಲ್ಲಿ ಸಿಗುತ್ತಿದ್ದ ಗಸಗಸೆಯಲ್ಲಿ ಸ್ವಲ್ಪವನ್ನು ತಮ್ಮಊಟದ ಬಾಕ್ಸ್ ಗೆ ಹಾಕಿಕೊಂಡು, ಮನೆಗೆ ಕೊಂಡೊಯ್ದು, ಅದನ್ನು ಪಲ್ಯದಲ್ಲಿ ಸೇರಿಸುತ್ತಿದ್ದರು. ಇದು ಪಲ್ಯದ ರುಚಿಯನ್ನು ಹೆಚ್ಚಿಸುತ್ತಿತ್ತು. ಮಾತ್ರವಲ್ಲ, ದೇಹವನ್ನು ತಂಪಾಗಿಡುತ್ತಿತ್ತು.

ಕೋವಿಡ್ ದಂತಹ ಸಮಯದಲ್ಲಿ ಹೆಚ್ಚಿನಕೆಲಸವಿದ್ದದ್ದು – ಬೆಳೆಯನ್ನು ಬೆಳೆಯುವ ರೈತ, ಅಡುಗೆ ಮಾಡುವ ಮಹಿಳೆ, ಈ ಇಬ್ಬರಿಗೆ ಮಾತ್ರ. ಇವೆರಡೂ ಅಗತ್ಯವಾದ, ಪ್ರತಿಯೊಬ್ಬರೂ ಕಲಿಯಲೇಬೇಕಾದ ಜೀವನಕೌಶಲಗಳು ಎಂಬುದನ್ನು ಇಂಥ ಸಂದರ್ಭಗಳು ದೃಢಪಡಿಸುತ್ತವೆ. ಒಬ್ಬ ಶಿಕ್ಷಕಿಯ ಅನುಭವ ಹೀಗಿದೆ- “ನನಗೆ ಮೊದಲಿನಿಂದಲೂ ಅಡುಗೆ ಮಾಡುವುದು ಎಂದರೆ ಬೇಜಾರು. ಮದುವೆಯಾದ ಮೇಲೂ ಅಡುಗೆಯವರನ್ನಿಟ್ಟುಕೊಂಡಿದ್ದೆ. ಈಗ ಯಾರೂ ಇಲ್ಲ. ಮೂರು ಹೊತ್ತು ಅಡುಗೆ ಮಾಡುವುದು ತುಂಬಾ ಒತ್ತಡ ತರುತ್ತದೆ. ಮೂರು ಎಕ್ಸ್‌ಟ್ರಾಕ್ಲಾಸ್‌ ಬೇಕಾದ್ರೂ ತೆಗೆದುಕೊಳ್ಳಬಹುದು. ಆದರೆ ಮೂರು ಹೊತ್ತು ಅಡುಗೆ ಮಾಡಲಾರೆ…’.

ಯಾವಾಗಲಾದರೊಮ್ಮೆ ಹವ್ಯಾಸಕ್ಕೆಂದು ಅಡುಗೆ ಮಾಡುವುದಕ್ಕೂ, ದಿನದ ಮುಖ್ಯಕಾರ್ಯವಾಗಿ ಅಡುಗೆ ಮಾಡುವುದಕ್ಕೂ ವ್ಯತ್ಯಾಸವಿದೆ. ಅದರಲ್ಲಿಯೂ ಊಟದ ನಂತರ ಎಲ್ಲವನ್ನೂ ಮುಚ್ಚಿಡುವ, ಪಾತ್ರೆ ತೊಳೆಯುವ, ಉಳಿದಊಟವನ್ನು ವ್ಯರ್ಥವಾಗದಂತೆ ತೆಗೆದಿಡುವಕೆಲಸ ಮತ್ತೂ ತಲೆನೋವಿನದು.16 ವರ್ಷದ ಒಬ್ಬ ಬಾಲಕಿ ಹೇಳಿದ ಉಪಾಯ ಇದು: “ನಮ್ಮ ಮನೆಯಲ್ಲಿ ನಾವು ಕೆಲಸವನ್ನು ಹಂಚುತ್ತೇವೆ. ನನ್ನಮ್ಮ ವಿಶಿಷ್ಟ ರುಚಿಯ ಸಬ್ಜಿ ಮಾಡುತ್ತಾಳೆ. ಅಪ್ಪ ಹಿಟ್ಟನ್ನು ನಾದಿ ಕೊಟ್ಟರೆ, ನಾನು ರೋಟಿ ಮಾಡುತ್ತೇನೆ. ಪಾತ್ರೆ ತೊಳೆಯುವ ಕೆಲಸವನ್ನು ನನ್ನ ತಮ್ಮ ವಹಿಸಿಕೊಳ್ಳುತ್ತಾನೆ. ಹೀಗೆ ಕೆಲಸ ಹಂಚಿಕೊಳ್ಳುವ ಮೂಲಕ ನಾವು ಅಮ್ಮನ ಆರೋಗ್ಯದ ಜೊತೆ ನಮ್ಮ ಆರೋಗ್ಯವನ್ನೂ ಕಾಪಾಡಿಕೊಂಡಿದ್ದೇವೆ.

 

Advertisement

ಡಾ. ಕೆ.ಎಸ್‌. ಪವಿತ್ರ

Advertisement

Udayavani is now on Telegram. Click here to join our channel and stay updated with the latest news.

Next