ಬಜಪೆ: ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ ಬ್ಯಾಂಕಿನ ಕಾರ್ಯಕ್ಷೇತ್ರದ 14 ಗ್ರಾಮಗಳ 30 ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್,ಮಾಸ್ಕ್,ಸ್ಯಾನಿಟೈಸರನ್ನು ಬಜಪೆ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಮಾತನಾಡುತ್ತಾ,ಕೊರೊನಾ ವೈಸರ್ ಹರಡದಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸಿದ ಆಶಾಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯವಾಗಿದೆ.ಸರಕಾರದ ಆರೋಗ್ಯದ ಮಾರ್ಗಸೂಚಿಯನ್ನು ಪಾಲಿಸಿದಾಗ ರೋಗ ತಡೆಗಟ್ಟುವಲ್ಲಿ ಸಾಧ್ಯ ಎಂದು ಹೇಳಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ,ಬ್ಯಾಂಕ್ ತನ್ನ ಕಾರ್ಯಕ್ಷೇತ್ರದದ ಶೈಕ್ಷಣಿಕ,ಸಾಮಾಜಿಕ,ಸಾಂಸ್ಕೃತಿಕ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.ಆಶಾ ಕಾರ್ಯಕರ್ತೆಯರು ಜನರ ಆರೋಗ್ಯ ದೃಷ್ಟಿಯಿಂದ ಕೊರೊನಾ ವಿರುದ್ಧ ದಿನರಾತ್ರಿ ದುಡಿದಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಆಹಾರ ಕಿಟ್‌ವಿತರಿಸಲಾಗುತ್ತದೆ.ಬ್ಯಾಂಕ್ ವತಿಯಿಂದ ಮುಖ್ಯ ಮಂತ್ರಿ ಕೊರೊನಾ ಫಂಡ್‌ಗೆ 5.10ಲಕ್ಷ ರೂಪಾಯಿಯನ್ನು ದೇಣಿಗೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನವೋದಯ ಪ್ರೇರಕರಿಗೆ,ಮೂವರು ಪರ್ತಕರ್ತರಿಗೆ ಆಹಾರ ಕಿಟ್,ಮಾಸ್ಕ್ ಹಾಗೂ ಸ್ಯನಿಟೈಸರ್ ,ಬಜಪೆ ಪೊಲೀಸ್‌ರಿಗೆ ಪೊಲೀಸ್ ಠಾಣೆಗೆ ತೆರಳಿ ಮಾಸ್ಕ್ ಹಾಗೂ ಸ್ಯನಿಟೈಸರ್‌ನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಸಂತ,ನಿರ್ದೇಶಕರಾದ ಡೆನ್ನಿಸ್ ಡಿ’ಸೋಜ ,ಸ್ಟೇನಿ ಡಿ’ಸೋಜ,ರಿತೇಶ್ ಶೆಟ್ಟಿ,ಮಹಮದ್ ಶರೀಫ್,ಗೀತಾ ಅಮೀನ್,ಗೀತಾ ಕೆ.,ಮೋಹನ್ ಅಮೀನ್,ಭಾಸ್ಕರ ಮಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ವ್ಯವಸ್ಥಾಪಕ ರಾಜೇಂದ್ರ ಪ್ರಸಾದ್ ಅವರು ಕಾರ್ಯಕ್ರಮ ನಿರೂಪಿಸಿದರು.